ಶರಣರ ಕನಸಿನ ಸಮಾಜ...
ಶರಣರ ಕನಸಿನ ಸಮಾಜ...
ಮಾನವರೆಲ್ಲರು ಸಮಾನರು ಎಲ್ಲರಲ್ಲಿವುದು ಒಂದೇ ಉಸಿರು ಎಲ್ಲರ ದೇಹದಲ್ಲಿ ಹರಿವುದು ಒಂದೇ ನೆತ್ತರು ಆದರೆ ಏಕೆ
ಜಾತಿ,ಕುಲವೆಂದು ಬಡಿದಾಡುವರು ?
ಏಕೆ ಧನ, ಕನಕ, ಆಸ್ತಿಗೆ ಹಂಬಲಿಸುವರು ?
ಉಸಿರಿರುವತನಕ ಎಲ್ಲವು ನನಗೆ ಬೇಕೆನ್ನುವರು
ಉಸಿರೇ ಹೋದ ಮೇಲೆ ಇವರೆಲ್ಲಿರುವರು ?
ಇದಕ್ಕಾಗಿಯೆ ಶರಣರು ಆದರ್ಶ ಸಮಾಜದ ಕನಸು ಕಂಡರು ಕನಸಿನಲ್ಲಿ ಜಾತಿ ಭೇದವೆಲ್ಲ ಹೋಗಲಾಡಿಸಿದರು ಉಚ್ಚ ಕನಿಷ್ಠ
ಕುಲದವರೆಲ್ಲರು ಒಂದೇ
ಕುಟುಂಬದವರಾದರು ಬ್ರಾಹ್ಮಣ, ಶೂದ್ರರು ಬಂಧು-ಬಾಂಧವರಾದರು ಆಸ್ತಿ, ಅಂತಸ್ತು, ಧನ, ಕನಕವೆಲ್ಲ ಶಿವಾರ್ಪಣೆ ಮಾಡಿದರು ಕಳವು.
ಕೊಲೆ. ಹುಸಿ ನುಡಿಗಳೆಲ್ಲ ಬಿಟ್ಟರು
ಆಸೆ. ಆಮಿಷ, ತಾಮದವೆಲ್ಲ ಸುಟ್ಟರು. ಆನೆ, ಕುದುರೆ, ಭಂಡಾರ ನಮಗೇಕೆಂದರು ಸರ್ವರು ಕಾಯಕ ಜೀವಿಗಳಾದರು
ಕಾಯಕದಲ್ಲಿ ಭೇದ-ಭಾವ ಮರೆತರು ಲಿಂಗವೇ ಜಗತ್ತಿನ
ಪ್ರತಿರೂಪವೆಂದರು ಅರುಹಿನ ಕುರುಹೆ ಲಿಂಗ ಮಾಡಿಕೊಂಡರು
ಲಿಂಗದ ಕುರುಹೆ ಶರಣರ ದೇವರು ಆತ್ಮದಲ್ಲಿಯೇ ಪರಮಾತ್ಮನನ್ನು ಕಂಡರು
ದೇಹವೆ ದೇವಾಲಯ ಮಾಡಿಕೊಂಡರು ಶರಣರಿಗೆ ಆತ್ಮವೇ ದೇವರು
ಪರಿಶುದ್ಧ ಕಾಯಕವೆ ಪೂಜೆ ಎಂದರು ಸತ್ಯ ಶುದ್ಧ ನುಡಿಗಳು
ಜಪ-ತಪ ಮಂತ್ರಗಳಾಗಿ ಜಪಿಸಿದರು
ನಿತ್ಯ ನಿರಂತರ ಕಾಯಕ, ದಾಸೋಹವೆ ಶರಣರ ಉಸಿರು ಶರಣರು ಸಮಾನತೆಯ ಹರಿಕಾರರಾದರು ಸಮಾನತೆ ಸಾಧಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟರುಕೊನೆಗೆ ವಿಜಾತಿಯ ಕಲ್ಯಾಣೋತ್ಸವ ಮಾಡಿದರು ಸಾಂಪ್ರದಾಯಸ್ತರ ಕಪಿ ಮುಷ್ಠಿಗೆ ಸಿಕ್ಕು ಹತರಾದರು ಅನೇಕ ಶರಣರು ಚಿರ ನಿದ್ರೆಗೆ ಜಾರಿದರು ಹನ್ನೆರಡನೇ ಶತಮಾನದ ಕನಸಿನಿಂದ ಹನ್ನೆರಡನೇ ಶತಮಾನದಲ್ಲಿ ಎಚ್ಚತ್ತು ನೋಡಿದರೂ ಮತ್ತೆ ಅದೇ ಆಸಾಮಾನತೆ. ಜಾತಿ ಭೇದ. ಹಣದ ಹಪಹಪಿಯಲ್ಲಿ ಕಾಣುತ್ತಿದ್ದಾರೆ ಮಾನವರು
-ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ,ಕಲಬುರಗಿ

