ಕರ್ನಾಟಕ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಜೋಡೆತ್ತು ಬಂಡಿಗಳ ಮೂಲಕ ಬೃಹತ್ ಪ್ರತಿಭಟನೆ ಜೋಡೆತ್ತುಗಳ ಕೃಷಿ ಉಳಿಸಲು ಬಜೆಟ್ ನ ಶೇ. 10 ರಷ್ಟು ಹಣ ಮೀಸಲಿಡಲು ಕಾನೂನು ಜಾರಿಗೆ ತರಲು ಆಗ್ರಹ
ಕರ್ನಾಟಕ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಜೋಡೆತ್ತು ಬಂಡಿಗಳ ಮೂಲಕ ಬೃಹತ್ ಪ್ರತಿಭಟನೆ
ಜೋಡೆತ್ತುಗಳ ಕೃಷಿ ಉಳಿಸಲು ಬಜೆಟ್ ನ ಶೇ. 10 ರಷ್ಟು ಹಣ ಮೀಸಲಿಡಲು ಕಾನೂನು ಜಾರಿಗೆ ತರಲು ಆಗ್ರಹ
ಚಿಂಚೋಳಿ : ಸರಕಾರ ರಾಜ್ಯದ ಒಟ್ಟಾರೆ ಬಜೆಟ್ ನಲ್ಲಿ ಶೇ.10 ರಷ್ಟು ಹಣ ರೈತ ಜೋಡೆತ್ತುಗಳ ಕೃಷಿಕರನ್ನು ಉಳಿಸಿ, ಬೆಳಸಲು ಮೀಸಲಿಡಳು ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿ, ಕರ್ನಾಟಕ ರೈತ ಸಂಘ ಹಾಗೂ ರೈತ ಸೇನೆ ಪಟ್ಟಣದ ಮಹಾಂತೇಶ್ವರ ಮಠದಿಂದ ಜೋಡೆತ್ತು ಬಂಡಿಗಳ ಮೂಲಕ ಬೃಹತ್ ಪ್ರತಿಭಟನೆ ನಡೆಸಿತ್ತು.
ಈ ಕೃಷಿ ರೈತರ ಪ್ರತಿಭಟನೆಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಬಿಜೆಪಿ ಪಕ್ಷದ ಹಾಗೂ ಜೆಡಿಎಸ್ ಪಕ್ಷದ ಮುಖಂಡರುಗಳು ಪಕ್ಷತೀತವಾಗಿ ಹೋರಾಟದಲ್ಲಿ ಪಾಲ್ಗೊಂಡು ಪರೋಕ್ಷವಾಗಿ ಬೆಂಬಲಿಸಿದರು.
ಸರಕಾರ ರಾಜ್ಯದ ಒಟ್ಟಾರೆ ಬಜೆಟ್ ನಲ್ಲಿ ಶೇ.10 ರಷ್ಟು ಹಣ ಮೀಸಲಿಡುವ ಕಾನೂನು ಜಾರಿಗೆ ತಂದು ಜೋಡೆತ್ತುಗಳ ಕೃಷಿಕರನ್ನು ಪ್ರೋತ್ಸಾಹಿಸಲು ಮಾಸಿಕ 11 ಸಾವಿರ ರೂಪಾಯಿಗಳು ಪ್ರೋತ್ಸಾಹ ಧನ ನೀಡಬೇಕು. ಈಗಾಗಲೇ ಕಬ್ಬು ಕಟ್ಟಾವಿಗೆ ಬಂದಿದ್ದು ಸರಕಾರ ದರ ನಿಗದಿಪಡಿಸಿ ಖರೀದಿಸಲು ಕ್ರಮವಹಿಸಬೇಕು.
ಜ್ಞಾನಯೋಗಿ ಶ್ರೀಸಿದ್ದೇಶ್ವರ ಸ್ವಾಮಿಗಳ ಹೆಸರಿನಲ್ಲಿ ನಂದಿ ಕೃಷಿ ಸಂಸ್ಕೃತಿ ಪುನಶಚೇತನ ಕಾನೂನು ಜಾರಿಗೆ ತರಬೇಕು.ಕೃಷಿ ರೈತರ ಬ್ಯಾಂಕ್ ಖಾತೆಗಳಿಗೆ ಬರಗಾಲ ಘೋಷಣೆಯ ಹಣ ಜಮೆ ಮಾಡಬೇಕು. ರೈತರ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾ ಮಾಡಬೇಕು. ರೈತ ಕೂಲಿ ಕಾರ್ಮಿಕರ ಗೂಳೆ ತಪ್ಪಿಸಲು ಹೊಲದಲ್ಲಿ ಕೆಲಸ ಮಾಡಲು ಕೆಲಸ ನೀಡಬೇಕು. ಅರ್ಹ ವಯೋವೃದ್ಧ ರೈತ ಕೃಷಿಕರಿಗೆ ಮಾಸಿಕ 5 ಸಾವಿರ ಪಿಂಚಣಿ ನೀಡುವ ವ್ಯವಸ್ಥೆ ಸರಕಾರ ಮಾಡಬೇಕು. ತಾಲ್ಲೂಕಿನ ಜಲಜೀವನ್ ಮಿಷನ್ ಕಳಪೆ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ಕೈಗೋಳಬೇಕು. ಎಲ್ಲಾ ಬೇಡಿಕೆಗಳುಒಂದು ವಾರದೊಳಗಡೆ ಈಡೇರಿಸದಿದಲ್ಲಿ ಸಂಘ ಉಗ್ರ ಹೋರಾಟದ ಸ್ವರೂಪ ಪಡೆಯಲಿದೆ ಎಂದು ಹೋರಾಟ ನೇತೃತ್ವ ವಹಿಸಿದ ಕರ್ನಾಟಕ ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಗಳ ಹಿರಿಯ ಮುಖಂಡರುಗಳಾದ ಗೋಪಾಲರಾವ ಕಟ್ಟಮನಿ, ಅಬ್ದುಲ್ ಬಾಶೀದ್, ಲಕ್ಷ್ಮಣ ಆವಂಟಿ, ಕೆ. ಎಂ. ಬಾರಿ, ಸಂತೋಷ ಗಡಂತಿ, ಹಣಮಂತ ಪೂಜಾರಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರುಗಳು ರೈತರು, ಕೃಷಿ ಕೂಲಿ ಕಾರ್ಮಿಕರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಉಪಸ್ಥಿತರಿದ್ದರು.

