ಕೃಷ್ಣ ಗುಡಿಯಲ್ಲಿ ಸೆ. 4 ರಿಂದ ಶ್ರೀ ಕೃಷ್ಣಾಷ್ಟಮಿ, ವಿಟ್ಲಪಿಂಡಿ ಮಹೋತ್ಸವ

ಕೃಷ್ಣ ಗುಡಿಯಲ್ಲಿ ಸೆ. 4 ರಿಂದ ಶ್ರೀ ಕೃಷ್ಣಾಷ್ಟಮಿ, ವಿಟ್ಲಪಿಂಡಿ ಮಹೋತ್ಸವ

ಕೃಷ್ಣ ಗುಡಿಯಲ್ಲಿ ಸೆ. 4 ರಿಂದ ಶ್ರೀ ಕೃಷ್ಣಾಷ್ಟಮಿ, ವಿಟ್ಲಪಿಂಡಿ ಮಹೋತ್ಸವ

 ಕಲಬುರಗಿ : ಅಖಿಲ ಭಾರತ ಮಾಧ್ವ ಮಂಡಲದ ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ ವಿದ್ಯಾನಗರ ಇಲ್ಲಿನ ಶ್ರೀ ಕೃಷ್ಣ ಮಂದಿರ ಹಾಗೂ ಶ್ರೀ ಹನುಮ ಭೀಮ ಮಧ್ವ ಮಂದಿರದಲ್ಲಿ 57ನೇ ವರ್ಷದ ಶ್ರೀ ಕೃಷ್ಣಾಷ್ಟಮಿ ಮಹೋತ್ಸವವು ಸೆ. 4 ಮತ್ತು 5 ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.

    ಸೆಪ್ಟೆಂಬರ್ 4ರಂದು ಮುಂಜಾನೆ ಆರರಿಂದ ಸುಪ್ರಭಾತ ಸೇವೆ ಎಂಟರಿಂದ ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ ಸಂಜೆ ಐದರಿಂದ ವಿದ್ವಾಂಸರಿಂದ ಪ್ರವಚನ ಸಂಜೆ ಏಳರಿಂದ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮವು ನೆರವೇರಲಿದೆ. ರಾತ್ರಿ 9 ರಿಂದ ಭಜನೆ ರಾತ್ರಿ 11.57ಕ್ಕೆ ಕೃಷ್ಣ ಜನ್ಮ ಅರ್ಘ್ಯ ಪ್ರದಾನ ನಡೆಯಲಿದೆ.

     ಸೆ 5 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಕೃಷ್ಣನಿಗೆ ಪಂಚಾಮೃತ ಅಭಿಷೇಕ ಶೋಡಶೋಪಚಾರ, ಬೆಳಿಗ್ಗೆ 9:00ಗೆ ತೀರ್ಥ ಪ್ರಸಾದ ಸಾಯಂಕಾಲ 6:00ಗೆ ಉಪನ್ಯಾಸ ಏಳು ಗಂಟೆಗೆ ರಥೋತ್ಸವ ಮತ್ತು ಶ್ರೀ ಕೃಷ್ಣ ಲೀಲಾೋತ್ಸವ ವಿಟ್ಲಪಿಂಡಿ, ಗೋಪಾಲ ಕಾವಲಿ ಸೇವೆ ಹಾಗೂ ಮಂಗಳಾರತಿ ಜರಗಲಿದೆ ಭಗವತ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿಯ ಅಧ್ಯಕ್ಷರಾದ ರಂಗನಾಥ ದೇಸಾಯಿ, ಕಾರ್ಯದರ್ಶಿ ಕಿಶೋರ ದೇಶಪಾಂಡೆ, ಸಹ ಕಾರ್ಯದರ್ಶಿ ವಿದ್ಯಾಸಾಗರ, ಖಜಾಂಚಿ ರಾಮದಾಸ ಹಾಗೂ ಮ್ಯಾನೇಜರ್ ಕೊತ್ತೂರು ನಿಖಿಲಾಚಾರ್ಯ ಪತ್ರಿಕಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.