ಕಲ್ಯಾಣ ಕರ್ನಾಟಕ ಜಾನಪದಶ್ರೀ ಪ್ರಶಸ್ತಿ ಪ್ರದಾನ
ಕಲ್ಯಾಣ ಕರ್ನಾಟಕ ಜಾನಪದಶ್ರೀ ಪ್ರಶಸ್ತಿ ಪ್ರದಾನ
ಕಲಬುರಗಿ: ತ್ರಿಶಾ ಎಜ್ಯುಕೇಶನ್ ಚಾರಿಟೇಬಲ್ ಮತ್ತು ವೆಲ್‌ಫೇರ್ ಟ್ರಸ್ಟ್ ವತಿಯಿಂದ ನಗರದ ಕನ್ನಡ ಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ಕಲ್ಯಾಣ ಕರ್ನಾಟಕ ಜಾನಪದಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕೌಶಲ್ಯಾಭಿವೃದ್ಧಿ ಕುರಿತು ಜಾಗೃತಿ ಶಿಬಿರ ನಡೆಯಿತು.
ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮೀ ಪೀಠದ ಪೂಜ್ಯ ಡಾ. ಅಪ್ಪಾರಾವ ದೇವಿಮುತ್ಯ ಹಾಗೂ ಅಂಬಲಗಾ ಶಕ್ತಿ ಪೀಠದ ಪೂಜ್ಯ ಶಿವಕುಮಾರ ಮುತ್ಯ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಸಮೃದ್ಧಿ ಡೆವಲಪರ್ಸ್‌ನ ಮುಖ್ಯಸ್ಥ ಡಾ. ಸುನೀಲ ರಾಠೋಡ, ನಿವೃತ್ತ ಮುಖ್ಯ ಅಭಿಯಂತರ ಡಾ. ಸುರೇಶ ಎಲ್. ಶರ್ಮಾ ಉಪಸ್ಥಿತರಿದ್ದರು.
ಕಾಂಗ್ರೆಸ್‌ನ ಹಿರಿಯ ಮಹಿಳಾ ಮುಖಂಡೆ ವಾಣಿಶ್ರೀ ಸಗರಕರ್ ಹಾಗೂ ಉದ್ಯಮಿ ಅನ್ನಪೂರ್ಣ ಸಂಗೋಳಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಮುಖ್ಯ ಭಾಷಣ ಮಾಡಿದರು. ಹಿರಿಯ ಕಾಂಗ್ರೆಸ್ ಮುಖಂಡ ದೊಡ್ಡಪ್ಪ ಪೂಜಾರಿ, ಮುಖ್ಯ ಶಿಕ್ಷಕಿ ಸಿಂಧುಮತಿ ಭೋಸ್ಥೆ, ಅಂಬಲಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಾಜೋದ್ದೀನ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಟ್ರಸ್ಟ್ ಅಧ್ಯಕ್ಷೆ ಅಶ್ವಿನಿ ಚವ್ಹಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ಕಟ್ಟಿಮನಿ, ಗುರುರಾಜ ಬಂಡಿ, ಸೈಯದ್ ಅಸ್ಪಾಕ್, ಅಮೀರ್ ನಿಂಬಾಳಕರ್, ನಿವೃತ್ತ ಕೆಇಬಿ ಅಧಿಕಾರಿ ಲಕ್ಷ್ಮಣ ಚೌಹಾಣ್,
ಹಣಮಂತ ಬಿರಾದಾರ, ಕುಮಾರ್ ಸಿಂಗ್ ಹಾಗೂ ಸೀತಾ ಬಡಿಗೇರ ಸೇರಿದಂತೆ ಹಲವರು ಭಾಗವಹಿಸಿದ್ದರು.
ವಿದ್ವಾನ್ ಅನಂತ ಕೆ. ಚಿಂಚನಸೂರ, ರೂಪಾಲಿ ರವೀಂದ್ರ, ಭವಾನಿ ಜಗದೇವ ಕದಲೂರ, ಸಂಜನಾ ಠಾಕೂರ, ದೇವಿಂದ್ರಪ್ಪ ಸಜ್ಜನ ಚಿಂಚನಸೂರ, ಸಚಿನ್ ಜಿ. ಲೋಕಾಣಿ (ಕಮಲನಗರ), ಮಹಾದೇವಿ ಪಾಟೀಲ, ಅರುಣಾದೇವಿ ಭಂಡಾರಿ, ಕೆ. ವಾಲಿ, ಮಡಿವಾಳಪ್ಪ ಹಾಗೂ ಸಂಪೂರ್ಣ ಪಾಟೀಲ ಅವರಿಗೆ ‘ಕಲ್ಯಾಣ ಕರ್ನಾಟಕ ಜಾನಪದಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಲ್ಪಾ ನಾಗೂರ, ಬಸಮ್ಮ ಶರಣಕುಮಾರ, ಶೀತಲ್ ಜ್ಯೋಶಿ ಹಾಗೂ ಜೈನಾಬಾಯಿ ರಾಠೋಡ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

