ಆನ್ಲೈನ್ ಆದಾಯ ಮಿತಿ ತಾಂತ್ರಿಕ ದೋಷ ಸರಿಪಡಿಸಲು :ಧನರಾಜ ಡಿ. ರಾಜೋಳೆ ಆಗ್ರಹ
ಆನ್ಲೈನ್ ಆದಾಯ ಮಿತಿ ತಾಂತ್ರಿಕ ದೋಷ ಸರಿಪಡಿಸಲು :ಧನರಾಜ ಡಿ. ರಾಜೋಳೆ ಆಗ್ರಹ
ಬೀದರ್: ಆದಾಯ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ನಾಡಕಚೇರಿ ಹಾಗೂ ನೆಮ್ಮದಿ ಕೇಂದ್ರಗಳಲ್ಲಿ ₹1.20 ಲಕ್ಷ ಆದಾಯ ಮಿತಿ ತಿಳಿಸಲಾಗುತ್ತಿದ್ದರೂ, ಆನ್ಲೈನ್ ಅರ್ಜಿಯಲ್ಲಿ ಕೇವಲ ₹32 ಸಾವಿರ ಮಿತಿ ತೋರಿಸುತ್ತಿರುವ ತಾಂತ್ರಿಕ ದೋಷವನ್ನು ಕೂಡಲೇ ಸರಿಪಡಿಸಬೇಕು ಎಂದು ಸಾಮಾಜಿಕ ಹೋರಾಟಗಾರರಾದ ಧನರಾಜ ಡಿ. ರಾಜೋಳೆ ಹಾಗೂ ಡಾ. ಜಿಯಾವುದ್ದೀನ್ ನೀಲಂಗೆಕರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರ ಸಭೆ ಕರೆದು ಸಮಸ್ಯೆ ಪರಿಹರಿಸಬೇಕು. ಘೋಷಿತ ಆದಾಯ ಮಿತಿಗೆ ಅನುಗುಣವಾಗಿ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

