ಕೂಲಿಕಾರರು ಗುಳೆ ಹೋಗದೆ ಸ್ಥಳೀಯವಾಗಿ ಉದ್ಯೋಗ ಪಡೆದುಕೊಳ್ಳಿ: ಪಿಡಿಓ ಮಹಾದೇವ

ಕೂಲಿಕಾರರು ಗುಳೆ ಹೋಗದೆ ಸ್ಥಳೀಯವಾಗಿ ಉದ್ಯೋಗ ಪಡೆದುಕೊಳ್ಳಿ: ಪಿಡಿಓ ಮಹಾದೇವ

ಹೊಳಸಮುದ್ರ ಗ್ರಾಮದಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನಕ್ಕೆ ಚಾಲನೆ 

 ಕೂಲಿಕಾರರು ಗುಳೆ ಹೋಗದೆ ಸ್ಥಳೀಯವಾಗಿ ಉದ್ಯೋಗ ಪಡೆದುಕೊಳ್ಳಿ: ಪಿಡಿಓ ಮಹಾದೇವ

ಕಮಲನಗರ: ತಾಲೂಕಿನ ಹೊಳಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಳಿ ಗ್ರಾಮದಲ್ಲಿ ವಿಬಿ–ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಸಿಸಿಟಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ರೋಜಗಾರ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕೂಲಿಕಾರರಿಗೆ ವಿಬಿ–ಜಿ ರಾಮ್ ಜಿ ಯೋಜನೆಯ ಉದ್ದೇಶ, ಯೋಜನೆಯಡಿ ದೊರೆಯುವ ಉದ್ಯೋಗಾವಕಾಶಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು. 

ಪಿಡಿಓ ಮಹಾದೇವ ಅವರು ಮಾತನಾಡಿ, **“ಇನ್ನೂ ಹೆಚ್ಚಿನ ಕೂಲಿಕಾರರನ್ನು ಕೆಲಸಕ್ಕೆ ಕರೆತಂದು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಯಾರ ಬಳಿ ಜಾಬ್ ಕಾರ್ಡ್ ಇಲ್ಲವೋ, ಅಂತಹವರು ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿ ಜಾಬ್ ಕಾರ್ಡ್ ಪಡೆದುಕೊಳ್ಳಬೇಕೆಂದು ಜಾಬ್ ಕಾರ್ಡ್ ಮೇಳ ಅಭಿಯಾನದ ಕುರಿತು ಕೂಲಿಕಾರರಿಗೆ ತಿಳಿಸಿದರು. ಯಾರೂ ಗುಳೆ ಹೋಗದೆ ತಮ್ಮೂರಿನಲ್ಲೇ ಉದ್ಯೋಗ ಪಡೆದು ಕೆಲಸ ಮಾಡಬೇಕು. ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ವರ್ಷದಲ್ಲಿ 125 ದಿನಗಳವರೆಗೆ ಕೆಲಸ ದೊರೆಯಲಿದ್ದು, ಈ ಸೌಲಭ್ಯವನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು”** ಎಂದು ಕರೆ ನೀಡಿದರು.

ಇದೇ ವೇಳೆ ಕಾಮಗಾರಿ ಸ್ಥಳದಲ್ಲಿ ಎನ್‌ಎಂಎಂಎಸ್ (NMMS) ಹಾಜರಾತಿ ದಾಖಲಿಸುವ ಕುರಿತು ಮೇಟ್ ಅವರಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳು, ಐಇಸಿ ಸಂಯೋಜಕರಾದ ಸವಿತಾ ನಾಗೇಶ, ಟಿಎ ಅರ್ಜನ, ಮೇಟ್ ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.