ಡಾ. ಪಿ ಎಸ್ ಶಂಕರ್ ಪ್ರತಿಷ್ಠಾನಕ್ಕೆ ಡಾ. ಪಿ ಎಂ ಬಿರಾದಾರ ನೂತನ ಅಧ್ಯಕ್ಷ

ಡಾ. ಪಿ ಎಸ್ ಶಂಕರ್ ಪ್ರತಿಷ್ಠಾನಕ್ಕೆ ಡಾ. ಪಿ ಎಂ ಬಿರಾದಾರ ನೂತನ ಅಧ್ಯಕ್ಷ

ಡಾ. ಪಿ ಎಸ್ ಶಂಕರ್ ಪ್ರತಿಷ್ಠಾನಕ್ಕೆ ಡಾ. ಪಿ ಎಂ ಬಿರಾದಾರ ನೂತನ ಅಧ್ಯಕ್ಷ

 ಕಲಬುರಗಿ : ಡಾ. ಬಿಎಸ್ ಶಂಕರ್ ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿ ಖ್ಯಾತ ಚರ್ಮರೋಗ ತಜ್ಞರಾದ ಡಾ. ಪಿ ಎಂ ಬಿರಾದಾರ ಅವರನ್ನು ಪ್ರತಿಷ್ಠಾನದ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

     ಡಾ. ಪಿ ಎಸ್ ಶಂಕರ್ ಅವರ ಸ್ವಗೃಹ "ದೀಪ್ತಿ " ಯಲ್ಲಿ ಆಗಸ್ಟ್ 23ರಂದು ಭಾನುವಾರ ನಡೆದ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ಡಾಕ್ಟರ್ ಪಿ ಎಂ ಬಿರಾದಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು . ಡಾ. ಬಿಎಸ್ ಶಂಕರ್ ಅವರ ಅಧ್ಯಕ್ಷತೆಯಲ್ಲಿ ಪ್ರತಿಷ್ಠಾನದ ಸದಸ್ಯರ ಸಭೆ ನಡೆಯಿತು. ಶ್ರೀಮತಿ ಅಂಬಿಕಾ ಶಂಕರ್ ಅವರ ಅಗಲುವಿಕೆಯಿಂದ ತೆರವಾದ ಸ್ಥಾನಕ್ಕೆ ಬಿರಾದಾರ ಅವರನ್ನು ಆಯ್ಕೆ ಮಾಡಲಾಯಿತು. ಈ ಹಿಂದೆ ಡಾ ಪಿ ಎಂ ಬಿರಾದಾರ್ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಅವರ ಸ್ಥಾನಕ್ಕೆ ಮಣಿಲಾಲ್ ಶಹಾ ಅವರನ್ನು ಆಯ್ಕೆ ಮಾಡಲಾಯಿತು. ಪ್ರತಿಷ್ಠಾನದ ಪ್ರಮುಖ ಕಾರ್ಯಕ್ರಮಗಳಲ್ಲಿ ವೈದ್ಯಶ್ರೀ, ವೈದ್ಯ ಸಾಹಿತ್ಯ ಪ್ರಶಸ್ತಿ ಪ್ರದಾನ, ವೈದ್ಯಕೀಯ ವಿದ್ಯಾರ್ಥಿ ಪುರಸ್ಕಾರ, ಯುಗಾದಿ ಚೈತ್ರೋತ್ಸವ, ಚಿಗುರು ಚಿನ್ಮಯ ಪ್ರಶಸ್ತಿ ಪ್ರದಾನ, ದತ್ತಿ ಉಪನ್ಯಾಸಗಳನ್ನು ಈ ಹಿಂದಿನಂತೆ ಮುಂದುವರಿಸಲಾಗುವುದು ಹಾಗೂ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ, ದತ್ತಿ ಉಪನ್ಯಾಸ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಈ ಹಿಂದಿನಂತೆ ಮುಂದುವರಿಸಲಾಗುವುದು ಎಂದು ಡಾ. ಪಿ ಎಸ್ ಶಂಕರ್ ಹೇಳಿದರು. ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ. ನರೇಂದ್ರ ಬಡಶೇಷಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ನಿರೂಪಣೆ ಮಾಡಿದರು.

   ಪ್ರತಿಷ್ಠಾನದ ಸಭೆಯಲ್ಲಿ ಡಾ. ಪಿ ಎಂ ಬಿರಾದಾರ ಸಿಎ ಮಣಿಲಾಲ್ ಶಹಾ, ದೀಪಕ್ ಪಾಟೀಲ್, ಡಾ. ರೂಪ ಹೆಬ್ಬಂಡಿ, ಡಾ ಸಿದ್ದರಾಮ ಪಾಟೀಲ್, ಡಾ. ಸದಾನಂದ ಪೆರ್ಲ, ಡಾ. ರಾಜೇಂದ್ರ ಕೊಂಡ ಡಾ. ಮಾಲಿ ಪಾಟೀಲ್, ಶ್ರೀಮತಿ ಅನ್ನಪೂರ್ಣ ಇನಾಂದಾರ, ಸದಾನಂದ ಎಂ,ನ್ಯಾಯವಾದಿ ಉದಯ ಹೊನಗುಂಟಿಕರ್, ಶೇಖರ್ ಗಾದಾ, ನರೇಂದ್ರ ಬಡೆಶೇಷಿ ಮತ್ತಿತರರು ಉಪಸ್ಥಿತರಿದ್ದರು.