ನಾಗರಾಳ ಜಾಲಾಶಯದ ದಂಡೆಯ ಮೇಲೆ ಆರ್ ಡಿ ಪಿ ಆರ್ ಇಲಾಖೆ ಯೋಗ ದಿನ ಆಚರಣೆ ನಡೆಸಿತ್ತು
ನಾಗರಾಳ ಜಾಲಾಶಯದ ದಂಡೆಯ ಮೇಲೆ ಆರ್ ಡಿ ಪಿ ಆರ್ ಇಲಾಖೆ ಯೋಗ ದಿನ ಆಚರಣೆ ನಡೆಸಿತ್ತು
ಚಿಂಚೋಳಿ : ತಾಲೂಕಿನಾದ್ಯಂತ ವಿಶ್ವ ಯೋಗ ದಿನಾಚರಣೆಗಳು ಯಶಸ್ವಿಯಾಗಿ ಜರುಗಿದವು. ತಾಲೂಕಿನ ನಾಗರಾಳ ಜಾಲಾಶೆಯ ದಂಡೆಯ ಮೇಲೆ ಜಿಲ್ಲಾ ಪಂಚಾಯತ್ ಕಲಬುರಗಿಯ ಚಿಂಚೋಳಿ ತಾಲೂಕ ಪಂಚಾಯತ್ ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮತ್ತು ಚಿಮ್ಮನಚೋಡ್ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರೇಯದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಒ ಸಂತೋಷಕುಮಾರ ಚವ್ಹಾಣ ಅವರ ಅಧ್ಯಕ್ಷತೆವಹಿಸಿ ಪಾಲ್ಗೊಂಡಿದರು. ನರೇಗಾ ಯೋಜನೆ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ಕೆರೋಳ್ಳಿ,ಚಿಮ್ಮನಚೋಡ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಬುರಾವ ಚವ್ಹಾಣ, ಕಾರ್ಯದರ್ಶಿ ಜಗನಾಥರೆಡ್ಡಿ ತುಮಕುಂಟ ಅವರು ಯೋಗದಲ್ಲಿ ಭಾಗವಹಿಸಿದರು.
ಬಳಿಕ ಇಒ ಸಂತೋಷಕುಮಾರ ಮಾತನಾಡಿ, ಕೆಲಸದ ಹಾಗೂ ಮನಸ್ಸಿನ ಮೇಲೆ ಬೀಳುವ ಒತ್ತಡ ಕಳೆಯಲು ಎಲ್ಲರೂ ಯೋಗವನ್ನು ಮುಂಜಾನೆಯ ದಿನನಿತ್ಯದ ಕಾರ್ಯಗಳ ಜೀವನದಲ್ಲಿ ಅಳವಡಿಸಬೇಕು. ಇದರಿಂದ ದೇಹದ ಉತ್ತಮ ಆರೋಗ್ಯ ಕಾಪಾಡುವುದರ ಜತೆಗೆ ಶರೀರದ ಕಾಂತಿಯು ಹೊಳೆಯುತ್ತದೆ. ಕೆಲಸ ಕಾರ್ಯಗಳು ಮಾಡಲು ಏಕಾಗ್ರತೆ ನೀಡುವುದರೊಂದಿಗೆ ಒತ್ತಡ ಕಡಿಮೆಗೊಳುಸುತ್ತದೆ. ಹೀಗಾಗಿ ಎಲ್ಲರೂ ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನ್ಯಾಯಾಲಯ ಆವರಣದಲ್ಲಿ ಯೋಗ ದಿನ ಆಚರಣೆ : ಚಿಂಚೋಳಿ ತಾಲೂಕ ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘ ಮತ್ತು ಚಿಂಚೋಳಿ ಪುರಸಭೆ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಈ ಆಚರಣೆಯಲ್ಲಿ ನ್ಯಾಯಾಲಯದ ನ್ಯಾಯಧೀಶರು, ವಕೀಲರ ಸಂಘದ ಅಧ್ಯಕ್ಷರು, ಪುರಸಭೆ ಕಾರ್ಯಾಲಯದ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ನ್ಯಾಲಯದ ವಕೀಲ ಸದಸ್ಯರು ಮತ್ತು ನ್ಯಾಯಾಲಯದ ಕಛೇರಿ ಸಿಬ್ಬಂದಿಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
