ನ.27ರಿಂದ ಮೂರು ದಿನಗಳ ರೇಖಾಚಿತ್ರ ಕಾರ್ಯಾಗಾರ

ನ.27ರಿಂದ ಮೂರು ದಿನಗಳ ರೇಖಾಚಿತ್ರ ಕಾರ್ಯಾಗಾರ

 ನ.27ರಿಂದ ಮೂರು ದಿನಗಳ ರೇಖಾಚಿತ್ರ ಕಾರ್ಯಾಗಾರ

ಕಲಬುರಗಿ: ಅನುಚಂದ್ರ ದೃಶ್ಯಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ನಗರದ ಆಳಂದ ರಸ್ತೆಯ ವಿಜಯನಗರ ಕಾಲೋನಿಯಲ್ಲಿರುವ ಅನುಚಂದ್ರ ಗ್ರಾಫಿಕ್ ಸ್ಟುಡಿಯೋದಲ್ಲಿ ನವೆಂಬರ್ 27ರಿಂದ 29ರವರೆಗೆ ಮೂರು ದಿನಗಳ ರೇಖಾಚಿತ್ರ ಕಾರ್ಯಾಗಾರ ಆಯೋಜಿಸಲಾಗಿದೆ.

ನವೆಂಬರ್ 27ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯ ಪತ್ರಕರ್ತ ಸಂಗಮನಾಥ ರೇವತಗಾಂವ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಹಿರಿಯ ಚಿತ್ರಕಲಾವಿದ ಬಾಬು ಜತ್ತಕರ್ ಅವರು ಕಾರ್ಯಾಗಾರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಖ್ಯಾತ ಕಲಾವಿದರಾದ ವೀರೇಂದ್ರ ಶಾಹ ಮತ್ತು ಡಾ. ಪರಶುರಾಮ ಪಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಚಂದ್ರಹಾಸ ವ್ಹಾಯ್ ಜಾಲಿಹಾಳ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಾಗಾರದಲ್ಲಿ ರಜನಿ ಡಿ. ತಿಲೆ, ಭಾಗ್ಯಶ್ರೀ ಸಿ., ಸುಧಾ ಸಾತನೂರಕರ್, ಮೀನಾಕ್ಷಿ ಎ. ಗುತ್ತೆದಾರ, ಸಾರಿಕಾ ಅಶೋಕಸಿಂಗ್ ಪಂತೋಜಿ, ತ್ರಿವೇಣಿ, ನೀಲಾಂಬಿಕಾ ಹಿರೇಮಠ, ಪೂಜಾ ಚಿಂದೆ, ಸೈಯದಾ ಉಮ್ಮೆ ಕುಲಸುಮ್, ಅಕ್ಸಾ ಮುಖಾಷಫ್, ವಿಜಯಲಕ್ಷ್ಮಿ ವಿ., ಸೋನಾ ವಿ., ಅಖಿಲೇಶ ದೊಡ್ಡಮನಿ, ಶಹರಿಯಾರ್ ಉಸ್ತಾದ್, ಅಥರ್ವ ಬಗಾರೆ ಮತ್ತು ಸಮರ್ಥ ಸೋಮನಾಥ ಬುಕ್ಕಾ ಸೇರಿದಂತೆ ಕಲಾವಿದರು ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ನವೆಂಬರ್ 28ರಂದು ಸಂಜೆ 4.30ಕ್ಕೆ ಹಿರಿಯ ಚಿತ್ರಕಲಾವಿದ ಬಾಬು ಜತ್ತಕರ್ ಅವರ ಕಲಾಕೃತಿಗಳ ದೃಶ್ಯ ಪ್ರಸ್ತುತಿ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಲಾವಿದರಾದ ಮಲ್ಲಿಕಾರ್ಜುನ ಕೊರಳ್ಳಿ, ಸಿದ್ದು ಮರಗೋಳ, ಗಿರೀಶ ಕುಲಕರ್ಣಿ ಮತ್ತು ಬಿ.ಎನ್. ಪಾಟೀಲ್ ಸಂವಾದದಲ್ಲಿ ಭಾಗವಹಿಸಲಿದ್ದು, ಕಲಾ ಶಿಕ್ಷಕ ಹಾಗೂ ಚಿತ್ರಕಲಾವಿದ ಸೂರ್ಯಕಾಂತ ನಂದೂರ ಅಧ್ಯಕ್ಷತೆ ವಹಿಸಲಿದ್ದಾರೆ.

ನವೆಂಬರ್ 29ರಂದು ಸಮಾರೋಪ ಸಮಾರಂಭದ ಅಂಗವಾಗಿ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳು ರಚಿಸಿದ ರೇಖಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸಾಮಾಜಿಕ ಚಿಂತಕ ಪ್ರೊ. ಆರ್.ಕೆ. ಹುಡುಗಿ ಅವರು ಕಲಾಪ್ರದರ್ಶನ ಉದ್ಘಾಟಿಸಲಿದ್ದಾರೆ. ಹಿರಿಯ ಕಲಾವಿದರಾದ ಡಾ. ಅಶೋಕ ಶಟಕಾರ್ ಮತ್ತು ದೌಲತರಾಯ ದೇಶಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾರ್ಯಾಗಾರದ ನಿರ್ದೇಶಕ ಬಾಬು ಜತ್ತಕರ್ ಉಪಸ್ಥಿತರಿರಲಿದ್ದಾರೆ. ಹಿರಿಯ ಚಿತ್ರಕಲಾವಿದ ಚಂದ್ರಹಾಸ ವ್ಹಾಯ್ ಜಾಲಿಹಾಳ್ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಜಲಜಾಕ್ಷಿ ಕುಲಕರ್ಣಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.