ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು - ಅನುಪಮಾ
ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು - ಅನುಪಮಾ.
ಶಹಪುರ : ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜೊತೆಗೆ ಬದುಕಿನ ದಾರಿಯನ್ನು ತೋರಿಸುವ ಈ ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಲ್ಲೂ ಅತ್ಯಂತ ಶ್ರೇಷ್ಠವಾದದ್ದು ಶಿಕ್ಷಕಿ ಅನುಪಮಾ ಹೇಳಿದರು.
ತಾಲೂಕಿನ ಶಿರವಾಳ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಕಲ್ಯಾಣ ಕರ್ನಾಟಕ ದಿನಾಚರಣೆ ಅಂಗವಾಗಿ ಇತ್ತೀಚಿಗೆ ವಲಯ ಕನ್ನಡ ವಲಯ ಸಾಹಿತ್ಯ ಪರಿಷತ್ತಿನ ವತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಬಾಜನರಾದ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ಹಾಗೂ ಎಸ್ ಡಿ ಎಮ್ ಸಿ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮಕ್ಕಳಿಗೆ ಕೇವಲ ಶಿಕ್ಷಣ ನೀಡುವುದು ಮಾತ್ರವಲ್ಲದೆ ಅವರಲ್ಲಿ ನೈತಿಕ ಮೌಲ್ಯ ಮತ್ತು ಉತ್ತಮ ನಡವಳಿಕೆ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಮಾಜಕ್ಕಾಗಿ ಆದರ್ಶ ಪ್ರಜೆಗಳನ್ನು ಹಾಗೂ ನಾಯಕರನ್ನು ಸೃಷ್ಟಿಸುವ ಸಾಧಕರನ್ನು ಗುರುತಿಸುವುದು ನಮ್ಮ ಪಾತ್ರ ಬಹಳ ಮುಖ್ಯವಾಗಿದೆ,ಶಾಲೆಯ ಸಹೋದ್ಯೋಗಿಗಳು ಹಾಗೂ ಪಾಲಕರ,ಸಹಕಾರದೊಂದಿಗೆ ಇಂಥಹ ಪ್ರಶಸ್ತಿ ಗಳಿಸಲು ಸಾಧ್ಯವಾಯಿತು,ಇದು ನನಗೆ ವೈಯಕ್ತಿಕ ತುಂಬಾ ಖುಷಿ ನೀಡಿದೆ ಎಂದು ನುಡಿದರು
ಈ ಸಂದರ್ಭದಲ್ಲಿ ಶಾಲಾ ಎಸ್,ಡಿ,ಎಂ,ಸಿ ಅಧ್ಯಕ್ಷರಾದ ಬಸವಲಿಂಗ ಲಖಣಾಪುರ, ಉಪಾಧ್ಯಕ್ಷರಾದ ಶಾಂತಮ್ಮ ನಡಿಗೆ,ಇಮಾಮ್ ಪಟೇಲ್ ವೀರೇಶ್ ಪಟೇದಾರ್, ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

