ನಿಯೋಲೈಫ್ ಮೆಡಿಕಲ್ ಸೆಂಟರ್ ಉದ್ಘಾಟಿಸಿದ ಸಚಿವ ಡಾ. ಶರಣಪ್ರಕಾಶ ಪಾಟೀಲ
ನಿಯೋಲೈಫ್ ಮೆಡಿಕಲ್ ಸೆಂಟರ್ ಉದ್ಘಾಟಿಸಿದ ಸಚಿವ ಡಾ. ಶರಣಪ್ರಕಾಶ ಪಾಟೀಲ
ಕಲಬುರಗಿ: ನವಜಾತ ಶಿಶುಗಳು ಹಾಗೂ ಮಕ್ಕಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ನಗರದ ಸೇಡಂ ರಸ್ತೆಯ ಓಲ್ಡ್ ಆರ್ಟಿಒ ಕಚೇರಿ ಎದುರು ಆರಂಭಿಸಲಾದ ನಿಯೋಲೈಫ್ ಮೆಡಿಕಲ್ ಸೆಂಟರ್ ಅನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯದ ಆರೈಕೆಗೆ ವಿಶೇಷ ವೈದ್ಯಕೀಯ ಸೌಲಭ್ಯಗಳು ಅತ್ಯಂತ ಅಗತ್ಯವಾಗಿವೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನ ಹಾಗೂ ಪರಿಣತ ವೈದ್ಯರ ಸೇವೆಯೊಂದಿಗೆ ಆರಂಭವಾಗಿರುವ ನಿಯೋಲೈಫ್ ಮೆಡಿಕಲ್ ಸೆಂಟರ್ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವಂತಾಗಲಿ ಎಂದು ಆಶಿಸಿದರು.
ಕೇಂದ್ರದಲ್ಲಿ ಸಂಪೂರ್ಣ ನವಜಾತ ಶಿಶು ಮತ್ತು ಮಕ್ಕಳ ಆರೈಕೆ ಹಾಗೂ ಸ್ಕ್ಯಾನಿಂಗ್ ಸೇವೆಗಳನ್ನು ಒದಗಿಸಲಾಗುತ್ತದೆ. ಡಾ. ಚರಣರಾಜ್ ಎ. ಹೊನ್ನಳ್ಳಿ (MD ಪೀಡಿಯಾಟ್ರಿಕ್ಸ್, DM ನಿಯೋನಾಟಾಲಜಿ) ಹಾಗೂ ಡಾ. ಸ್ನೇಹಾ ಸಿ. ಹೊನ್ನಳ್ಳಿ (MBBS, MD ರೇಡಿಯೋ ಡಯಾಗ್ನೋಸಿಸ್) ವೈದ್ಯಕೀಯ ಸೇವೆ ಒದಗಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಟ್ಟಿಮನಿ ಸಂಸ್ಥಾನ ಹಿರೇಮಠ, ಮುಗುಳುನಗಾವಿಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಹಾಗೂ ಮಹಾಂತಪುರ ಚಿನಮ್ಯಾಗೇರಿಯ ವೀರಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಶಾಸಕಿ ಕನೀಜ್ ಫಾತಿಮಾ, ಮೇಯರ್ ಅಜ್ಮಲ್ ಗೋಲಾ, ಜಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹಾರವಾಳ, ಚಂದ್ರಶೇಖರ ಹೊನ್ನಳ್ಳಿ, ಅಶೋಕ ಸಿ. ಹೊನ್ನಳ್ಳಿ (ನಿರ್ದೇಶಕರು, ಅಶೋಕ ಗ್ರೂಪ್ಸ್), ಮಾಜಿ ಮೇಯರ್ ರವೀಂದ್ರ ಹೊನ್ನಳ್ಳಿ, ಹಾಗೂ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಎ. ಹೊನ್ನಳ್ಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

