ಕುಡಿಯುವ ನೀರಿನ ಕೊರತೆ ನಿಗಿಸುವುದಕ್ಕೆ ತಹಸೀಲ್ದಾರ ಕೋರ್ಟ್ ಹಾಲ್ ನಲ್ಲಿ ಅಧಿಕಾರಿಗಳೊಂದಿಗೆ ಶಾಸಕ ಡಾ. ಅವಿನಾಶ ಜಾಧವ ಸಭೆ ನಡೆಸಿದರು
ಕುಡಿಯುವ ನೀರಿನ ಕೊರತೆ ನಿಗಿಸುವುದಕ್ಕೆ ತಹಸೀಲ್ದಾರ ಕೋರ್ಟ್ ಹಾಲ್ ನಲ್ಲಿ ಅಧಿಕಾರಿಗಳೊಂದಿಗೆ ಶಾಸಕ ಡಾ. ಅವಿನಾಶ ಜಾಧವ ಸಭೆ ನಡೆಸಿದರು.
ಅನುದಾನದ ಕೊರತೆ ನೆಪಗಳು ಹೇಳದೆ ಜನರಿಗೆ ಕುಡಿಯಲು ನೀರು ಒದಗಿಸಿ : ಅಧಿಕಾರಿಗಳಿಗೆ ಶಾಸಕ ಅವಿನಾಶ ಜಧಾವ್ ಖಡಕ್ ಸೂಚನೆ
ಆಳಂದ-ಸೇಡಂ ತಾಲೂಕಿನ ರೈತರ ಮೋಟಾರ ಪಂಪಸೆಟ್ ಗಳಿಗೆ ಇಲ್ಲದ ವಿದ್ಯತ್ ಸಂಪರ್ಕ ಕಟ್ಟ ಆದೇಶ ಚಿಂಚೋಳಿ ರೈತರಿಗೆ ಏಕೆ ? ಶಾಸಕ ಗರಂ
ಚಿಂಚೋಳಿ : ಗ್ರಾ.ಪಂಚಾಯತಿಗಳಿಗೆ ಅನುದಾನಕ್ಕೆ ಕೊರತೆ ಇಲ್ಲ. ಅಧಿಕಾರಿಗಳು ಕುಂಟು ನೆಪ ಹೇಳದ ಜನರಿಗೆ ಕುಡಿಯಲು ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಶಾಸಕ ಡಾ. ಅವಿನಾಶ ಜಾಧವ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಅವರು ತಾಲೂಕ ಪ್ರಜಾಸೌಧದ ತಹಸೀಲ್ದಾರ ಕೋರ್ಟ್ ಹಾಲನಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ತೆಗೆದುಕೊಂಡ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು.
ತಾಲೂಕಿನ ಗ್ರಾಮ ಪಂಚಾಯತಿಗಳ ಖಾತೆಗಳಲ್ಲಿ ಅನುದಾನಕ್ಕೆ ಯಾವುದೇ ಕೊರತೆ ಇಲ್ಲ. ಹೀಗಾಗಿ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿ ತೊದರೆಗಳು ಆಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಈ ವರ್ಷ ಮಳೆ ಇಲ್ಲದ ಕಾರಣ ಅಂತರ್ಜಲ ಮಟ್ಟ ಕುಸಿದಿರುವ ಕಾರಣ ಗ್ರಾಮ ಮತ್ತು ತಾಂಡಗಳಲ್ಲಿ ನೀರಿನ ಸಮಸ್ಯೆಗಳು ಉಂಟಾಗಿವೆ. ಇದಕ್ಕೆ ಪರಿಯಾಯ ಮಾರ್ಗ ಕಂಡು ಹಿಡಿದು ಜನರಿಗೆ ನೀರು ಕುಡಿಸಲು ಮೊದಲ ಆದ್ಯತೆ ಕೊಟ್ಟು ಕ್ರಮಕೈಗೊಳ್ಳಬೇಕು. ಜನರಿಗೆ ಅನುದಾನದ ಇಲ್ಲ ಎಂದು ಕುಂಟು ನೆಪ ಹೇಳಿ ಅಧಿಕಾರಿಗಳು ಜಾರಿಕೊಳ್ಳುವ ತಂತ್ರಗಳನ್ನು ಉಪಯೋಗಿಸದೆ ಜನರಿಗೆ ಮತ್ತು ಜಾನುವಾರುಗಳಿಗೆ ನೀರು ಮತ್ತು ಮೇವು ಒದಗಿಸುವ ಕೆಲಸ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರಲ್ಲದೇ 7 ದಿನದಲ್ಲಿ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಕಿತ್ತು ಮಾಡಿದರು. ಚಂದ್ರಂಪಳ್ಳಿ ಜಲಾಶಯದಲ್ಲಿ ಶೇ. 36 ರಷ್ಟು ಮಾತ್ರ ನೀರು ಶೇಖರಣೆ ಇದ್ದು,
ಕೆಳದಂಡೆ ಮುಲ್ಲಾಮಾರಿ ನಾಗರಾಳ ಜಲಾಶಯದ ಶೇ. 75 ರಷ್ಟು ನೀರು ಸಂಗ್ರಹವಾಗಿದೆ. ಇದನ್ನು ಕುಡಿಯಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಇದಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಬೇಕಾಗುತ್ತದೆ ಎಂದು ಅಧಿಕಾರಿ ಅಮೃತ ಪವಾರ ತಿಳಿಸಿದರು. ಇದೇ ವೇಳೆ ಚಂದ್ರಂಪಳ್ಳಿ ಜಲಾಶಯದ ಚೇತನ ಕಳಸ್ಕರ ಇಇ ಮಹತ್ವದ ಚರ್ಚೆಗಳು ನಡೆಯುವ ಸಭೆಗಳಿಗೆ ನಿರಂತರವಾಗಿ ಗೈರು ಆಗುತ್ತಿರುವುದನ್ನು ಕಂಡುಬಂದ ಹಿನ್ನಲೆಯಲ್ಲಿ ಇಇ ಅವರಿಗೆ ನೋಟಿಸ್ ಜಾರಿ ಮಾಡಲು ಶಾಸಕರು ತಹಸೀಲ್ದಾರರಿಗೆ ಆದೇಶಿಸಿದರು. ಮೇಲಾಧಿಕಾರಿಗಳ ಆದೇಶಿಸಿರುವ ಹಿನ್ನಲೆಯಲ್ಲಿ ನಂದಿ ಪಾತ್ರಗಳಿಗೆ ಹೊಂದಿಕೊಂಡಿರುವ ರೈತರ ಮೋಟಾರ ಪಂಪ್ ಸೇಟ್ ಗಳಿಗೆ ಒಂದಗಿಸಿರುವ ವಿದುತ್ ಸಂಪರ್ಕ ಕಟ್ ಮಾಡಲಾಗಿದೆ ಎಂದು ಅಧಿಕಾರಿ ಕಾಮಣ್ಣ ಸಭೆಗೆ ತಿಳಿಸಿದರು. ಇದಕ್ಕೆ ಶಾಸಕಡಾ. ಅವಿನಾಶ ಜಾಧವ್ ಅವರು ಮಧ್ಯ ಪ್ರವೇಶಿಸಿ ಆಳಂದ ಮತ್ತು ಸೇಡಂ ತಾಲೂಕಿನ ಶಾಸಕರು ಕಾಂಗ್ರೇಸಿನವರು ಇದ್ದಕಾರಣಕ್ಕೆ ಅಲ್ಲಿನ ರೈತರ ಪಂಪ ಸೇಟ್ ವಿದ್ಯುತ್ ಕಟ್ ಆಗಿಲ್ಲ. ಚಿಂಚೋಳಿಯಲ್ಲಿ ಬಿಜೆಪಿ ಶಾಸಕ ಇದ್ದ ಕಾರಣಕ್ಕೆ ಟಾರ್ಗೆಟ್ ಮಾಡಿ ರೈತರ ಪಂಪ್ ಸೇಟ್ ಗಳಿಗೆ ವಿದ್ಯುತ್ ಸಂಪರ್ಕ ಕಟ್ ಮಾಡಿ ಸಮಸ್ಯೆ ಸೃಷ್ಠಿಸಲಾಗುತ್ತಿದೆ ಎಂದು ಶಾಸಕ ಡಾ. ಅವಿನಾಶ ಜಾಧವ ಆರೋಪಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಇಓ ಸಂತೋಷಕುಮಾರ ಚವ್ಹಾಣ, ಸಿಪಿಐ ಕಪೀಲದೇವ್, ಜೆಜೆಎಂ ಇಇ ಉಮೇಶ ರಾಠೋಡ, ಯುವರಾಜ ರಾಠೋಡ, ಕೆ.ಇ.ಬಿ ಇಇ ಕಾಮಣ್ಣ ಸೇರಿದಂತೆ ಗ್ರಾ. ಪಂ. ಪಿಡಿಓ ಮತ್ತು ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದರು.

