ಹಾರಕೂಡ ಶ್ರೀಗಳ ಜನ್ಮ ದಿನ : ಅ. ಭಾ. ವೀ. ಲಿಂ. ಮಹಾಸಭಾ ವತಿಯಿಂದ ಅನ್ನ ದಾಸೋಹ ನ. 21ಕ್ಕೆ

ಹಾರಕೂಡ ಶ್ರೀಗಳ ಜನ್ಮ ದಿನ : ಅ. ಭಾ. ವೀ. ಲಿಂ. ಮಹಾಸಭಾ ವತಿಯಿಂದ ಅನ್ನ ದಾಸೋಹ ನ. 21ಕ್ಕೆ

ಹಾರಕೂಡ ಶ್ರೀಗಳ ಜನ್ಮ ದಿನ : ಅ. ಭಾ. ವೀ. ಲಿಂ. ಮಹಾಸಭಾ ವತಿಯಿಂದ ಅನ್ನ ದಾಸೋಹ ನ. 21ಕ್ಕೆ 

ಚಿಂಚೋಳಿ : ಹಾರಕೂಡ ಸಂಸ್ಥಾನ ಹಿರೇಮಠ ಸುಕ್ಷೇತ್ರ ಹಾರಕೂಡ ಹಾಗೂ ಚಿಂಚೋಳಿಯ ಪರಮ ಪೂಜ್ಯ ಶ್ರೀ ಷ.ಬ್ರ. ಡಾ. ಚನ್ನವೀರ ಶಿವಾಚಾರ್ಯರ 64ನೇ ಜನ್ಮದಿನೋತ್ಸವ ನಿಮಿತ್ಯವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಂಚೋಳಿ ಘಟಕದ ವತಿಯಿಂದ ಅನ್ನ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ಅವರು ತಿಳಿಸಿದ್ದಾರೆ.

"ಕರ್ನಾಟಕ ರಾಜ್ಯೋತ್ಸವ" ಪ್ರಶಸ್ತಿ ಪುರಸ್ಕೃತರು ಹಾಗೂ "ಸೇವಾಚಾರ್ಯ ರತ್ನ", "ಧರ್ಮರತ್ನ", "ದಾಸೋಹ ರತ್ನ", "ಸದ್ಧರ್ಮ ಶಿರೋಮಣಿ", "ಕರ್ನಾಟಕ ಸಾಂಸ್ಕೃತಿಕ ರತ್ನ" ಮುಂತಾದ ಬಿರುದುಗಳಿಗೆ ಭಾಜನರಾಗಿರುವ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮ ಶನಿವಾರ ನ. 21 ರಂದು ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆಯಲಿದೆ. 

ಬೆಳಿಗ್ಗೆ 11 ಗಂಟೆಗೆ ನರನಾಳ ಸಂಸ್ಥಾನ ಹಿರೇಮಠದ ಶಿವಕುಮಾರ ಶಿವಾಚಾರ್ಯರು ಅನ್ನ ದಾಸೋಹಕ್ಕೆ ಚಾಲನೆ ನೀಡಲಿದ್ದು, ಕಾರ್ಯಕ್ರಮ ಅತ್ಯಂತ ಭಕ್ತಿ-ಭಾವದಿಂದ ಆಚರಿಸಲು ಮಹಾಸಭಾ ನಿರ್ಣಯಿಸಿದೆ. ಶ್ರೀಗಳ ಜನ್ಮದಿನದ ಹಿನ್ನಲೆಯಲ್ಲಿ ಅನ್ನ ದಾಸೋಹ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಸರ್ವ ಭಕ್ತಾದಿಗಳು, ಶರಣ ಬಂಧುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮಹಾಸಭಾದ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ಅವರು ಪ್ರಕಟಣೆಯ ಮೂಲಕ ಸದ್ಭಕ್ತರಲ್ಲಿ ಭಕ್ತಿ ಪೂರ್ವಕವಾಗಿ ವಿನಂತಿಸಿಕೊಂಡಿದ್ದಾರೆ.