ಕಲಬುರಗಿಯಲ್ಲಿ ಬಜಾಜ್ ಗೋಲ್ಡ್ ಲೋನ್ ಐದನೇ ಶಾಖೆ ಉದ್ಘಾಟನೆ
ಕಲಬುರಗಿಯಲ್ಲಿ ಬಜಾಜ್ ಗೋಲ್ಡ್ ಲೋನ್ ಐದನೇ ಶಾಖೆ ಉದ್ಘಾಟನೆ
ಕಲಬುರಗಿ: ನಗರದ ಹೊಸ ಜೇವರ್ಗಿ ರಸ್ತೆಯ ಉದಯನಗರದಲ್ಲಿ ಬಜಾಜ್ ಗೋಲ್ಡ್ ಲೋನ್ನ ಐದನೇ ಶಾಖೆಯನ್ನು ಪೂಜ್ಯ ಅಪ್ಪಾರಾವ ದೇವಿ ಮುತ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಕಿರಣ ದೇಶಮುಖ, ದಕ್ಷಿಣ ಮತಕ್ಷೇತ್ರದ ಮುಖಂಡ ನೀಲಕಂಠರಾವ ಮೂಲೆಗೆ ಹಾಗೂ ಸಮಾಜ ಸೇವಕ ಆನಂದ ವಾರಿಕ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಖೆಯ ವ್ಯವಸ್ಥಾಪಕ ಭೋಜರಾಜ ಕುಲಕುಂದಾ, ಗ್ರಾಹಕರಿಗೆ ಬಂಗಾರದ ಮೇಲೆ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಭಾಗೀಯ ವ್ಯವಸ್ಥಾಪಕ ನಾಗನಾಥ ಪಾಟೀಲ, ಶರದ ಕುಮಾರ್, ದಶರಥ, ಸಿಬ್ಬಂದಿಗಳಾದ ಶರಣಬಸಪ್ಪ ಹಾಗೂ ಭೀಮಾಶಂಕರ, ಸಂಗಮೇಶ ಜೀವಣಗಿ, ಗೋವಿಂದರಾವ ಮಾಸ್ತರ, ಶಿವಶರಣಪ್ಪ ಕೋಟೆನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

