ಕರ್ನಾಟಕ ತಾಂಡಾಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ಸುಭಾಷ ರಾಠೋಡ್ ನೇಮಕ
ಕರ್ನಾಟಕ ತಾಂಡಾಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ಸುಭಾಷ ರಾಠೋಡ್ ನೇಮಕ
ಚಿಂಚೋಳಿ ಮತಕ್ಷೇತ್ರದ ಕಾರ್ಯಕರ್ತರಲ್ಲಿ ಉತ್ಸಾಹದ ಶಕ್ತಿ ಚಿಮ್ಮಿಸಿದ ಕಾಂಗ್ರೆಸ್
ಚಿಂಚೋಳಿ : ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ವ್ಹಿ ರಾಠೋಡ ಅವರಿಗೆ ಸರಕಾರ ಕರ್ನಾಟಕ ತಾಂಡಾಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶಿದೆ.
ಕಂಪನಿ ಕಾಯ್ದೆ 1956 ಕಲಂ 17ರನ್ವಯ ಸುಭಾಷ ರಾಠೋಡ್ ಅವರನ್ನು ಕರ್ನಾಟಕ ತಾಂಡಾಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನಾಮ ನಿರ್ದೇಶಸಲಾಗಿದೆ ಎಂದು ರಾಜ್ಯಪಾಲರ ಆದೇಶ ಅನುಸಾರ ಸಮಾಜದ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು 2026 ನ. 25 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ಈ ಆದೇಶವು ಮುಂದಿನ ಆದೇಶ ಆಗುವವರೆಗೆ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಖಂಡ ಸುಭಾಷ ರಾಠೋಡ ಅವರು ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಕದ ಆದೇಶದ ಹಿನ್ನಲೆಯಲ್ಲಿ ಚಿಂಚೋಳಿ ಕ್ಷೇತ್ರದ ಕಾರ್ಯಕರ್ತರಲ್ಲಿ ಉತ್ಸಾಹದ ಶಕ್ತಿ ಬದಂತಾಗಿದೆ ಎಂದು ಜವಾಹರ ಬಾಲಭವನ ಉಪಾಧ್ಯಕ್ಷ ಅನೀಲ್ ದೇವೀಂದ್ರಪ್ಪ ಜಮಾದಾರ್, ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ, ಲಕ್ಷ್ಮಣ ಆವಂಟಿ ಹಾಗೂ ಅಬ್ದುಲ್ ಬಾಶೀದ್, ಯುವ ಮುಖಂಡ ನಾಗೇಶ ಗುಣಾಜಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರುಗಳಿಂದ ಸಾಮಾಜಿಕ ಜಾಲಾತಾಣಗಳಲ್ಲಿ ನಾಯಕನ ಆಯ್ಕೆಗೆ ಅಭಿನಂದನೆಗಳ ಪೋಸ್ಟ್ ಕಾರ್ಡಗಳು ಹರಿದು ಬಿಟ್ಟು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

