ಕನಕದಾಸರ ಸಂದೇಶ ಸಮಾಜಕ್ಕೆ ದಾರಿದೀಪ: ವೀರಣ್ಣ ಯಾರಿ

ಕನಕದಾಸರ ಸಂದೇಶ ಸಮಾಜಕ್ಕೆ ದಾರಿದೀಪ: ವೀರಣ್ಣ ಯಾರಿ

ಕನಕದಾಸರ `ಸಂದೇಶ` ಸಮಾಜಕ್ಕೆ ದಾರಿದೀಪ: ವೀರಣ್ಣ ಯಾರಿ

ವಾಡಿ: ಸಂತ ಕನಕದಾಸರು ತಮ್ಮ ಕೀರ್ತನೆಗಳು ಮತ್ತು ಸರಳ ಬದುಕಿನ ಮೂಲಕ ಸಮಾಜಕ್ಕೆ ನೀಡಿದ ಸಮಾನತೆಯ ಸಂದೇಶವು ಸರ್ವಕಾಲಕ್ಕೂ ಪ್ರೇರಣೆಯಾಗಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನಕದಾಸರು ಕೇವಲ ದಾಸರಷ್ಟೇ ಆಗಿರದೆ, ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ ಸಾಮಾಜಿಕ ಸುಧಾರಕರಾಗಿದ್ದರು. ಮನುಷ್ಯ ಹುಟ್ಟಿನಿಂದಲ್ಲ, ಗುಣದಿಂದ ಶ್ರೇಷ್ಠನಾಗುತ್ತಾನೆ ಎಂಬ ಸತ್ಯವನ್ನು ಅವರು ಸಾರಿದರು ಎಂದರು.

ಉಡುಪಿಯ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ಸಿಗದಿದ್ದಾಗಲೂ, ದ್ವೇಷ ಸಾಧಿಸದೆ ತಮ್ಮ ನಿಷ್ಕಲ್ಮಶ ಭಕ್ತಿಯಿಂದಲೇ ದೇವರನ್ನು ಒಲಿಸಿಕೊಂಡ 'ಕನಕನ ಕಿಂಡಿ'ಯ ಘಟನೆ ಭಕ್ತಿಯ ಶಕ್ತಿಗೆ ಸಾಕ್ಷಿಯಾಗಿದೆ. ಇಂದು ಜಾತಿ, ಧರ್ಮಗಳ ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿರುವ ಸಂದರ್ಭದಲ್ಲಿ ಕನಕದಾಸರ ಸರಳತೆ, ಅಹಂಕಾರ ರಹಿತ ಬದುಕು ಮತ್ತು ಸಮಾನತೆಯ ಸಂದೇಶಗಳು ನಮಗೆ ದಾರಿದೀಪವಾಗಬೇಕಿದೆ ಎಂದು ಅವರ ತತ್ವಗಳನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಶರಣಗೌಡ ಚಾಮನೂರ, ಅಶೋಕ ಹರನಾಳ, ಗಿರಿಮಲ್ಲಪ್ಪ ಕಟ್ಟಿಮನಿ, ಭೀಮರಾವ ದೊರೆ, ರವೀಂದ್ರ ನಾಯಕ, ಹರಿ ಗಲಾಂಡೆ, ರಿಚರ್ಡ್ ಮಾರೆಡ್ಡಿ, ಅಶೋಕ ಪವಾರ, ಅಂಬಾದಾಸ ಜಾಧವ, ನಿರ್ಮಲಾ ಇಂಡಿ, ಚಂದ್ರಶೇಖರ ಬೆಣ್ಣೂರ, ಸುನೀಲ ಪಂಚಾಳ, ರಾಚಣ್ಣ ಶೀಲವಂತ, ಶಿವಾನಂದ ಕಟ್ಟಿಮನಿ, ಹಾಲುಮತ ಸಮಾಜದ ಪ್ರಮೋದ ಚೊಪಡೆ, ಪ್ರದೀಪ ಸುಳೆ, ಸಿದ್ದು ಪೂಜಾರಿ, ಬಸವರಾಜ ಬಿರಾಳ, ಮಲ್ಲಿಕಾರ್ಜುನ ಬಿರಾಳ, ಮಲ್ಲಪ್ಪ ಬಿರಾಳ, ವಿಶ್ವನಾಥ ಚಾಮನೂರ, ಅಂಬ್ರೇಷ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.