ನರೇಗಲ್ಲದಲ್ಲಿ ಮೇ 11ಕ್ಕೆ ಭವ್ಯ ನಾಟಕ: 'ಧರ್ಮದ ನುಡಿ ಬೆಂಕಿಯ ಕಿಡಿ' ಪ್ರದರ್ಶನ

ನರೇಗಲ್ಲದಲ್ಲಿ ಮೇ 11ಕ್ಕೆ ಭವ್ಯ ನಾಟಕ: 'ಧರ್ಮದ ನುಡಿ ಬೆಂಕಿಯ ಕಿಡಿ' ಪ್ರದರ್ಶನ

ನರೇಗಲ್ಲದಲ್ಲಿ ಮೇ 11ಕ್ಕೆ ಭವ್ಯ ನಾಟಕ: 'ಧರ್ಮದ ನುಡಿ ಬೆಂಕಿಯ ಕಿಡಿ' ಪ್ರದರ್ಶನ

ನರೇಗಲ್ಲ: ಇಲ್ಲಿನ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಕಟ್ಟಿಬಸವೇಶ್ವರ ನಾಟ್ಯ ಸಂಘ (ನರೇಗಲ್ಲ) ವತಿಯಿಂದ ಹಜರತ್ ರಹಿಮಾನ್ ಶಾವಲಿ ಶರಣರ ಉರುಸಿನ ಅಂಗವಾಗಿ ಬೃಹತ್ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಮೇ 11, ಸೋಮವಾರದಂದು ರಾತ್ರಿ 10:00 ಗಂಟೆಗೆ ಹಿರೇಬೂದಿಹಾಳದ ಡಿ.ಆರ್. ಪೂಜಾರ ವಿರಚಿತ "ಧರ್ಮದ ನುಡಿ ಬೆಂಕಿಯ ಕಿಡಿ" (ಅರ್ಥಾತ್: ಅನಾಥ ಕಟ್ಟಿದ ಅರಿಶಿಣದ ತಾಳಿ) ಎಂಬ ಸಾಮಾಜಿಕ ಕ್ರಾಂತಿಕಾರಿ ಹಾಗೂ ಹಾಸ್ಯಭರಿತ ನಾಟಕವು ಅತ್ಯಂತ ವೈಭವದಿಂದ ಜರುಗಲಿದೆ.

ದಿವ್ಯ ಸಾನಿಧ್ಯ: ನರೇಗಲ್ಲ ಹಿರೇಮಠದ ಷ. ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯರು ಮತ್ತು ಹಜರತ್ ಮಂಜೂರ ಹುಸೇನ ಶಾವಲಿ ದರ್ಗಾದ ಶರಣರು ವಹಿಸಲಿದ್ದಾರೆ.

ಅಧ್ಯಕ್ಷತೆ: ನಿವೃತ್ತ ಶಿಕ್ಷಕ ಮಲ್ಲನಗೌಡ ನಿಂ. ಪಾಯಪ್ಪಗೌಡ್ರ ಇವರು ವಹಿಸುವರು.

ಸಂಗೀತ: ಗುರು ಪುಟ್ಟರಾಜ ಮೆಲೋಡೀಸ್ ಮತ್ತು ಶಬ್ಬರ ನಾಯಕ ಬಾದಾಮಿ ತಂಡದಿಂದ ಸುಶ್ರಾವ್ಯ ಸಂಗೀತ ಹಾಗೂ ಗಾಯನವಿರಲಿದೆ.

ವಿಶೇಷ ಆಕರ್ಷಣೆ:

ಆಧುನಿಕ ವಿದ್ಯುತ್ ದೀಪಾಲಂಕಾರ ಮತ್ತು ಭವ್ಯ ರಂಗಸಜ್ಜಿಕೆಯೊಂದಿಗೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಪ್ರತಿಭಾನ್ವಿತ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ. ಮಾಲೀಕರಾದ ಮಲ್ಲನಗೌಡ ಪಾಯಪ್ಪಗೌಡರ ಮತ್ತು ಪರಪ್ಪ ಬೆಡಗಲ್ಲ ಅವರ ಮಾರ್ಗದರ್ಶನದಲ್ಲಿ ಈ ಕಲಾ ಸೇವೆ ನಡೆಯಲಿದೆ.

ನಾಟಕದ ಯಶಸ್ಸಿಗಾಗಿ ಕಟ್ಟಿಬಸವೇಶ್ವರ ಓಣಿಯ ಸಮಸ್ತ ಗುರು-ಹಿರಿಯರು, ಯುವ ಮಿತ್ರರು ಹಾಗೂ ನರೇಗಲ್ಲ ಗ್ರಾಮಸ್ಥರು ಸಜ್ಜಾಗಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ