ಕಲಬುರಗಿ - ಮಂಗಳೂರು ವಿಮಾನಸೇವೆ ಶೀಘ್ರ ಚರ್ಚೆ : ಎಂಪಿ ರಾಧಾಕೃಷ್ಣ ದೊಡ್ಡಮನಿ

ಕಲಬುರಗಿ - ಮಂಗಳೂರು ವಿಮಾನಸೇವೆ ಶೀಘ್ರ ಚರ್ಚೆ : ಎಂಪಿ ರಾಧಾಕೃಷ್ಣ ದೊಡ್ಡಮನಿ

ಕಲಬುರಗಿ - ಮಂಗಳೂರು ವಿಮಾನಸೇವೆ ಶೀಘ್ರ ಚರ್ಚೆ : ಎಂಪಿ ರಾಧಾಕೃಷ್ಣ ದೊಡ್ಡಮನಿ

 ಕಲಬುರಗಿ : ಮಂಗಳೂರಿಗೆ ಕಲಬುರಗಿಯಿಂದ ವಿಮಾನಸೇವೆ ಆರಂಭಿಸಲು ಸ್ಟಾರ್ ಏರ್ ಲೈನ್ಸ್ ಸೇರಿದಂತೆ ಕೆಲ ವಿಮಾನ ಸಂಸ್ಥೆಗಳ ಜೊತೆ ಶೀಘ್ರದಲ್ಲಿ ಚರ್ಚಿಸುವುದಲ್ಲದೆ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಾಗರಿಕ ವಿಮಾನ ಯಾನ ಖಾತೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ತಿಳಿಸಿದರು.

    ಕಲಬುರಗಿಯಲ್ಲಿ ನ.23ರಂದು ಕಲಬುರಗಿ ಜಿಲ್ಲಾ ಹೋಟೆಲ್ ವಸತಿ ಮತ್ತು ಬೇಕರಿ ಸಂಘದ ನಿಯೋಗದ ಮನವಿಗೆ ಸ್ಪಂದಿಸಿ ಮಾತನಾಡಿದ ಅವರು ಶೀಘ್ರದಲ್ಲೇ ಸ್ಟಾರ್ ಏರ್ಲೈನ್ಸ್ ಸೇರಿದಂತೆ ವಿವಿಧ ವಿಮಾನ ಸಂಸ್ಥೆಗಳ ಜೊತೆ ಮಾತನಾಡಿ ಕಲಬುರಗಿಯಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಾರದಲ್ಲಿ ಕನಿಷ್ಠ ಎರಡು ಬಾರಿ ವಿಮಾನ ಸೇವೆ ಆರಂಭಿಸಲು ಪ್ರಯತ್ನಿಸಲಾಗುವುದು. ಕಲಲಬುರಗಿಯಿಂದ ವಯಾ ಬೆಂಗಳೂರು ಮೂಲಕ ವನ್ ಸ್ಟಾಪ್ ವಿಮಾನ ಸೇವೆ ಮಂಗಳೂರಿಗೆ ಆರಂಭವಾದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕಲಬುರಗಿಯಿಂದ ಮಂಗಳೂರಿಗೆ ವಿಮಾನಸೇವೆಗಾಗಿ ಭಾರಿ ಬೇಡಿಕೆಗಳು ಬಂದಿದ್ದು ಈ ಬಗ್ಗೆ ಮಂಗಳೂರಿನ ಸಂಸದರಾದ ಕ್ಯಾಪ್ಟನ್ ಬ್ರಿಜಿಸ್ ಚೌಟ ಅವರ ಜೊತೆ ಕೂಡ ಚರ್ಚಿಸಿ ಜಂಟಿ ಪ್ರಯತ್ನ ನಡೆಸಿ ಶೀಘ್ರದಲ್ಲಿ ವಿಮಾನ ಸೇವೆ ಆರಂಭಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಕಲ್ಬುರ್ಗಿಯಿಂದ ಮಂಗಳೂರಿಗೆ ವಿಮಾನ ಸೇವೆ ಲಭ್ಯವಾದರೆ ಬೀದರ್ ವಿಜಯಪುರ ಸೋಲಾಪುರ ಯಾದಗಿರಿ ಮುಂತಾದ ಪ್ರದೇಶಗಳ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಈಗಲೇ ಎಂಟು ಹತ್ತು ಬಸ್ಸುಗಳು ಈ ಕಡೆಯಿಂದ ನಿತ್ಯ ಸಂಚರಿಸುತಿದ್ದೆ ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹೋಟೆಲ್ ಸಂಘದ ಸದಸ್ಯರಾದ ಡಾಕ್ಟರ್ ಸದಾನಂದ ಪೆರ್ಲ ಸಂಸದರಿಗೆ ವಿವರಿಸಿದ್ದರು. ಕಲಬುರಗಿಯಿಂದ ಮಂಗಳೂರಿಗೆ ರಸ್ತೆ ಮೂಲಕ ಪ್ರಯಾಣಿಸಲು ಕನಿಷ್ಠ 16 ತಾಸುಗಳಷ್ಟು ವೇಳೆ ತಗಲುತ್ತಿದ್ದು ಈ ಬಗ್ಗೆ ಹಲವು ಬಾರಿ ಮನವಿ ನೀಡಿ ವಿಮಾನಸೇವೆಗಾಗಿ ಒತ್ತಾಯಿಸಲಾಗಿತ್ತು . ಇತ್ತೀಚೆಗೆ ಕೇಂದ್ರ ವಿಮಾನಯಾನ ಖಾತೆಯ ರಾಜ್ಯ ಸಚಿವರಾದ ಮುರಳಿಧರ ಮಹೋಲ್ ಅವರ ಜೊತೆಗೆ ನೇರವಾಗಿ ಚರ್ಚಿಸಿ ಮನವಿ ಪತ್ರವನ್ನು ಕೂಡ ಸಲ್ಲಿಸಲಾಗಿದೆ. ಮುಂದಿನ ಅಧಿವೇಶನದ ಸಂದರ್ಭದಲ್ಲಿ ಈ ಬಗ್ಗೆ ಗಮನ ಸೆಳೆಯಬೇಕಾಗಿ ಹೋಟೆಲ್ ಅಧ್ಯಕ್ಷರಾದ ನರಸಿಂಹ ಮೆಂಡನ್ ಮನವಿ ಮಾಡಿದರು.

    ನಿಯೋಗದಲ್ಲಿ ಮಲಕಣಿ ಅವಿನಾಶ ಹರಕುಡೆ ಅಂಬುಜ ಎಂಡಿ ಹಾಗೂ ಶೀಲಾ ಕಲಬುರುಗಿ ಜೊತೆಗಿದ್ದರು.