ಆಕ್ಸಿಲೈಫ್ ಆಸ್ಪತ್ರೆಯ 11ನೇ ವರ್ಷದ ಆಕ್ಸಿಫೆಸ್ಟ್ ಉದ್ಘಾಟನೆ
ಆಕ್ಸಿಲೈಫ್ ಆಸ್ಪತ್ರೆಯ 11ನೇ ವರ್ಷದ ಆಕ್ಸಿಫೆಸ್ಟ್ ಉದ್ಘಾಟನೆ
ಕಲಬುರಗಿ: ನಗರದ ಸೇಡಂ ರಸ್ತೆಯ ಖಾಸಗಿ ಸಭಾಂಗಣದಲ್ಲಿ ಆಕ್ಸಿಲೈಫ್ ಆಸ್ಪತ್ರೆಯ 11ನೇ ವರ್ಷದ ಆಕ್ಸಿಫೆಸ್ಟ್ ಕಾರ್ಯಕ್ರಮವನ್ನು ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರೋಗ್ಯ ಸೇವೆ ಎಂಬುದು ಕೇವಲ ವೃತ್ತಿಯಲ್ಲ, ಅದು ಮಾನವೀಯತೆ ಮತ್ತು ಸೇವಾ ಮನೋಭಾವದ ಪ್ರತೀಕವಾಗಿದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ವೈದ್ಯಕೀಯ ಕ್ಷೇತ್ರದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರು ರೋಗಿಗಳೊಂದಿಗೆ ಪ್ರೀತಿ, ಕಾಳಜಿ ಮತ್ತು ಸಹಾನುಭೂತಿಯಿಂದ ನಡೆದುಕೊಳ್ಳಬೇಕು. ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ದೇಶಮುಖ, ಚಂದ್ರಕಾಂತ್ ಗದ್ದಗಿ, ಚಿನ್ನಮ್ಮ ಗದ್ದಗಿ, ಡಾ. ಅನ್ಮೋಲ್ ಮೋದಿ, ಡಾ. ಪ್ರಿಯಾ ಗದ್ದಗಿ ಮೋದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

