ನಿರುದ್ಯೋಗಿ ದಲಿತ ಯುವಕರಿಗೆ ಗುತ್ತಿಗೆ ಕೆಲಸದ ಅವಕಾಶ ಕಲ್ಪಿಸಿ: ಸಿಎಂಗೆ ಧನರಾಜ್ ರಾಜೋಳೆ ಮನವಿ
ನಿರುದ್ಯೋಗಿ ದಲಿತ ಯುವಕರಿಗೆ ಗುತ್ತಿಗೆ ಕೆಲಸದ ಅವಕಾಶ ಕಲ್ಪಿಸಿ: ಸಿಎಂಗೆ ಧನರಾಜ್ ರಾಜೋಳೆ ಮನವಿ
ಬೀದರ್ ಜಿಲ್ಲೆಯ ಆರೋ ವಿಧಾನಸಭಾ ಕ್ಷೇತ್ರದಲ್ಲಿ ಎಡ ಬಲ ಪ.ಜಾ.ಸಮುದಾಯದ ಪದವೀಧರ ನಿರುದ್ಯೋಗಿ ಯುವಕರಿಗೆ ಶಾಸಕರ ಅನುದಾನದಡಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುತ್ತಿಗೆ ಕೆಲಸದ ಅವಕಾಶ ಕಲ್ಪಿಸುವುದಾಗಿ ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಲಾಗಿತ್ತು. ಆದರೆ ಚುನಾವಣೆ ಮುಗಿದ ನಂತರ ಭರವಸೆ ಈಡೇರಿಲ್ಲ ಎಂದು ಧನರಾಜ್ ರಾಜೋಳೆ ಆರೋಪಿಸಿದ್ದಾರೆ.
ಶಾಸಕರ ಕಚೇರಿಗೆ ತೆರಳಿ ಗುತ್ತಿಗೆ ಕೆಲಸದ ಕುರಿತು ವಿಚಾರಿಸಿದಾಗ, ತಮ್ಮ ಓಣಿಯಲ್ಲಿ ಯಾವುದೇ ಕಾಮಗಾರಿ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಶಾಸಕರ ಸಂಬಂಧಿಕರು ಹಾಗೂ ಆಪ್ತರಿಗೆ ಕಾಮಗಾರಿಗಳ ಕುರಿತು ದೂರವಾಣಿ ಮೂಲಕ ಮಾಹಿತಿ ನೀಡಿ, ಸಂಬಂಧಿಸಿದ ಅಧಿಕಾರಿಗಳಿಗೆ ಶಿಫಾರಸು ಪತ್ರಗಳನ್ನು ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೀದರ್ ಜಿಲ್ಲೆಯ ನಿರುದ್ಯೋಗಿ ದಲಿತ ಯುವಕರಿಗೆ ಸಮಾನ ಅವಕಾಶ ಕಲ್ಪಿಸುವಂತೆ ಸಂಬಂಧಪಟ್ಟ ಶಾಸಕರು ಹಾಗೂ ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ರಾಜೋಳೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಅರ್ಹತೆ ಮತ್ತು ನಿಯಮಾನುಸಾರ ಎಲ್ಲ ಸಮುದಾಯದ ನಿರುದ್ಯೋಗಿ ಯುವಕರಿಗೂ ಸಮಾನ ಅವಕಾಶ ದೊರೆಯಬೇಕು.
ಶಾಸಕರ ಸಂಬಂಧಿಕರಿಗೆ ಅಥವಾ ರಾಜಕೀಯ ಪ್ರಭಾವದ ಆಧಾರದ ಮೇಲೇ ಕಾಮಗಾರಿ ನೀಡಬಾರದೆಂದು ಎಂದು ಅವರು ಆಗ್ರಹಿಸಿದ್ದಾರೆ.

