ಜಾನಪದ ಜಗತ್ತಿನ ಶ್ರೀಮಂತ ಖನಿಜ.ಎಂ.ಕೆ.ಬೇವಿನಕಟ್ಟಿ.ನರೇಗಲ್ಲ

ಜಾನಪದ ಜಗತ್ತಿನ  ಶ್ರೀಮಂತ ಖನಿಜ.ಎಂ.ಕೆ.ಬೇವಿನಕಟ್ಟಿ.ನರೇಗಲ್ಲ

ಜಾನಪದ ಜಗತ್ತಿನ ಶ್ರೀಮಂತ ಖನಿಜ.ಎಂ.ಕೆ.ಬೇವಿನಕಟ್ಟಿ.ನರೇಗಲ್ಲ

ಜಾನಪದ ಜಗತ್ತಿನ ಹೊಸ ಚಲನೆಯ ಒಂದು ಐತಿಹಾಸಿಕ ಮಹತ್ವವಿದೆ ಹಿಂದಿನ ಕಾಲದಲ್ಲಿ ಅದೂ ಪ್ರಾಚೀನ ಕಲೆ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಬಂದಿರ್ತಕಂತ ಸಾಹಿತ್ಯ ಯಾವುದಾದರೂ ಇದ್ದರೆ ಅದು ಜನಪದ ಸಾಹಿತ್ಯ ಎಂದು ಹೇಳಿದರು.

ಸ್ಥಳೀಯ ಕನಕದಾಸ ಪದವಿ ಪೂರ್ವ ವಿದ್ಯಾಲಯ ಹಾಗೂ ಕನ್ನಡ ಜಾನಪದ ಸಾಹಿತ್ಯ ಪರಿಷತ್ ಗಜೇಂದ್ರಗಡ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಜಾನಪದ ದಿನ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ಜನರ ಬಾಯಿಂದ ಬಾಯಿಗೆ ಹರಿದು ಬಂದ ಸಾಹಿತ್ಯ ಕೆಲಸದಲ್ಲಿ ಹಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.

ಜನಪದ ಹಂತಿ ಪದ. ಲಾವಣಿ ಪದ .ಸೋಬಾನ ಪದ ಮಗುವಿನ ನಾಮಕರಣದ ಪದಗಳು. ಹಲವಾರು ಹಾಡುಗಳ ಮೂಲಕ ಎಂದು ಅಳಿಸಲಾರದ ಸಾಹಿತ್ಯ ಇದ್ದರೆ ಅದು ಜನಪದ ಸಾಹಿತ್ಯ ಮಾತ್ರ ಎಂದು ಹೇಳಿದರು. 

ಕಾರ್ಯಕ್ರಮದ ವೇದಿಕೆ ಮೇಲೆ ವಿಜಯ ಕರ್ನಾಟಕ ವರದಿಗಾರರಾದ ಈಶ್ವರ ಬೆಟಿಗೇರಿ ಮಾತನಾಡುತ್ತಾ ಜಾನಪದ ಒಂದು ಜೀವಂತ ಭಾಷೆ ಇದು ಹಾಗೂ ಎಷ್ಟು ಕೇಳಿದರು ಇನ್ನೂ ಕೇಳಬೇಕು ಮಾತಾಡಬೇಕು ಇಂತಹ ರುಚಿಕರವಾದ ಸಿಹಿಯಾದ ಸಾಹಿತ್ಯ ಯಾವುದಾದರೂ ಇದ್ದರೆ ಅದು ಜನಪದ ಸಾಹಿತ್ಯ ಎಂದು ಹೇಳಿದರು. 

ಹುಚ್ಚೀರಪ್ಪ ಈಟಿಯವರು ಜಾನಪದ ಹುಟ್ಟಿರುವುದು ಜನರ ಮಾತಿನಿಂದ ಮಾತಿಗೆ ಜನಪದ ಹುಟ್ಟಿಕೊಂಡಿದೆ ಹಳ್ಳಿಗಳಲ್ಲಿ, ಜಾನಪದ ಯಾವ ವಿಶ್ವ ವಿದ್ಯಾಲಯದಲ್ಲಿ ಹುಟ್ಟಿಕೊಂಡಿಲ್ಲ, ಸೋಬಾನ ಪದ, ದೊಡ್ಡಾಟ,ಸಣ್ಣಾಟ, ಹೆಜ್ಜೆ ಕುಣಿತ ವೀರಗಾಸೆ ಹೀಗೆ ಹಲವಾರು ಪ್ರಕಾರಗಳಲ್ಲಿ ಜಾನಪದ ಲೋಕ ತನ್ನ ಜಗತ್ತನ್ನೇ ಹುಟ್ಟು ಹಾಕಿದೆ, ಇದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.

ವೇದಿಕೆ ಮೇಲೆ ವೀರೇಶ್ ಜೋಗಿ ಜನಪದ ಶುಭಾಶಯಗಳು ತಮ್ಮದೇ ಆದ ಮಾತುಗಳಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಶಿವಾನಂದ ಗೋಗೇರಿ ವಸಿದ್ದುರು.

ವೀರೇಶ್ ಜೋಗಿ ಕಾರ್ಯಕ್ರಮ ನಿರೂಪಿಸಿದರು .ಮಾರುತಿ ವೆಂಕಟಾಪುರ್ ವಂದಿಸಿದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ