ಭೀಮ್ ಶಕ್ತಿ ಸಂಘದ ಜಿಲ್ಲಾಧ್ಯಕ್ಷರಾಗಿ ಗೌತಮ್ ಪಿ. ಸಂಗೋಳಾಗಿ ಆಯ್ಕೆ

ಭೀಮ್ ಶಕ್ತಿ ಸಂಘದ ಜಿಲ್ಲಾಧ್ಯಕ್ಷರಾಗಿ ಗೌತಮ್ ಪಿ. ಸಂಗೋಳಾಗಿ ಆಯ್ಕೆ

ಭೀಮ್ ಶಕ್ತಿ ಸಂಘದ ಜಿಲ್ಲಾಧ್ಯಕ್ಷರಾಗಿ ಗೌತಮ್ ಪಿ. ಸಂಗೋಳಾಗಿ ಆಯ್ಕೆ

ಕಲಬುರಗಿ: ಭೀಮ್ ಶಕ್ತಿ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಯುವ ನಾಯಕ ಹಾಗೂ ಹೋರಾಟಗಾರ ಗೌತಮ್ ಪಿ. ಸಂಗೋಳಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ರಾಜ್ಯಾಧ್ಯಕ್ಷ ಅಂಬಾಜಿ ಪಿ. ಮೇಟಿ ಅವರ ಆದೇಶದ ಮೇರೆಗೆ ಈ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಎಂ. ಮುಡ್ಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂತನ ಜಿಲ್ಲಾಧ್ಯಕ್ಷರು ತಕ್ಷಣವೇ ಜಿಲ್ಲೆಯಾದ್ಯಂತ ಸಂಘಟನೆಯನ್ನು ಬಲಪಡಿಸುವ ಕಾರ್ಯಕ್ಕೆ ಮುಂದಾಗಬೇಕು. ಜಿಲ್ಲೆಯ ಎಲ್ಲ ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಸಂಘಟನೆಯನ್ನು ವಿಸ್ತರಿಸಿ, ಶೋಷಿತರು, ದಲಿತರು ಹಾಗೂ ವಿಕಲಚೇತನರ ಹಕ್ಕುಗಳ ರಕ್ಷಣೆಗಾಗಿ ಸಕ್ರಿಯವಾಗಿ ಶ್ರಮಿಸಬೇಕು ಎಂದು ಶಿವಕುಮಾರ್ ಎಂ. ಮುಡ್ಡಿ ಅವರು ಸೂಚಿಸಿದ್ದಾರೆ.