ಗೋಲ್ಡನ್‍ವ್ಯಾಲಿ ಪ್ರೌಢ ಶಾಲೆಗೆ ಶೇ.100 ಫಲಿತಾಂಶ
ಗೋಲ್ಡನ್‍ವ್ಯಾಲಿ ಪ್ರೌಢ ಶಾಲೆಗೆ ಶೇ.100 ಫಲಿತಾಂಶ
ಕಮಲನಗರ: ಗಡಿಭಾಗದಲ್ಲಿ ಶೈಕ್ಷಣಿಕ ಸಾಧನೆಯಲ್ಲಿ ಸದಾ ಮುಂದಿರುವ ಪ್ರತಿಷ್ಠಿತ ಇಂಟರ್‍ನ್ಯಾಷನಲ್ ಗೋಲ್ಡನ್ ವ್ಯಾಲಿ ಪ್ರೌಢ ಶಾಲೆ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಕ್ರಮಾಂಕ-01ರ ಬೋರ್ಡ್ ಪರೀಕ್ಷೆಯಲ್ಲಿ ಶೇ.100 ರಷ್ಟು ಸಾಧನೆ ಮಾಡುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿಡ ಕೀರ್ತಿ ತನ್ನದಾಗಿಸಿಕೊಂಡಿದೆ.
ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 21 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 7 ವಿದ್ಯಾರ್ಥಿಗಳು ಅಗ್ರಶ್ರೇಣೀಯಲ್ಲಿ, 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಅದರಲ್ಲಿ ವಿದ್ಯಾರ್ಥಿಯಾದ ಓಂಕಾರ ಕೃಷ್ಣ 596 (95.4%) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಅಲ್ಲದೇ ಹಿಂದಿ ವಿಷಯದಲ್ಲಿ 100ಕ್ಕೆ ನೂರು ಅಂಕ ಪಡೆದ 4 ವಿದ್ಯಾರ್ಥಿಗಳು ದಾಖಲೆ ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿಗಳಾದ ಓಂಕಾರ ಕೃಷ್ಣ 596 (95.4%), ಆರಾಧನಾ ಪವನ ಪಾಟೀಲ 594 (95.0%), ರುಷಿಕೇಶ ದಯಾನಂದ 578(92.5%) ರಷ್ಟು ಫಲಿತಾಂಶ ದಾಖಲಿಸಿದ ಮಕ್ಕಳ ಸಾಧನೆ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷೆ ಜಯಶ್ರೀ ಪ್ರವೀಣಕುಮಾರ ಬಿರಾದಾರ, ಸಂಸ್ಥೆಯ ಕಾರ್ಯದರ್ಶಿ ಅರುಣಕುಮಾರ ಪಾಟೀಲ, ಮುಖ್ಯಶಿಕ್ಷಕ ಶರಣು ಸೋಲ್ಲಾಪುರೆ, ಸಿಬ್ಬಂದಿ ವರ್ಗ ಲೋಕೇಶ.ಕೆ, ಜಯಕುಮಾರ ಎಸ್, ಹನುಮಂತ, ನೀಲಕಂಠ ಎಂ, ಶ್ರೀರಾಜ, ವಿವೇಕ ಎಂ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
