ಸುಭಾಷ್ ರಾಠೋಡ ಅವರಿಗೆ ಸನ್ಮಾನ
ಸುಭಾಷ್ ರಾಠೋಡ ಅವರಿಗೆ ಸನ್ಮಾನ
ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರದ ತಾಂಡಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಸುಭಾಷ್ ರಾಠೋಡ ಅವರಿಗೆ ಕಲ್ಯಾಣ ಕರ್ನಾಟಕ ಮಹಾವಿದ್ಯಾಲಯ ಹಿಂದಿ ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷರಾದ ಡಾ ಪ್ರೇಮಚಂದ ಚವ್ಹಾಣ ಹಾಗೂ ಕಲಬುರಗಿ ಬಂಜಾರಾ ನಗರ ಅಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ ಕೃಷ್ಣ ನಾಯ್ಕ ಅವರು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸುಭಾಷ್ ರಾಠೋಡ ಅವರು ನಾನು ನಮ್ಮ ತಾಂಡಾಗಳ ಅಭಿವೃದ್ಧಿ ಕಡೆಗೆ ಗಮನ ಹರಿಸುವೆನು ಹಾಗೂ ತಾಂಡಾ ಜನರಿಗೆ ಬೇಕಾದ ಮೂಲ ಸೌಕರ್ಯಗಳು ಒದಗಿಸಲು ಶ್ರಮಿಸುವೇನು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದಿನೇಶ್ ಚವ್ಹಾಣ, ರಿತೇಶ್ ಚವ್ಹಾಣ, ಉಜ್ವಲ್ ಚವ್ಹಾಣ, ಪ್ರಜ್ವಲ್ ಚವ್ಹಾಣ, ಅಶುತೋಷ್ ಚವ್ಹಾಣ ಹಾಗೂ ಪಿಯೂಷ್ ಚವ್ಹಾಣ ಉಪಸ್ಥಿತರಿದ್ದರು.

