ಕಳೆದುಹೋದ ದಿನ ನೆಸೆಸುವ ಛಾಯಾಚಿತ್ರಗಳು
ಕಳೆದುಹೋದ ದಿನ ನೆಸೆಸುವ ಛಾಯಾಚಿತ್ರಗಳು
ಕಲಬುರಗಿ ಜೀವನ ಅಮೂಲ್ಯ ಕ್ಷಣಗಳನ್ನು ಸದಾ ನೆನೆಸುವ ಛಾಯಾಚಿತ್ರಗಳು ಕಳೆದು ಹೋದ ದಿನಗಳನ್ನು ಮನನ ಮಾಡಿಸುತ್ತವೆ. ಛಾಯಾಗ್ರಾಹಕನು ಉತ್ತಮ ಪೋಟೋಗಳನ್ನು ಸಂಪಾದಿಸಿ ತಮ್ಮ ಪ್ರತಿಭೆ ತೋರಬೇಕು ಎಂದು ಮಣೂರ ಆಸ್ಪತ್ರೆಯ ಮುಖ್ಯಸ್ಥ ಡಾ ಫಾರೂಕ ಮಣೂರ ಸಲಹೆ ನೀಡಿದರು.
ಕನ್ನಡ ಭವನದಲ್ಲಿ ವಿಶ್ವ ಛಾಯಾಗ್ರಹಣ ದಿನ ಅಂಗವಾಗಿ ಬುಧವಾರ ಆಯೋಜಿಸಿದ ಖಾಜಾ ಪಟೇಲ್ ಕಲ್ಲಬೇನೂರ ಅವರ ಛಾಯಾಚಿತ್ರಗಳ ಪ್ರದರ್ಶನ
ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪೋಟೋ ಕ್ಲಕಿಸಿ ಉದ್ಘಾಟಿಸಿ ಮಾತನಾಡಿ, ಪರಿಸರ ಪ್ರತಿಯೊಂದು ಸೂಕ್ಷ್ಮ ಚಲನ ವಲನಗಳನ್ನು ಸೆರೆ ಹಿಡಿಯುವ ಛಾಯಾಗ್ರಾಹಕರ ಕೊಡುಗೆ ಅಪಾರವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯ ಕುಮಾರ ತೆಗಲತಿಪ್ಪ ಮಾತನಾಡಿ, ಅಪರೂಪದ ಕ್ಷಣಗಳಿಗೆ ಪೋಟೋಗಳು ಸಾಯಾಗುತ್ತವೆ. ಉತ್ತಮ ಚಿತ್ರಗಳನ್ನು ತೆಗೆಯುವಲ್ಲಿ ಛಾಯಾಚಿತ್ರಗಾರರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ವಿವಿಧ ಕ್ಷೇತ್ರದ ಸಾಧಕರಾದ ಭವಾನಿ ಠಾಕೂರ್, ಆಲಿಯಾ ಬೇಗಂ, ಕವಿತಾ ಪಾಳಾ, ಸಿದ್ದಪ್ಪ ಹೊಸ್ಮನಿ, ಶಿವಶರಣಪ್ಪ ಬೆಣ್ಣೂರ, ಅಮಿತ್ ಠಾಕೂರ್, ಮುಸ್ತಫಾ ಅಹ್ಮದ್, ದಿಲ್ ಶಾದ ಪಟೇಲ್, ಮಲ್ಲಿನಾಥ ಚನ್ನಪ್ಪಗೋಳ, ಶರಣಪ್ಪ ಶಿಂಪ್ಪಿ, ದಾಮೋದರ ಭಟ್ಟ, ಗುರುನಾಥ ರೆಡ್ಡಿ ಸೂಗೂರ, ಎಂ. ಸಂಜೀವ ಅವರನ್ನು ಸನ್ಮಾನಿಸಲಾಯಿತು.
ಕಾ.ನಿ.ಪ.ಸಂ.ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ್, ಜಿಲ್ಲಾ ಛಾಯಾಗ್ರಹಕ ಸಂಘದ ಅಧ್ಯಕ್ಷ ಬಸವರಾಜ ತೋಟದ, ಸುರೇಶ ಮೇಂಗನ್, ಶಿವಕುಮಾರ ಕುಸಾಳೆ, ಅನ್ನಸ್ ಪಟೇಲ ರೇವಣ್ಣ ಸಿದ್ದಪ್ಪ ಹೋಟ್ಟಿ ಮುಸ್ತಫಾ ಕೂಡಿ ಫಯಾಜ್ ಪಟೇಲ ಸಂಗಪ್ಪ ರೆಡ್ಡಿ ಮೈನೂದ್ದೀನ್ ಪಟೇಲ ಅಲ್ಲಾವುದ್ದೀನ್ ಪಟೇಲ ನಾಗೇಂದ್ರ ಪಾಳಾ ಶಬ್ಬೀರ್ ಪಟೇಲ ಹುಣಚಿರಾಯ ರಾಜು ದೊಟ್ಟಿಕೊಳ ಜಟ್ಟೇಪ್ಪ ಇತರರಿದ್ದರು. ಅಮರೇಶ ಇಟಗಿ ಸ್ವಾಗತಿಸಿದರು ಭರತ ಧನ್ನಾ ನಿರೂಪಣೆ ಮಾಡಿದರು.

