ಕಲ್ಯಾಣ ಕರ್ನಾಟಕದ ಜನತೆಯ ಹೃದಯದಲ್ಲಿ ದೇವರಾಗಿ ಕಂಗೋಳಿಸಿದವರು ದಿವಂಗತ ಶ್ರೀ ಮಹಾದೇವಪ್ಪ ರಾಂಪೂರೆಯವರು ಅಮರನಾಥ ತಳವಡೆ

ಕಲ್ಯಾಣ ಕರ್ನಾಟಕದ ಜನತೆಯ ಹೃದಯದಲ್ಲಿ ದೇವರಾಗಿ ಕಂಗೋಳಿಸಿದವರು ದಿವಂಗತ ಶ್ರೀ ಮಹಾದೇವಪ್ಪ ರಾಂಪೂರೆಯವರು ಅಮರನಾಥ ತಳವಡೆ

ಕಲ್ಯಾಣ ಕರ್ನಾಟಕದ ಜನತೆಯ ಹೃದಯದಲ್ಲಿ ದೇವರಾಗಿ ಕಂಗೋಳಿಸಿದವರು ದಿವಂಗತ ಶ್ರೀ ಮಹಾದೇವಪ್ಪ ರಾಂಪೂರೆಯವರು : ಅಮರನಾಥ ತಳವಡೆ

ಕಲಬುರ್ಗಿ:ಕಲ್ಯಾಣ ಕರ್ನಾಟಕದ ಜನತೆಯ ಬಾಳು ಬೆಳಗಿದ ನಿಜವಾದ ದೇವಾಲಯವೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಆ ದೇವಾಲಯದ ಪರಮ ಪವಿತ್ರ ದೇವರ ಸ್ಥಾನದಲ್ಲಿರುವ ದೇವರೆ ದಿವಂಗತ ಮಹಾದೇವಪ್ಪ ರಾಂಪೂರೆಯವರು ಎಂದು ಸಂಸ್ಥೆಯ ಹಳೆಯ‌ ವಿದ್ಯಾರ್ಥಿ ಹಾಗೂ ನಿವೃತ್ತ ಐ ಎ ಎಸ್ ಅಧಿಕಾರಿ ಅಮರನಾಥ ತಳವಡೆ ಹೇಳಿದರು

ಅವರು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಮಹಾದೇವಪ್ಪ ರಾಂಪೂರೆಯವರ 105 ನೇಯ ಜನ್ಮದಿನೋತ್ಸವದ ನಿಮಿತ್ತ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಗಳಿಗೆ ಹಾಗೂ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

1950 ರ ದಶಕದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ತೀವ್ರ ಶೈಕ್ಷಣಿಕ ಹಿಮ್ಮುಖತೆಯನ್ನು ಎದುರಿಸುತ್ತಿತ್ತು, ಈ ಪ್ರದೇಶದಲ್ಲಿ ಶಾಲೆಗಳ ಕೊರತೆ, ಕಡಿಮೆ ಸಾಕ್ಷರತೆ,ಸ್ಥಳಿಯ ಭಾಷೆಯಲ್ಲಿನ ಶಿಕ್ಷಣ ಮರಿಚಿಕೆಯಾಗಿತ್ತು, ಮುಂಬೈ, ಮೈಸೂರು ಕರ್ನಾಟಕ ಭಾಗಗಳಲ್ಲಿ ನೂರಾರು ಕನ್ನಡ ಶಾಲೆಗಳಿದ್ದ ಕಾಲದಲ್ಲಿ ಈ ಭಾಗದಲ್ಲಿ ಬೆರಳಿಣಿಕೆಯಷ್ಟು ಶಾಲೆಗಳು ಇದ್ದವು, ಸಮಾಜದಲ್ಲಿನ ಪ್ರಭುತ್ವದ ಕೊರತೆ ಮತ್ತು ಹಿಂದುಳಿದ ಆರ್ಥಿಕ ವ್ಯವಸ್ಥೆಯಿಂದಾಗಿ ಗ್ರಾಮೀಣ ಜನರಲ್ಲಿ ಶಿಕ್ಷಣದ ಬಗ್ಗೆ ಅರಿವು ಕಡಿಮೆ ಇತ್ತು ಇಂತಹ ಶೈಕ್ಷಣಿಕ ಅಂಧಕಾರದಲ್ಲಿ ಮುಳುಗಿದ್ದ ಈ ಪ್ರದೇಶದಲ್ಲಿ ಶೈಕ್ಷಣಿಕ ದೀಪವಾಗಿ ಶೈಕ್ಷಣಿಕ ಕ್ರಾಂತಿ ಮಾಡಿ ಈ ಭಾಗದ ಜನರ ಬಾಳು ಬೆಳಗಿದ್ದು ಹೈ ಕ ಶಿಕ್ಷಣ ಸಂಸ್ಥೆ ಎಂದು ಹೇಳಿದರು. 1982 ರಲ್ಲಿ ಬೀದರ್ ಜಿಲ್ಲೆಯ ಕುಗ್ರಾಮದಿಂದ ಬಂದು ನಾನು ಈ ಶಿಕ್ಷಣ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ ಆ ಸಂದರ್ಭದಲ್ಲಿ ಕಲಬುರ್ಗಿಯಲ್ಲಿ ಯಾವುದೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ಇರಲಿಲ್ಲ ಇಲ್ಲಿಯ ಜನರಿಗೆ ಇದರಲ್ಲಿ ಆಸಕ್ತಿಯು ಇರಲಿಲ್ಲ ಇಂತಹ ವಾತಾವರಣ ಸಂದರ್ಭದಲ್ಲಿ ಈ ಸಂಸ್ಥೆಯ ನಮಗಿಂತ ಹಿರಿಯ ವಿದ್ಯಾರ್ಥಿಯಾಗಿದ್ದ ರಾಘವೇಂದ್ರ ಔರಾದ್ಕರ್ ಅವರು ಸಹ ನನ್ನ ಹಾಗೆ ಒಂದು ಕುಗ್ರಾಮದಿಂದ ಬಂದು ಯಪಿಎಸ್ಸಿ ಪರೀಕ್ಷೆ ಎದುರಿಸಿ ಈ ಭಾಗದ ಮೊದಲ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಇವರಿಂದ ಪ್ರಭಾವಿತನಾದ ನಾನು ಸಹ ಯುಪಿಎಸ್ಸಿ ಪರೀಕ್ಷೆ ಎದುರಿಸಿ ಐ ಎ ಎಸ್ ಪರೀಕ್ಷೆ ಪಾಸಾಗಿ ಸುಮಾರು 35 ವರ್ಷಗಳ ಕಾಲ ದೇಶದ ವಿವಿಧ ರಾಜ್ಯಗಳಲ್ಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಡಳಿತ ಸೇವೆ ಸಲ್ಲಿಸಿದೆ ಇದಕ್ಕೆ ಕಾರಣ ಈ ಸಂಸ್ಥೆ ಎಂದು ಹೆಮ್ಮೆಯಿಂದ ಹೇಳಿದರು ಈ ಭಾಗದಲ್ಲಿ ದಿವಂಗತ ಮಹಾದೇವಪ್ಪ ರಾಂಪೂರೆ ಎಂಬ ದೇವರು ಈ ಸಂಸ್ಥೆ ಸ್ಥಾಪನೆ ಮಾಡದಿದ್ದರೆ ನನ್ನಂತ ಲಕ್ಷಾಂತರ ವಿದ್ಯಾರ್ಥಿಗಳ ಬಾಳು ಬೆಳಗುವಂತಾಯಿತು ಎಂದು ಹೇಳಿದರು.

ರಾಂಪೂರೆಯವರು ಈ ಭಾಗದಲ್ಲಿ ಶೈಕ್ಷಣಿಕ ಸಂಸ್ಥೆ ಸ್ಥಾಪನೆ ಮಾಡದಿದ್ದರೆ ಈ ಭಾಗದ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಹಾಗೂ ವೈದ್ಯಕಿಯ ಶಿಕ್ಷಣ ಗಗನ ಕುಸುಮವಾಗುತ್ತಿತ್ತು ಎಂದು ಯಶೋದಾ ಸೂಪರ್. ಸ್ಪೇಷಾಲಿಟಿ ಆಸ್ಪತ್ರೆಯ ಸ್ಥಾಪಕರು ಪ್ರಖ್ಯಾತ ವೈದ್ಯರಾದ ಡಾ ಬಸವರಾಜ ಕೋಳುರ ಹೇಳಿದರು. ಅಂದು ಈ ಭಾಗದಲ್ಲಿ ಶಿಕ್ಷಣ ಎಂಬ ಬೀಜವನ್ನು ರಾಂಪೂರೆಯವರು ಬಿತ್ತಿದರು ಅದು ಇಂದು ಹೆಮ್ಮರವಾಗಿ ಬೆಳೆದು ಶೈಕ್ಷಣಿಕ ಕ್ಷೇತ್ರದ ಎಲ್ಲ ವಿಭಾಗಗಳನ್ನು ಹೊಂದಿದೆ ಎಂದು ಹೇಳಿದರು. ರಾಂಪೂರೆಯವರು 1963 ರಲ್ಲಿ ಎಂ ಆರ್ ಎಂ ಸಿ ವೈಧ್ಯಕಿಯ ಕಾಲೇಜು ಸ್ಥಾಪನೆ ಮಾಡಿದ್ದಾರ ಫಲವಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಸುಲಭವಾಗಿ ವೈದ್ಯಕೀಯ ಶಿಕ್ಷಣ ದೇಶ ವಿದೇಶಗಳಿ ಪ್ರಖ್ಯಾತ ವೈದ್ಯರನ್ನು ನೀಡುವಂತಾಯಿತು ಎಂದು ಹೇಳಿದರು. ಈ ಕಾಲೇಜು ಇರದಿದ್ದರೆ ನಾನು ಸಹ ವೈದ್ಯನಾಗಿರುತ್ತಿರಲಿಲ್ಲ ಎಂದು ಅಭಿಪ್ರಾಯ ಪಟ್ಟರು. ಈ ಶಿಕ್ಷಣ ಸಂಸ್ಥೆಯನ್ನು ಇಷ್ಟು ಎತ್ತರಕ್ಕೆ ಬೆಳೆಸಲು ಕಾರಣರಾದ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಗಳನ್ನು ಹಾಗೂ ಸಂಸ್ಥೆಯ ಹೆಸರನ್ನು ರಾಜ್ಯ ಮಟ್ಟದಲ್ಲಿ ಗುರುತಿಸಲು ಕಾರಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿರುವದು ಸ್ತುತ್ಯಾರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನೋಬ್ಬ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಮಕ್ಕಳ ತಜ್ಞ ಡಾ ವೀರಭದ್ರಪ್ಪ ಮಾತನಾಡಿ ಈಗೀನ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿಯವರ ದೂರದೃಷ್ಟಿ ಹಾಗೂ ಅಭಿವೃದ್ಧಿ ಪರ ನೀಲುವಿನಿಂದಾಗಿ ಬಸವೇಶ್ವರ ಆಸ್ಪತ್ರೇಯು ಇಂದು ಮಲ್ಟೀ ಸ್ಪೇಷಾಲಿಟಿಯ ಸೂಪರ್ ಆಸ್ಪತ್ರೆ ಯಾಗಿ ಪರಿವರ್ತನೆ ಹೊಂದುತ್ತಿದೆ ಎಂದು ಅಭಿಪ್ರಾಯ ಪಟ್ಟರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ ಮಾತನಾಡಿ ಶಿಕ್ಷಕರ ನಿಸ್ವಾರ್ಥ ಸೇವೆ, ಸಮರ್ಪೀತ ಮನೋಭಾವವೆ ಇಂದು ಈ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ. ರಾಂಪೂರೆಯವರು ಈ ಭಾಗದ ಶೈಕ್ಷಣಿಕ ಕ್ರಾಂತಿಯ ಶಿಲ್ಪಿ , ಸ್ವಾತಂತ್ರ್ಯ ಹೋರಾಟಗಾರ ಎಂದು ತಮ್ಮ ಅಜ್ಜನವರ ಜೋತೆ ಅವರ ಸ್ನೇಹ ಸಂಬಂಧ ಕುರಿತು ತಮ್ಮ ಬಾಲ್ಯದ ಜೀವನ ನೆನಪಿಸಿಕೊಂಡರು ನಾನು ಸಹ ಈ ಸಂಸ್ಥೆಯ ಹಳೆಯ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭೀ ಭೀಮಳ್ಳಿ ,ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಉಪಸ್ಥೀತರಿದ್ದರು

ಇದೆ ಸಂದರ್ಭದಲ್ಲಿ ಈ ಬಾರಿಯ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಸಂಸ್ಥೆಯ ವಿ ಜಿ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸೃಷ್ಠೀ ಮಲ್ಲಿನಾಥ ಪಾಟೀಲ ಹಾಗೂ ಜಿಲ್ಲೆಯಲ್ಲಿ ಅಗ್ರ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ 91 ಜನರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಕ್ವಾಲಿಟಿ ಅಶೂರೇನ್ಸ ಸೆಲ್ ನ ಸಂಚಾಲಕರಾದ ಡಾ ಉಮಾ ರೇವೂರ ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳ್ಳಿ ಸ್ವಾಗತಿಸಿದರು, ಡಾ ಮಹೇಶಕುಮಾರ್ ಗಂವ್ಹಾರ ಕಾರ್ಯಕ್ರಮ ನಿರೂಪಿಸಿದರು ಡಾ ಶರಣಬಸಪ್ಪ ಹರವಾಳ ವಂದಿಸಿದರು.