ರಾಜ್ಯದಲ್ಲೇ ನರೇಗಲ್ ಪೊಲೀಸ್ ಠಾಣೆಗೆ ದ್ವಿತೀಯ ಸ್ಥಾನ: ಗದಗ ಜಿಲ್ಲೆಗೆ ಸಂದ ಗೌರವ.

ರಾಜ್ಯದಲ್ಲೇ ನರೇಗಲ್ ಪೊಲೀಸ್ ಠಾಣೆಗೆ ದ್ವಿತೀಯ ಸ್ಥಾನ: ಗದಗ ಜಿಲ್ಲೆಗೆ ಸಂದ ಗೌರವ.

ರಾಜ್ಯದಲ್ಲೇ ನರೇಗಲ್ ಪೊಲೀಸ್ ಠಾಣೆಗೆ ದ್ವಿತೀಯ ಸ್ಥಾನ: ಗದಗ ಜಿಲ್ಲೆಗೆ ಸಂದ ಗೌರವ.

ಕಲ್ಯಾಣ ಕಹಳೆ ನರೇಗಲ್: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಪ್ರಕಟಿಸಲಾದ ರಾಜ್ಯದ ಅತ್ಯುತ್ತಮ ಕಾರ್ಯಕ್ಷಮತೆಯ ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ಗದಗ ಜಿಲ್ಲೆಯ ನರೇಗಲ್ ಪೊಲೀಸ್ ಠಾಣೆಯು ರಾಜ್ಯದಲ್ಲೇ 2ನೇ ರಾಂಕ್ ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದೆ. ಪೊಲೀಸ್ ಠಾಣೆಗಳ ದೈನಂದಿನ ಕಾರ್ಯವೈಖರಿ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ ಹಾಗೂ ಅಪರಾಧ ನಿಯಂತ್ರಣ ಮಾನದಂಡಗಳ ಆಧಾರದ ಮೇಲೆ ಸಿದ್ಧಪಡಿಸಲಾದ ರಾಜ್ಯದ 'ಟಾಪ್-10' ಪಟ್ಟಿಯಲ್ಲಿ ನರೇಗಲ್

ಠಾಣೆಯು 65.9 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಅಲಂಕ-ರಿಸಿದೆ. ನರೇಗಲ್ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ವಿಶ್ವನಾಥ್ ನಾಗರಾಳ ಅವರ ನೇತೃತ್ವ ಹಾಗೂ ಸಿಬ್ಬಂದಿಯ ಕರ್ತವ್ಯನಿಷ್ಠೆಯ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಪಿಎಸ್‌ಐ ಐಶ್ವರ್ಯ ನಾಗರಾಳ ಅವರು ಇಳಕಲ್ ತಾಲೂಕಿನ ವಿಶ್ವನಾಥ ರೆಡ್ಡಿ ಅವರ ಸುಪುತ್ರಿ. ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಈ ಗಮನಾರ್ಹ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ