ಪರಿವರ್ತನೆಯ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದ ಸಂತ ರಾಮರಾವ್ ಮಹಾರಾಜ್
ಪರಿವರ್ತನೆಯ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದ ಸಂತ ರಾಮರಾವ್ ಮಹಾರಾಜ್
ಆರನೇ ಪುಣ್ಯ ಸ್ಮರಣೆಯಲ್ಲಿ ಮಾಜಿ ಲೋಕಸಭಾ ಸದಸ್ಯ ಉಮೇಶ್ ಜಾಧವ್ ಹೇಳಿಕೆ
ಕಲಬುರಗಿ : ಬಂಜಾರಾ ಸಮುದಾಯದ ಪೂಜ್ಯರಾದ ರಾಮರಾವ್ ಬಾಪು ಮಹಾರಾಜರು ಸರ್ವ ಜನಾಂಗದ ಕಲ್ಯಾಣಕ್ಕಾಗಿ ದುಡಿದು ಪರಿವರ್ತನೆಯ ಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಟ್ಟ ಮಹಾನ್ ಅಂತರಾಗಿದ್ದರೂ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು.
ಕಲಬುರಗಿಯ ಬಂಜಾರಾ ಭವನದ
ಲ್ಲಿ ಶುಕ್ರವಾರ (ಅ.30 ರಂದು ) ಸಂತ ರಾಮರಾವ್ ಬಾಪು ಮಹಾರಾಜರ ಆರನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಕಲ್ಯಾಣ ಕರ್ನಾಟಕ ಸೇರಿದಂತೆ ದೇಶದಾದ್ಯಂತದಲ್ಲಿ ಗುರುಗಳು ಸಂಚರಿಸಿ ತಾಂಡಾಗಳಿಗೆ ಭೇಟಿ ನೀಡಿ ಸೇವಾಲಾಲ್ ಮತ್ತು ಅಂಬಾ ಭವಾನಿ ಗುಡಿಗಳನ್ನು ನಿರ್ಮಾಣ ಮಾಡಿ ಧಾರ್ಮಿಕ ಶಕ್ತಿ ತುಂಬಿ ದುಶ್ಚಟಮುಕ್ತ ಬಂಜಾರಾ ಸಮಾಜ ನಿರ್ಮಾಣಕ್ಕೆ ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದರು . ಮಹಾರಾಜರು ಅಖಂಡ ಬ್ರಹ್ಮಚಾರಿಯಾಗಿ ಉಳಿದು ಜಾತಿ,ಮತ ಪಂಥವೆಂಬ ಭೇದಗಳನ್ನು ಮರೆತು ರಾಷ್ಟ್ರಾದ್ಯಂತ ಸಂಚಾರ ಮಾಡಿ ಪರಿವರ್ತನೆಯ ಸಮಾಜವನ್ನು ಕಟ್ಟಲು ಪ್ರಯತ್ನಿಸಿದವರು.
ರಾಮರಾವ್ ಬಾಪು ಮಹಾರಾಜರು 2020 ಮಾರ್ಚ್ 5ರಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬಂಜಾರಾ ಸಮುದಾಯದ ಕಾಶಿ ಎಂದೇ ಪರಿಗಣಿತ ಪೌರಾದೇವಿಗೆ ಭೇಟಿ ನೀಡುವಂತೆ ಕೋರಿದ್ದರು. ಆದರೆ ಕರೋನಾ ಕಾರಣದಿಂದಾಗಿ ಕಾರ್ಯಕ್ರಮ ಮುಂದೂಡಲ್ಪಟ್ಟು ಮಹಾರಾಜರು ಕೂಡ ಸ್ವರ್ಗಸ್ಥರಾಗಿದ್ದರು.ಆದರೂ ಅವರ ಮನವಿಯoತೆ ಪ್ರಧಾನಿಗಳು ಪೌರಾದೇವಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳಾಗಿದ್ದ ಏಕನಾಥಶಿoಧೆ ಮತ್ತು ಉಪಮುಖ್ಯಮಂತ್ರಿಗಳಾಗಿದ್ದ ದೇವಿoದ್ರ ಫಡ್ನವೀಸ್ ಸಮ್ಮುಖದಲ್ಲಿ ಪ್ರಧಾನಿಗಳು ಪೌರಾದೇವಿಗೆ ಭೇಟಿಯಾಗಿ ನಗಾರಾ ಬಂಜಾರ ಸಾಂಸ್ಕೃತಿಕ ಕೇಂದ್ರಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಸ್ಥಳೀಯ ಶಾಸಕರಾದ ಸಂಜಯ ರಾಥೋಡ್ ಸಮ್ಮುಖದಲ್ಲಿ ಪೌರಾದೇವಿ ಸಮಗ್ರ ಅಭಿವೃದ್ಧಿ ಯಾಗುತ್ತಿರುವುದು ಬಂಜಾರಾ ಸಮುದಾಯಕ್ಕೆ ಹೆಮ್ಮೆಯ ಸಂಗತಿ. ಸಂತ ಬಾಪು ರಾಮ್ ಮಹಾರಾಜರ ಆದರ್ಶಗಳನ್ನು ಸಮುದಾಯದ ಜನರು ಜೀವನದಲ್ಲಿ ಅಳವಡಿಸಿ ಪರಿವರ್ತನೆಯ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಪುಣ್ಯ ಸ್ಮರಣೆ ಅಂಗವಾಗಿ ಭೋಗ ಪೂಜೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರೇಮ್ ಕುಮಾರ್ ರಾಥೋಡ್ ನಡೆಸಿಕೊಟ್ಟರು. ಬಂಜಾರಾ ಸೇವಾ ಸಂಘದ ಅಧ್ಯಕ್ಷರಾದ ಡಾ.ಬಿ ಬಿ ನಾಯಕ್ ಕಾರ್ಯದರ್ಶಿ ವಿನೋದ್ ಚೌವ್ಹಾಣ್ ಯಾಗಾಪುರ, ಬಂಜಾರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ರಾಮಚಂದ್ರ ಜಾಧವ, ಬಲದೇವ್ ಸಿಂಗ್ ರಾಥೋಡ್ ಅರುಣ್ ಪವಾರ್ ವಿನೋದ್ ಚೌಹಾನ್ ತಾರಾನಾಥ ಚವ್ಹಾಣ್ ಲಾಲಪ್ಪ ರಾಥೋಡ್ ಕೆಎಸ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು

