ಸೆ.23 ರಿಂದ 25ರ ವರೆಗೆ 82ನೇ ಉರ್ಸ್ ಶರೀಫ್ : ಧಾರ್ಮಿಕ ಕಾರ್ಯಕ್ರಮ

ಸೆ.23 ರಿಂದ 25ರ ವರೆಗೆ 82ನೇ ಉರ್ಸ್ ಶರೀಫ್ : ಧಾರ್ಮಿಕ ಕಾರ್ಯಕ್ರಮ

ಸೆ.23 ರಿಂದ 25ರ ವರೆಗೆ 82ನೇ ಉರ್ಸ್ ಶರೀಫ್ : ಧಾರ್ಮಿಕ ಕಾರ್ಯಕ್ರಮ :..

ಶಹಾಬಾದ : - ನಗರದ ಮಡ್ಡಿ ನಂ.2 ರಲ್ಲಿರುವ ದರ್ಗಾ ಶರೀಫ್ ಹಜರತ್ ಮಹೆಬೂಬ್-ಎ-ಸುಭಾನಿ ಅವರ 82ನೇ ಉರ್ಸ್ ಶರೀಫ್ ಹಾಗೂ ಶೈದಾ-ಎ-ಗೌಸೆ-ಎ-ಆಝಂ ಹಜರತ್ ಸೈಯದ್ ಶಾಹ್ ಗೌಸ್ ಮೊಹಿಯುದ್ದೀನ್ ಖಾದ್ರಿ ಅವರ 54ನೇ ಉರ್ಸ್ ಶರೀಫ್‌ನ್ನು ಸೆ. 23 ರಿಂದ 25ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಅಲ್ಹಾಜ್ ಸೈಯದ್ ಆರಿಫ್ ಶಾಹ್ ಖಾದ್ರಿ ಯವರು ತಿಳಿಸಿದ್ದಾರೆ.

ಅವರು ಮಾದ್ಯಮದ ಜೊತೆ ಮಾತನಾಡಿ,ಉರ್ಸ್ ಅಂಗವಾಗಿ ಸೆ.23 ರಂದು ಸಂದಲ್ ಶರೀಫ್, ಸೆ.24ರಂದು ಚಿರಾಗ್ ಶರೀಫ್ ಹಾಗೂ ಸೆ.25ರಂದು ಜಿಯಾರತ್ ಶರೀಫ್ ಕಾರ್ಯಕ್ರಮಗಳು ನಡೆಯಲಿವೆ.

ಸೆ.23 ರಂದು ಅಸರ್ ನಮಾಜ್ ನಂತರ ಸಜ್ಜಾದಾ ನಶೀನ್ ಅವರ ನಿವಾಸದಿಂದ ಸಂದಲ್ ಮುಬಾರಕ್ ಹೊರಟು ರೈಲ್ವೆ ನಿಲ್ದಾಣ ತಲುಪಲಿದೆ. ಬಳಿಕ ಮಗ್ರಿಬ್ ನಮಾಜ್ ನಂತರ ರೈಲ್ವೆ ನಿಲ್ದಾಣದಿಂದ ಸಾಂಪ್ರದಾಯಿಕ ಮಾರ್ಗದ ಮೂಲಕ ದರ್ಗಾ ಶರೀಫ್‌ಗೆ ಸಂದಲ್ ಮೆರವಣಿಗೆ ನಡೆಯಲಿದೆ ಎಂದಿದ್ದಾರೆ.

ಡಾ. ಹಕೀಂ ಹಜರತ್ ಅಲ್ಹಾಜ್ ಸೈಯದ್ ಶಾಹ್ ಅಹ್ಮದ್ ಹುಸೇನ್ ಪೀರ್ ಖಾದ್ರಿ, ಹಜರತ್ ಸೂಫಿ ಎ ಮಿಲ್ಲತ್ ಪೀರ್-ಎ-ತಾರೀಕತ್ ಪೀರ್ ಮುರ್ಶಿದ್ ಹಜರತ್ ಖಾದ್ರಿ ಜುನೈದಿ ಸಾಹೇಬ್, ಡಾ. ಅಲ್ಹಾಜ್ ಹಜರತ್ ಶೈಖ್ ಮೊಹಮ್ಮದ್ ಅಫ್ಜಲುದ್ದೀನ್ ಜುನೈದಿ ಸಾಹೇಬ್ ಕಿಬ್ಲಾ ಸೇರಿದಂತೆ ಹಲವು ಧಾರ್ಮಿಕ ಗಣ್ಯರು ಇದಲ್ಲದೆ ಮೆಹಮಾನ್-ಎ-ಖುಸೂಸಿಯಾಗಿ ಸಜ್ಜಾದಾ ನಶೀನ್ ಹಾಗೂ ಧಾರ್ಮಿಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಉರ್ಸ್ ಕಾರ್ಯಕ್ರಮದ ಅಂಗವಾಗಿ ಶೈದಾ-ಎ-ಗೌಸೆ-ಎ-ಆಝಂ ಬಾದಸ್ತ್-ಎ-ನಶೀರ್ ಸಜ್ಜಾದಾ ನಶೀನ್ ಹಜರತ್ ಅಲ್ಹಾಜ್ ಸೈಯದ್ ಆರಿಫ್ ಶಾಹ್ ಖಾದ್ರಿ ಜುನೈದಿ ಬಾಬಾ ಸಾಹೇಬ್ ಕಿಬ್ಲಾ ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. 

ಈ ಮೂರು ದಿನಗಳ ಉರ್ಸ್ ಶರೀಫ್ ಸಂದರ್ಭದಲ್ಲಿ ದರ್ಗಾ ಶರೀಫ್‌ಗೆ ಆಗಮಿಸುವ ಭಕ್ತರು ಶಾಂತಿ, ಸೌಹಾರ್ದತೆ ಹಾಗೂ ಶಿಸ್ತು ಕಾಪಾಡಿಕೊಂಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಉರ್ಸ್ ಅಂಗವಾಗಿ ನಡೆಯುವ ಸಂದಲ್, ಚಿರಾಗ್ ಹಾಗೂ ಜಿಯಾರತ್ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ತಿಳಿದ್ದಾರೆ.