ಮಕ್ಕಳ ನಾಮಕರಣದಲ್ಲಿ ವಚನಾಮೃತ ಪುಸ್ತಕ ವಿತರಣೆ: ಶರಣ ಸಾಹಿತ್ಯವೇ ಜಗತ್ತಿಗೆ ಬೆಳಕು — ಶಾಸಕ ಎಂ.ವೈ. ಪಾಟೀಲ

ಮಕ್ಕಳ ನಾಮಕರಣದಲ್ಲಿ ವಚನಾಮೃತ ಪುಸ್ತಕ ವಿತರಣೆ: ಶರಣ ಸಾಹಿತ್ಯವೇ ಜಗತ್ತಿಗೆ ಬೆಳಕು — ಶಾಸಕ ಎಂ.ವೈ. ಪಾಟೀಲ

ಮಕ್ಕಳ ನಾಮಕರಣದಲ್ಲಿ ವಚನಾಮೃತ ಪುಸ್ತಕ ವಿತರಣೆ: ಶರಣ ಸಾಹಿತ್ಯವೇ ಜಗತ್ತಿಗೆ ಬೆಳಕು — ಶಾಸಕ ಎಂ.ವೈ. ಪಾಟೀಲ

ಕಲಬುರಗಿ : “ಅಜ್ಞಾನ ಮತ್ತು ಅಂಧಕಾರವನ್ನು ದೂರ ಮಾಡಿ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಸಾಹಿತ್ಯವೇ ವಚನ ಸಾಹಿತ್ಯ. ಜಗತ್ತಿಗೆ ಬೆಳಕು ನೀಡಿದ ಶರಣ ಸಾಹಿತ್ಯದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಅತ್ಯಂತ ಶ್ಲಾಘನೀಯ,” ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.

ನಗರದ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಶರಣಗೌಡ ಕಿರಣಗಿ ಅವರ ಮೊಮ್ಮಕ್ಕಳ ನಾಮಕರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಕಾರ್ಯಕ್ರಮಕ್ಕೆ ಆಗಮಿಸಿದ ಶರಣ ಬಂಧುಗಳಿಗೆ “ವಚನಾಮೃತ” ಪುಸ್ತಕ ವಿತರಿಸಿರುವುದು ಮಾದರಿಯ ಕಾರ್ಯವಾಗಿದ್ದು, ಇಂತಹ ಮೌಲಿಕ ಕೃತಿಯನ್ನು ಸಂತೋಷದಿಂದ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.

 ವಿಶ್ರಾಂತ ನಿರ್ದೇಶಕರಾದ ಕೆ.ಎಸ್. ಹಿರೇಮಠ, ಎಂ.ಕೆ. ಪಾಟೀಲ, ಸುರೇಶ ತಿಗಶೆಟ್ಟಿ, ಡಾ. ನಾಗೇಂದ್ರ ಮಸುತಿ, ಅರ್ಚನಾ ಬಸವರಾಜ ಪಾಟೀಲ, ಬಸವರಾಜ ಧೂಳಗುಂಡಿ, ಶಿವರಾಜ ಅಂಡಗಿ ಶರಣಗೌಡ ಕಿರಣಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಕಲ್ಯಾಣಪ್ಪ ಬಿರಾದಾರ ವಚನ ಪ್ರಾರ್ಥನೆ ನೆರವೇರಿಸಿದರು. ಶರಣಗೌಡ ಕಿರಣಗಿ ಸ್ವಾಗತಿಸಿದರು. ಬಸವರಾಜ ಧೂಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಅಂಬುಜಾ ವಂದಿಸಿದರು.

ಶರಣಗೌಡ ಕಿರಣಗಿ ಅವರು ಕಳೆದ 25-30 ವರ್ಷಗಳಿಂದ ದಿ. ಡಾ. ಬಸವರಾಜ ಮೋದಿ ಹುಟ್ಟುಹಾಕಿದ ವಚನೋತ್ಸವ ಕಾರ್ಯಕ್ರಮದ ಕರುಣೇಶ್ವರ ನಗರದ ವಚನೋತ್ಸವ ಸಮಿತಿಯ ಸಂಚಾಲಕರಾಗಿ ಹಾಗೂ ವಚನೋತ್ಸವ ಪ್ರತಿಷ್ಠಾನದ ಕಾರ್ಯಕಾರಿಣಿ ಸದಸ್ಯರಾಗಿ ವಚನ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅವರ ಈ ಕಾರ್ಯ ಶ್ಲಾಘನೀಯವೆಂದು ಕಾರ್ಯಕ್ರಮದಲ್ಲಿ ಪ್ರಶಂಸಿಸಲಾಯಿತು.

ಇಂದಿನ ದಿನಗಳಲ್ಲಿ ನಾಮಕರಣ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಡಿಜೆ, ಮೆರವಣಿಗೆ, ಆಡಂಬರಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸುವ ಬದಲು, ಬಸವಾದಿ ಶರಣರ ವಚನಗಳು, ಲಿಂಗಾಯತ ಧರ್ಮದ ಸೂತ್ರಗಳು ಹಾಗೂ ಜೀವ-ಶಿವ ಬಾಂಧವ್ಯವನ್ನು ವಿವರಿಸುವ ಷಟ್ಸ್ಥಲ ಕಿರುಹೊತ್ತಿಗೆ ಒಳಗೊಂಡ 1000 ಪ್ರತಿಗಳ “ವಚನಾಮೃತ” ಪುಸ್ತಕ ಮುದ್ರಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯರಿಗೆ ಹಾಗೂ ಮಕ್ಕಳಿಗೆ ವಿತರಣೆ ಮಾಡಲಾಯಿತು. 

 ವಚನೋತ್ಸವ ಪ್ರತಿಷ್ಠಾನದ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ , ವಿವೇಕಾನಂದ ಕಿರಣಗಿ, ವಿರೇಶ ದೇಸಾಯಿ, ರಾಜು ಜಗತ್, ಸಚಿನ್ ಹುಗ್ಗಿ, ಸಿದ್ದಲಿಂಗ ಪಾಟೀಲ, ಎಸ್.ಎಸ್. ಪಾಟೀಲ, ವಿವೇಕಾನಂದ ಬುಳ್ಳಾ, ಶ್ರೀಮತಿ ಚೈತ್ರಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.