ಶೇಖಮ್ಮ ಎಂ.ಸಜ್ಜನ್ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ
ಶೇಖಮ್ಮ ಎಂ.ಸಜ್ಜನ್ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ
ಶಹಪುರ : ತಾಲೂಕಿನ ಹತ್ತಿಗುಡೂರ,ಅಂಬೇಡ್ಕರ್ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶೇಖಮ್ಮ ಎಂ.ಸಜ್ಜನ್ ಸಗರ ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2026 - 27ನೇ ಸಾಲಿನ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶೆಖಮ್ಮಎಂ.ಸಜ್ಜನ್ ಅವರ ಶಾಲೆಯಲ್ಲಿ ಉತ್ತಮ ಬೋಧನೆ ಹಾಗೂ ಮಕ್ಕಳ ಸ್ನೇಹಿ ಚಟುವಟಿಕೆಗಳನ್ನು ಕೈಗೊಂಡು ಮಕ್ಕಳಿಂದ ಮತ್ತು ಪಾಲಕರಿಂದ ಮೆಚ್ಚುಗೆ ಪಡೆದಂತ ಶಿಕ್ಷಕರಾಗಿದ್ದು,ಇವರ ಹೆಚ್ಚುವರಿ ಬೋಧನೆಯಿಂದ ಹಲವಾರು ವಿದ್ಯಾರ್ಥಿಗಳು ಉನ್ನತ ಮಟ್ಟದ ವ್ಯಾಸಂಗಕ್ಕೆ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿರುವುದು ಹಲವಾರು ಉದಾಹರಣೆಗಳಿವೆ.
ಇವರು ಪರಿಶ್ರಮ ಹಾಗೂ ಉತ್ತಮ ಸೇವೆಗೆ ಸಂದ ಗೌರವ ಇದಾಗಿದೆ.ಅವರ ಸಹೋದ್ಯೋಗಿಗಳು ಹಾಗೂ ಬಂಧು ಮಿತ್ರರು ಬಳಗದವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

