ಶಿಕ್ಷಕಿಯರು ಸಮಾಜ ಪರಿವರ್ತನೆಯ ರೂವಾರಿಗಳು: ಡಾ. ಲತಾ ಎಸ್. ಮುಳ್ಳೂರ್

ಶಿಕ್ಷಕಿಯರು ಸಮಾಜ ಪರಿವರ್ತನೆಯ ರೂವಾರಿಗಳು: ಡಾ. ಲತಾ ಎಸ್. ಮುಳ್ಳೂರ್

ಶಿಕ್ಷಕಿಯರು ಸಮಾಜ ಪರಿವರ್ತನೆಯ ರೂವಾರಿಗಳು: ಡಾ. ಲತಾ ಎಸ್. ಮುಳ್ಳೂರ್

ಕಲಬುರಗಿ: ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಮಹತ್ತರ ಜವಾಬ್ದಾರಿ ಶಿಕ್ಷಕಿಯರ ಮೇಲಿದೆ. ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸಮಾನತೆಗಾಗಿ ಶಿಕ್ಷಕಿಯರು ಶ್ರಮಿಸಬೇಕು ಎಂದು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್‌ನ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷೆ ಡಾ. ಲತಾ ಎಸ್. ಮುಳ್ಳೂರ್ ಹೇಳಿದರು.

ನಗರದ ಬಸವೇಶ್ವರ ಆಸ್ಪತ್ರೆಯ ಆಡಿಟೋರಿಯಂನಲ್ಲಿ ಭಾನುವಾರ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ (ರಿ), ನವದೆಹಲಿ ಕೇಂದ್ರ ಕಚೇರಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಘಟಕ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಲಬುರಗಿ ವಿಭಾಗೀಯ ಮಟ್ಟದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕಿಯರ ಪಾತ್ರ ಮಹತ್ವದ್ದಾಗಿದ್ದು, ಸಮಾಜದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ. ಶಿಕ್ಷಕಿಯರು ಸಂಘಟಿತರಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಎದುರಿಸಬೇಕು. ಸಾವಿತ್ರಿಬಾಯಿ ಫುಲೆ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಹೋರಾಟದ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜೇಶ್ವರಿ ಎ. ಸಜ್ಜೇಶ್ವರ್, ಪೂರ್ಣಿಮಾ ಶಶೀಲ್ ನಮೋಶಿ, ಅಭಿಷೇಕ್ ಪಾಟೀಲ್, ಡಾ. ಸಾರಿಕಾ ಎಸ್. ಗಂಗಾ, ಪಲ್ಲವಿ, ಮಂಜುಳಾ, ರೇಣುಕಾ, ಸೇವಂತಾ ಚವಾಣ್, ಸಾವಿತ್ರಿ ಪಾಟೀಲ್, ಲತಾ ಟಿ.ಎಚ್.ಎಂ., ಛಾಯಾದೇವಿ, ಶಶಿಕಲಾ, ಪ್ರಭಾವತಿ, ಅನಸೂಯ, ಆಯುಧತ್ತಿ, ಅರ್ಚನಾ ಜೈನ್ ಸೇರಿದಂತೆ ರಾಜ್ಯ ಪಾದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಕಲ್ಯಾಣ ಕರ್ನಾಟಕ ಪದಾಧಿಕಾರಿಗಳು ಉಪಸ್ಥಿತರಿದ್ದರು.