ಟ್ರ್ಯಾಕ್ಟರ್ ಇಂಜಿನ್ ಪಲ್ಟಿ : ಚಾಲಕನ ಸಾವು : ಪರಸಿ ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೆ ಚಾಲಕನ ಸಾವು

ಟ್ರ್ಯಾಕ್ಟರ್ ಇಂಜಿನ್ ಪಲ್ಟಿ : ಚಾಲಕನ ಸಾವು :  ಪರಸಿ ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೆ ಚಾಲಕನ ಸಾವು

ಟ್ರ್ಯಾಕ್ಟರ್ ಇಂಜಿನ್ ಪಲ್ಟಿ : ಚಾಲಕನ ಸಾವು :

ಪರಸಿ ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೆ ಚಾಲಕನ ಸಾವು 

ನಾಗರಾಜ್ ದಂಡಾವತಿ ವರದಿ ಶಹಾಬಾದ : - ನಗರದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಭೀಮಶಪ್ಪ ನಗರ ಬಳಿ ಪರಸಿ ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ/ಮಾಲಕ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ.

ಶಹಾಬಾದ ತಾಲ್ಲೂಕಿನ ತರನಳ್ಳಿ ಗ್ರಾಮದ ಮಲ್ಲಪ್ಪ ಚಂದ್ರಾಮ ಪೂಜಾರಿ(27) ಎಂಬ ದುರ್ದೈವಿ ಮೃತ ಯುವಕ.

ಹಳೆ ಶಹಾಬಾದ ನಿಂದ ಪರಸಿ ಗಳನ್ನು ತುಂಬಿಕೊಂಡು ಸಿಬಿರಕಟ್ಟಾ ಒಳ ರಸ್ತೆ ಮೂಲಕ ರಾಜ್ಯ ಹೆದ್ದಾರಿ 125 ಕ್ಕೆ ಟ್ರ್ಯಾಕ್ಟರ್ ಏರಿಸುವಾಗ ಇಂಜನ್ ನೆಲದಿಂದ ಮೇಲೆ ಎದ್ದು ಚಾಲಕ ಇಂಜನ್ ಮತ್ತು ಟ್ರಾಲಿಯ ನಡುವೆ ಸಿಕ್ಕಿ ಹಾಕಿಕೊಂಡು ಸಾವನ್ನಪಿದ್ದಾನೆ. 

ಸ್ಥಳಕ್ಕೆ ಶಹಾಬಾದ ನಗರ ಪೊಲೀಸ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ, ದುರ್ಘಟನೆಗೆ ಒಳಗಾದ ಟ್ರ್ಯಾಕ್ಟರ್ ಪೊಲೀಸ್‌ ರು ವಶಕ್ಕೆ ಪಡೆದುಕೊಂಡು ಕ್ರೈಂ ನಂ ೫೦ ರಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.