ಹಿರಿಯ ನಾಗರೀಕರ ಪಿಂಚಣಿಯ ಮಂಜೂರಾತಿ ಆದೇಶ ಪತ್ರ ವಿತರಣೆ

ಹಿರಿಯ ನಾಗರೀಕರ ಪಿಂಚಣಿಯ ಮಂಜೂರಾತಿ ಆದೇಶ ಪತ್ರ ವಿತರಣೆ

ಹಿರಿಯ ನಾಗರೀಕರ ಪಿಂಚಣಿಯ ಮಂಜೂರಾತಿ ಆದೇಶ ಪತ್ರ ವಿತರಣೆ

ಕಲಬುರಗಿ: ಒಬ್ಬರ ಭದ್ರತೆ ಮತ್ತು ಆರ್ಥಿಕ ಸ್ವಾವಲಂಬನೆಗೆ ಆಧಾರವಾಗುವ ಪಿಂಚಣಿ (Pension) ಯೋಜನೆ ಮಾಡಿಸುವುದು ಅತ್ಯಂತ ಸಾರ್ಥಕ ಕೆಲಸ. ಹಿರಿಯರು, ನಿರ್ಗತಿಕರು ಅಥವಾ ತಮ್ಮ ಸೇವೆಯಿಂದ ನಿವೃತ್ತರಾದವರಿಗೆ ಆರ್ಥಿಕ ನೆಮ್ಮದಿ ನೀಡುವ ಈ ಕೆಲಸ ಸಾರ್ಥಕ ಮನೋಭಾವದ ಕೆಲಸವಾಗಿದೆ ಎಂದು ಗುಂಡಗುರ್ತಿ ಗ್ರಾಮ ಪಂಚಾಯತ ಸದಸ್ಯರಾದ ಸುನೀಲ ಎಂ ಅಮ್ಮಗೋಳ ಅವರು ಮಾತನಾಡಿದರು.

   ಚಿತ್ತಾಪೂರ ತಾಲೂಕಿನ ಗುಂಡಗುರ್ತಿಯಲ್ಲಿ ಗ್ರಾಮ ಪಂ ಅಧ್ಯಕ್ಷರಾದ ಶ್ರೀನಿವಾಸ.ಬಿ.ಬಣ್ಣಕ್ಕಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಹಿರಿಯ ನಾಗರಿಕರಿಗೆ ಪಿಂಚಣಿಯ ಮಂಜೂರಾತಿ ಆದೇಶ ಪತ್ರಗಳನ್ನು ನೀಡಿ ಮಾತನಾಡಿದ ಅವರು,ಸರ್ಕಾರದ ಪಿಂಚಣಿ ಯೋಜನೆಗಳು ಹಿರಿಯ ನಾಗರಿಕರಿಗೆ, ವಿಧವೆಯರಿಗೆ ಅಥವಾ ಅಸಹಾಯಕರಿಗೆ ಆರ್ಥಿಕ ಸುರಕ್ಷತೆ ಒದಗಿಸಿ, ಅವರ ಮುಖದಲ್ಲಿ ನಗು ಮೂಡಿಸುವಂತಹ ಯೋಜನೆ ಇವೆಲ್ಲ ಕೆಲಸಗಳು ನಮ್ಮ ಗ್ರಾಮದಲ್ಲಿ ನಾವು ಮಾಡಿಸುತ್ತಿರುವುದು ನಮ್ಮ ಜೀವನದ ಸಾರ್ಥಕ ಕೆಲಸಗಳಲ್ಲಿ ಒಂದಾಗಿದೆ ಎಂದರು.ಈ ಪಿಂಚಣಿ ಮಂಜೂರಾತಿ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ಇಲ್ಲಿಯವರೆಗೆ ಸುಮಾರು 50 ರಿಂದ 80 ಪಿಂಚಣಿ ನಮ್ಮ ಗುಂಡಗುರ್ತಿ ಗ್ರಾಮದಲ್ಲಿ ಮಾಡಿಸಿರುವುದು ನಮಗೆ ಹೆಮ್ಮೆಯಾಗಿದೆ ಎಂದರು.

         ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂ. ಸದಸ್ಯರಾದ ಗುಂಡುರಾವ ಲಾಳಿ,ಕಾಂಗ್ರೆಸ ಮುಖಂಡರಾದ ಕಲ್ಯಾಣಿ‌ ಹಡಪದ,ಸಿದ್ದಣ್ಣ ಗುತ್ತೇದಾರ,ಶಂಕರ ಪೂಜಾರಿ,ರಾಜು‌ ಕೋಣಿನ್,ಶಾಮರಾವ ಖಂಡ್ರೆ,ಸಾಯಬಣ್ಣ ಗೋಗಿ,ಸಿದ್ದು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.