ಕೋಲಿ /ಕಬ್ಬಲಿಗ ಸಮಾಜ ಅಧ್ಯಕ್ಷ ಸ್ಥಾನದ ಚುನಾವಣೆ: ಮೂರು ಅಭ್ಯರ್ಥಿಗಳ ಮಧ್ಯ ತೀವ್ರ ಪೈಪೋಟಿ ಸಾಂಯಕಾಲ 5 ಗಂಟೆಗೆ ಮತ ಏಣಿಕೆ ನಡೆಯಲಿದೆ
ಕೋಲಿ /ಕಬ್ಬಲಿಗ ಸಮಾಜ ಅಧ್ಯಕ್ಷ ಸ್ಥಾನದ ಚುನಾವಣೆ: ಮೂರು ಅಭ್ಯರ್ಥಿಗಳ ಮಧ್ಯ ತೀವ್ರ ಪೈಪೋಟಿ
ಸಾಂಯಕಾಲ 5 ಗಂಟೆಗೆ ಮತ ಏಣಿಕೆ ನಡೆಯಲಿದೆ
ಚಿಂಚೋಳಿ : ಇಂದು ತಾಲೂಕ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷರ ಆಯ್ಕೆಗೆ ಚುನಾವಣೆಗೆ ಬೆಳಿಗ್ಗೆಯಿಂದಲೇ ಮತದಾನ ಭರ್ಜರಿಯಾಗಿ ನಡೆಯುತ್ತಿದೆ.
ತಾಲೂಕಿನಲ್ಲಿ ಕೋಲಿ ಕಬ್ಬಲಿಗ ಸಮಾಜ ಒಟ್ಟು 40 ಸಾವಿರ ಜನಸಂಖ್ಯೆ ಹೊಂದಿದ್ದು, ಸಮಾಜದ ಅಧ್ಯಕ್ಷರಾಗಲು ಅನಿಲಕುಮಾರ ಹಣಮಂತಪ್ಪ ಜಮಾದಾರ ಹುಡದಳ್ಳಿ, ಮಲ್ಲಿಕಾರ್ಜುನ ಸಾಯಿಬಣ್ಣ ಕೋಟಪಳ್ಳಿ, ದೌಲಪ್ಪ ಸುಣ್ಣಗಾರ ಅವರು ಚುನಾವಣೆ ಕಣದಲ್ಲಿದ್ದು ಗೆಲವು ತಮದಾಗಿಸಿಕೊಳಲು ಮೂರು ಜನ ಅಭ್ಯರ್ಥಿಗಳು ತ್ರಿಕೋನ್ ಸ್ಪರ್ಧೆಯ ಪೈಪೋಟಿ ಒಡ್ದುತ್ತಿದ್ದಾರೆ.
ಚಿಂಚೋಳಿ ಪಟ್ಟಣದ ಚಂದಾಪೂರದ ಕೋಲಿ, ಕಬ್ಬಲಿಗ ಸಮಾಜ ತಾಲೂಕ ಭವನದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು 1085 ಮತದಾನ ಪೈಕಿ 185 ಮಹಿಳೆಯರು 900 ಪುರುಷರು ಸಮಾಜದ ಅಧ್ಯಕ್ಷರ ಆಯ್ಕೆಗೊಳಿಸಲು ಮತದಾನ ಚಲಾಯಿಸಲು ಹಕ್ಕು ಪಡೆದಿದ್ದಾರೆ. ಪ್ರತಿಯೊಬ್ಬ ಮತದಾರರಿಗೆ ಸಮಾಜದ ಗುರುತಿನ ಚೀಟಿ ನೀಡಲಾಗಿದ್ದು, ಅದರಂತೆ ಮತದಾರರಿಗೆ ಮತದಾನದ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. ಸರದಿ ಸಾಲಿನಲ್ಲಿನಿಂತು ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1. 30 ಗಂಟೆಯವರೆಗೆ 530 ಜನ ಮತದಾರರು ಮತದಾನದ ಹಕ್ಕು ಚಲಾಯಿಸಿದ್ದಾರೆ. ಸಾಯಂಕಾಲ 5 ಗಂಟೆಗೆ ಮತದಾನದ ಮತ ಏಣಿಕೆ ಪ್ರಕ್ರಿಯೆ ನಡೆಯಲಿದ್ದು, ಸಂಜೆ 7 ಗಂಟೆಗೆಯವರೆಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ. ಮೂರು ಜನ ಅಭ್ಯರ್ಥಿಗಳಲ್ಲಿ ಯಾರ ಮಾಡಲಿಗೆ ಅಧ್ಯಕ್ಷ ಸ್ಥಾನ ವಲಿಯಲಿದೆಂಬ ಕೂತುಹಲ ರಾಜಕೀಯ ನಾಯಕರಲ್ಲಿ ಮೂಡಿದೆ. ಇದರ ಚುನಾವಣೆ ಅಧಿಕಾರಿಯಾಗಿ ರಮೇಶ ದೇಗಲ್ಮಡಿ, ಚುನಾವಣೆ ನೋಡಲ್ ಅಧಿಕಾರಿಯಾಗಿ ಜಯಪ್ಪ ಚಾಪೆಲ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಚಿಂಚೋಳಿ ಠಾಣಾಧಿಕಾರಿ ಗಂಗಮ್ಮ ಜಿನಿಕೇರಿ ಅವರ ನೇತೃತ್ವದಲ್ಲಿ ಮತದಾನದ ಕೇಂದ್ರಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ .

