ಕಲಬುರಗಿಯಲ್ಲಿ ನ.೩೦ರಂದು ಉಚಿತ ಪಂಚಗವ್ಯ ತಪಾಸಣಾ ಶಿಬಿರ

ಕಲಬುರಗಿಯಲ್ಲಿ ನ.೩೦ರಂದು ಉಚಿತ ಪಂಚಗವ್ಯ ತಪಾಸಣಾ ಶಿಬಿರ

ಕಲಬುರಗಿಯಲ್ಲಿ ನ.೩೦ರಂದು ಉಚಿತ ಪಂಚಗವ್ಯ ತಪಾಸಣಾ ಶಿಬಿರ

ಕಲಬುರಗಿ: ವಿಶ್ವ ಹಿಂದೂ ಪರಿಷತ್ ಕಲಬುರಗಿ ಮಹಾನಗರದ ಗೋರಕ್ಷಾ ವಿಭಾಗದ ವತಿಯಿಂದ ನ.೩೦ರಂದು ಉಚಿತ ಪಂಚಗವ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ ೧೦ರಿಂದ ಸಂಜೆ ೫ರವರೆಗೆ ಹೊಸ ಜೇವರ್ಗಿ ರಸ್ತೆಯ ಖಮೀತರ್ಕ ಬಿಸಿನೆಸ್ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿ ಶಿಬಿರ ನಡೆಯಲಿದೆ.

ಕಳೆದ ೨೫ ವರ್ಷಗಳಿಂದ ಸುದೀರ್ಘ ಅನುಭವ ಹೊಂದಿರುವ ಡಾ. ಡಿ.ಪಿ. ರಮೇಶ್ ಅವರು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ನಡೆಸಲಿದ್ದಾರೆ. ಕ್ಯಾನ್ಸರ್, ಮಧುಮೇಹ, ಸೋರಿಯಾಸಿಸ್, ಮೂತ್ರಪಿಂಡದ ಕಾಯಿಲೆ, ಮಾನಸಿಕ ಕಾಯಿಲೆ, ಸ್ತ್ರೀಯರ ಆರೋಗ್ಯ ಸಮಸ್ಯೆಗಳು, ಚರ್ಮರೋಗ, ಥೈರಾಯಿಡ್, ರಕ್ತದೊತ್ತಡ, ಅಸ್ತಮಾ, ಬಂಜೆತನ, ಗ್ಯಾಸ್ಟ್ರಿಕ್ ಹಾಗೂ ಹೃದ್ರೋಗ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಪಂಚಗವ್ಯ ಔಷಧಿಗಳ ಮೂಲಕ ಚಿಕಿತ್ಸೆ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಶಿಬಿರಕ್ಕೆ ಬರುವವರು ತಮ್ಮ ಹಿಂದಿನ ವೈದ್ಯಕೀಯ ದಾಖಲೆಗಳನ್ನು ತರಬೇಕು. ಪ್ರತಿ ತಿಂಗಳು ಇಂತಹ ಶಿಬಿರ ಆಯೋಜಿಸಲಾಗುತ್ತದೆ. ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಮಾಹಿತಿಯನ್ನು ತಲುಪಿಸುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೮೭೬೨೩೪೯೫೬೬ ಸಂಪರ್ಕಿಸಬಹುದು.