ಬಿಜೆಪಿ ಮುಖಂಡರಿಗೆ ಹೃದಯಸ್ಪರ್ಶಿ ಸನ್ಮಾನ

ಬಿಜೆಪಿ ಮುಖಂಡರಿಗೆ ಹೃದಯಸ್ಪರ್ಶಿ ಸನ್ಮಾನ

ಬಿಜೆಪಿ ಮುಖಂಡರಿಗೆ ಹೃದಯಸ್ಪರ್ಶಿ ಸನ್ಮಾನ 

ಶಹಪುರ: ಇತ್ತೀಚಿಗೆ ಯಾದಗಿರಿ ಜಿಲ್ಲಾ ಭಾರತೀಯ ಜನತಾ ಪಕ್ಷದ ಯುವ ಮೋರ್ಚದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮಿ ಪುತ್ರ ಮಾಲಿ ಪಾಟೀಲ್ ಹಾಗೂ ಅವರ ತಂಡದೊಂದಿಗೆ ಆಗಮಿಸಿ ಬಿಜೆಪಿ ಹಿರಿಯ ಮುಖಂಡರಾದ ಡಾ.ಚಂದ್ರಶೇಖರ್ ಸುಬೇದಾರ್ ರಾಜಶೇಖರ್ ನಗನೂರ, ಅಡಿವಪ್ಪ ಜಾಕಾ ಅವರಿಗೆ ಹೃದಯಸ್ಪರ್ಶಿ ಸನ್ಮಾನಿಸಿ ಸತ್ಕರಿಸಿದರು.

ಭಾರತದ ಭವಿಷ್ಯ ಇವತ್ತು ಯುವಕರ ಕೈಯಲ್ಲಿದೆ ಇದೇ ಕಾರಣಕ್ಕಾಗಿ ಯುವಕರು ದೇಶದ ಪ್ರಗತಿಯಲ್ಲಿ ನಿಷ್ಠೆಯಿಂದ ಪಾಲ್ಗೊಂಡಾಗ ಮಾತ್ರ ಆದೇಶ ಬಲಿಷ್ಠ ರಾಷ್ಟ್ರವಾಗಲೂ ಸಾಧ್ಯ ಎಂದು ಸುಬೇದಾರ್ ಫಾರ್ಮ್ ಹೌಸ್ ನಲ್ಲಿ ಸನ್ಮಾನ ಸ್ವೀಕರಿಸಿ ಡಾ.ಚಂದ್ರಶೇಖರ್ ಸುಬೇದಾರ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ಗೌಡ ವಿಭೂತಿಹಳ್ಳಿ,ನೂತನ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಲಕ್ಷ್ಮಿಪುತ್ರ ಹಾಗೂ ಹಾಗೂ ಸರ್ವ ಸದಸ್ಯರು ಮತ್ತು ನೂರಾರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಜರಿದ್ದರು