ಸಚಿವರಾಗಿ ದರ್ಶನಾಪುರ ಮುಂದುವರೆಯಲಿ : ಬಸ್ಸುಗೌಡ ಬಿಳ್ಹಾರ
ಸಚಿವರಾಗಿ ದರ್ಶನಾಪುರ ಮುಂದುವರೆಯಲಿ : ಬಸ್ಸುಗೌಡ ಬಿಳ್ಹಾರ
ಯಾದಗಿರಿ :ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಹಾಗೂ ಯುವಕರ ನಾಡಿ ಮಿಡಿತ ಅರಿತ ಅಜಾತಶತ್ರು ಎಂದೇ ಕರೆಯಲ್ಪಡುವ ಶರಣಬಸಪ್ಪ ದರ್ಶನಾಪುರ ಅವರನ್ನು ಸಚಿವರನ್ನಾಗಿ ಮುಂದುವರೆಸುವಂತೆ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ನಾಯಕರಿಗೆ ಹಾಗೂ ನೂತನ ಮುಖ್ಯಮಂತ್ರಿ ಆಗಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡುವೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರ.ಕಾ ಬಸ್ಸುಗೌಡ ಬಿಳ್ಹಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾದಗಿರಿ ಜಿಲ್ಲೆಯಲ್ಲಿ ನೀರಾವರಿ ಸೇರಿದಂತೆ ಹತ್ತು ಹಲವು ಜನಪರ, ರೈತರ ಪರ ಯೋಜನೆಗಳನ್ನು ತರುವ ಮೂಲಕ ಅಭಿವೃದ್ಧಿ ಕಾಮಗಾರಿಗಳ ರೂವಾರಿಯಾಗಿರುವ ಶರಣಬಸಪ್ಪ ದರ್ಶನಾಪುರ ಅವರನ್ನು ಸಚಿವ ಸಂಪುಟದಿಂದ ಯಾವುದೇ ಕಾರಣಕ್ಕೂ ಕೈ ಬಿಡದೆ ಪಕ್ಷದ ವರಿಷ್ಠರು ದರ್ಶನಾಪುರ ಅವರನ್ನೇ ಸಚಿವರನ್ನಾಗಿ ಮುಂದುವರೆಸುವಂತೆ ಆಗ್ರಹಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಚುನಾವಣೆ ಸಮಯದಲ್ಲಿ ಯುವಕರನ್ನು ಉತ್ಸಾಹದಿಂದ ಕಂಡು ನಮ್ಮೆಲ್ಲರ ಶ್ರೇಯಸ್ಸನ್ನು ಬಯಸಿದ ಶಹಾಪುರ ಕ್ಷೇತ್ರದ ಶಾಸಕರಾಗಿ ಅನೇಕ ಕ್ರಿಯಾಶೀಲ ಕಾರ್ಯಗಳನ್ನು ಮಾಡಿರುವ ದರ್ಶನಾಪುರ ಅವರನ್ನು ಸಚಿವರ ಸ್ಥಾನದಲ್ಲೇ ಉಳಿಸಿಕೊಂಡು ಮುಂದುವರೆಸಬೇಕೆಂದು ಬಸ್ಸುಗೌಡ ತಿಳಿಸಿದ್ದಾರೆ.
