ಹಿರಿಯರು ಸಮಾಜದ ಆಧಾರ ಸ್ತಂಭ. ವೀರಯ್ಯ ಶಾಸ್ತ್ರೀ ಗದಗ
ಹಿರಿಯರು ಸಮಾಜದ ಆಧಾರ ಸ್ತಂಭ. :ವೀರಯ್ಯ ಶಾಸ್ತ್ರೀ ಗದಗ
ತಮ್ಮ ಜೀವನದುದ್ದಕ್ಕೂ ಸಮಾಜಕ್ಕೆ ಕುಟುಂಬಕ್ಕೆ ನೀಡಿದ ಸೇವೆ, ಸಾಧನೆ, ತ್ಯಾಗ ದಿನಂಪ್ರತಿ ಹಿರಿಯರಿಗೆ ಗೌರವಿಸುವುದು ನಮ್ಮ ದಿನದ ಮೊದಲ ಕಾರ್ಯವಾಗಬೇಕು. ವಯಸ್ಸಾದಂತೆ ಅವರಿಗೆ ಬರುವ ಆರೋಗ್ಯ ಸಮಸ್ಯೆಗಳು, ಒಂಟಿತನ ನಿರ್ಲಕ್ಷದಂತಹ ಸಮಸ್ಯೆಗಳ ಬಗ್ಗೆ ಇಂದಿನ ಮಕ್ಕಳು ಹೆಚ್ಚಿನ ಕಾಳಜಿ ವಹಿಸಬೇಕು ಅದರಲ್ಲೂ ವಿಶೇಷವಾಗಿ ಯುವಕರು ಇದರ ಕಡೆ ಗಮನ ಹರಿಸದೇ ಇರುವುದು ಶೋಚನೀಯ ಸಂಗತಿ ಎಂದು ಪೂಜ್ಯ ವೇ.ಮೂ. ವೀರಯ್ಯ ಶಾಸ್ತ್ರೀ ಹಿರೇಮಠ ಗದಗ ಆಶೀರ್ವಚನ ಮಾಡಿದರು.
ನಿನ್ನೆ ಅಗಸ್ಟ್ ೨೧ ರಂದು ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಆಶ್ರಯದಲ್ಲಿ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಜರುಗುತ್ತಿರುವ ಮುತ್ಯಾನ ಬಬಲಾದ ಪುರಾಣ ಪ್ರವಚನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನದ ನಿಮಿತ್ಯ ಸಾಂಕೇತಿಕವಾಗಿ ೫ ಜನ ಪುರುಷರಾದ ಬಸವಂತರಾವ ಜಾಬಶೆಟ್ಟಿ, ಸಂಗಣ್ಣಗೌಡ ಬಿರಾದಾರ, ಬಸವರಾಜ ಸಜ್ಜನ, ದೇವಿಂದ್ರಪ್ಪ ನಾಸಿ, ಮಲ್ಲನಾಥ ದೇಶಮುಖ ಹಾಗೂ ಹಿರಿಯ ಮಹಿಳೆಯರಾದ ಶಕುಂತಲಾ ನಿಗ್ಗುಡಗಿ, ಜಗದೇವಿ ಕಾಳೆ, ಸುಮಿತ್ರಾ ರಾಜಾಪೂರ, ಶ್ರೀದೇವಿ ಗೌಣಿ, ಗೌರಮ್ಮ ಪಾಟೀಲ ಅವರಿಗೆ ಕೇಕ್ ವಿತರಿಸಿ ಗೌರವಿಸಿ ಅಭಿನಂದಿಸುತ್ತಾ ಪುರಾಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲಾ ಪಾಲಕರು ಇದು ಧಾರ್ಮಿಕ ವೇದಿಕೆ ಆದರೂ ಸಾಮಾಜಿಕ ಚಿಂತನೆ ನಡೆಯುವಂತಹ ವೇದಿಕೆಯಲ್ಲಿ ಬರುವಾಗ ನಿಮ್ಮ ನಿಮ್ಮ ಸಣ್ಣ ಸಣ್ಣ ಮಕ್ಕಳನ್ನು ಕರೆದುಕೊಂಡು ಬಂದರೆ ಒಂದಿಷ್ಟು ಸಂಸ್ಕಾರ ಕೊಟ್ಟಂತಾಗುತ್ತದೆ ಎನ್ನುತ್ತಾ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪಾಲಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪುರಾಣ ಪ್ರವಚನಕಾರರಾದ ವೇ.ಮೂ. ವೀರಯ್ಯಶಾಸ್ತ್ರೀರವರ ಸಾನಿಧ್ಯದಲ್ಲಿ ಕಲಾವಿದರಾದ ಶಿವಶಂಕರ ಹಿರೇಮಠ, ಅಡಿವೇಶಕುಮಾರ ಹಾಗೂ ಬಂಗಾರೆಪ್ಪ ಆಡಿನ್, ಬಿ.ಎನ್. ಪುಣ್ಯಶೆಟ್ಟಿ, ಗಣೇಶ ಚಿನ್ನಾಕರ್, ಸಿ.ಎಚ. ಶಿವಕುಮಾರ, ರೇವಣಸಿದ್ದಪ್ಪ ಜೀವಣಗಿ, ಗಂಗಾಧರ ಕಣ್ಣಿ, ಮಡಿವಾಳಪ್ಪ ಸಜ್ಜನ್, ಸುಭಾಷ ಮಂಠಾಳೆ, ಉದಯಕುಮಾರ ಪಡಶೆಟ್ಟಿ, ಶಾಂತಯ್ಯ ಬೀದಿಮನಿ, ವಿನೋದ ಗೋರೆ, ಶ್ರೀಮಂತ ರಾಜಾಪೂರ, ಶಾಂತಯ್ಯ ಬೀದಿಮನಿ, ಶರಣಯ್ಯ ಮಠಪತಿ, ಆದಪ್ಪ ಸಿಕೇದ ಹಾಗೂ ಇತರರು ಉಪಸ್ಥಿತರಿದ್ದರು.
ಫೋಟೋ: ಬಬಲಾದ ಶ್ರೀಗಳ ಪುರಾಣ ವೇದಿಕೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಯಿತು. ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಹಿರಿಯ ನಾಗರಿಕರು, ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

