ಮಿನಿಸ್ಟರ್ ವೈಟ್ ಮಳಿಗೆ ಉದ್ಘಾಟಿಸಿದ ದೊಡ್ಡಪ್ಪ ಅಪ್ಪ

ಮಿನಿಸ್ಟರ್ ವೈಟ್ ಮಳಿಗೆ ಉದ್ಘಾಟಿಸಿದ  ದೊಡ್ಡಪ್ಪ ಅಪ್ಪ

ಮಿನಿಸ್ಟರ್ ವೈಟ್ ಮಳಿಗೆ ಉದ್ಘಾಟಿಸಿದ ದೊಡ್ಡಪ್ಪ ಅಪ್ಪ

ಕಲಬುರಗಿ: ನಗರದ ತಿಮ್ಮಾಪುರಿ ವೃತ್ತದ ಬಳಿ, ಕನ್ನಡ ಭವನದ ಎದುರಿನ ಮೇನ್ ರಸ್ತೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ (ಎಸ್‌ವಿಪಿ ಸರ್ಕಲ್) ನೂತನವಾಗಿ ಆರಂಭಗೊಂಡಿರುವ ‘ಮಿನಿಸ್ಟರ್ ವೈಟ್’ ಮಳಿಗೆಯನ್ನು ಶ್ರೀ ಶರಣಬಸವೇಶ್ವರ ದೇವಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಉದ್ಘಾಟಿಸಿದರು.

ನಗರದ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ಆರಂಭಗೊಂಡಿರುವ ಮಳಿಗೆಯ ಶುಭಾರಂಭದ ಸಂದರ್ಭದಲ್ಲಿ ಗಣ್ಯರು ಉಪಸ್ಥಿತರಿದ್ದು, ಮಳಿಗೆಯ ಮಾಲೀಕರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮಡು, ಡಾ. ಆನಂದ ನಾಯಕ, ಅಭಿಷೇಕ್ ಅಲ್ಲಮಪ್ರಭು ಪಾಟೀಲ, ನೀಲಕಂಠರಾವ್ ಮೂಲಗೆ, ಸೋಮಶೇಖರ್ ಗೋನಾಯಕ, ಗಂಗಾಧರ ಹಿರೇಮಠ ಸ್ವಾಮೀಜಿ, ವಿಜಯಕುಮಾರ್ ತೇಗಲತಿಪ್ಪಿ ಹಾಗೂ ಶಿವಾನಂದ್ ಪಿಸ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮಳಿಗೆಯ ಮಾಲೀಕರಾದ ಉದಯಕುಮಾರ್ ಹೊನ್ನಳ್ಳಿ, ಬಸವರಾಜ ಹೊನ್ನಳ್ಳಿ ಹಾಗೂ ರಾಹುಲ್ ಹೊನ್ನಳ್ಳಿ ಇದ್ದರು.