ಸಚಿವ ಡಾ. ಅಜಯಸಿಂಗ್ ಅವರಿಗೆ ಉದಯ್ ಪಾಟೀಲ್ ನೇತೃತ್ವದಲ್ಲಿ ಅದ್ದೂರಿ ಸ್ವಾಗತ
ಸಚಿವ ಡಾ. ಅಜಯಸಿಂಗ್ ಅವರಿಗೆ ಉದಯ್ ಪಾಟೀಲ್ ನೇತೃತ್ವದಲ್ಲಿ ಅದ್ದೂರಿ ಸ್ವಾಗತ
ಕಲಬುರಗಿ: ಸಣ್ಣ ನೀರಾವರಿ ಸಚಿವರಾಗಿ ಇದೇ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸುತ್ತಿರುವ ಡಾ. ಅಜಯಸಿಂಗ್ ಅವರಿಗೆ ಅಖಿಲ ಕರ್ನಾಟಕ ಡಾ. ಅಜಯಸಿಂಗ್ ಅಭಿಮಾನಿಗಳ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯ ಬಿ.ಪಾಟೀಲ ನೇತೃತ್ವದಲ್ಲಿ ಅದ್ದೂರಿಯಾಗಿ ಭವ್ಯ ಸ್ವಾಗತ ಕೋರಲಾಯಿತು. ನಗರೇಶ್ವರ ಶಾಲೆಯಿಂದ ಡಾ. ಎಸ್.ಎಂ. ಪಂಡಿತ ರಂಗಮAದಿರದವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಭಾಜಾ, ಭಜಂತ್ರಿಯೊAದಿಗೆ ಅವರನ್ನು ಸ್ವಾಗತಿಸಲಾಯಿತು. ಜಗತ್ ವೃತ್ತದ ಬಳಿ ಬೃಹತ್ ಪ್ರಮಾಣದ ಹೂವಿನ ಮಾಲಾರ್ಪಣೆ ಮಾಡಿ ಸತ್ಕರಿಸಲಾಯಿತು. ನಾಸಿಕ್ ಡೋಲ್, ಡೊಳ್ಳು ಕುಣಿತ, ಹಲಗೆ ವಾದನ, ಮುಂತಾದ ಕಲಾ ತಂಡಗಳೊAದಿಗೆ ಬರಮಾಡಿಕೊಂಡು ಜಗತ್ ವೃತ್ತದ ಬಳಿ ಅಭಿಮಾನಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಶಾಸಕರು, ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡರು.

