ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ
ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ
ಕಮಲನಗರ:ತಾಲೂಕಿನ ಯುವ ಉದ್ಯಮಿ ಯಶವಂತ ಗಣಪತಿ ಖೇಡಕರ ಅವರ ಹುಟ್ಟುಹಬ್ಬದ ನಿಮಿತ್ಯವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಹಂದಿಕೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು (ಬರವಣಿಗೆ ಪುಸ್ತಕ) ವಿತರಿಸಲಾಯಿತು.
ತಮ್ಮ ನೆಚ್ಚಿನ ನಾಯಕರ ಹುಟ್ಟುಹಬ್ಬವನ್ನು ಆಡಂಬರವಿಲ್ಲದೆ, ಅರ್ಥಪೂರ್ಣ ಹಾಗೂ ಸಾಮಾಜಿಕ ಕಾಳಜಿಯೊಂದಿಗೆ ಆಚರಿಸುವ ಉದ್ದೇಶದಿಂದ ಅಭಿಮಾನಿ ಬಳಗವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಶೈಕ್ಷಣಿಕ ಪ್ರೋತ್ಸಾಹ ನೀಡಿದ ಈ ಸೇವೆಯನ್ನು ಶಾಲೆಯ ಮುಖ್ಯೋಪಾಧ್ಯಾಯರು ಆರ್ ಆರ್ ಪಾಟೀಲ್ ಅವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜ್ಞಾನೋಭಾ ವಾಗ್ಮಾರೆ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಲಕ್ಷ್ಮಣ್ ಹಾಗೂ ಚಂದ್ರಕಾಂತ್ ವಾಗ್ಮಾರೆ ನಾಮ್ದೇವ, ರಾಜೇಂದ್ರ ಬಾಲಾಜಿ ಬೋಸ್ಲೆ, ಪ್ರವೀಣ್ ಬೋಸ್ಲೆ ಉಮಾಕಾಂತ ನಿವೃತ್ತಿ ಬೋಸ್ಲೆ ,ಸಿದ್ದಾರ್ಥ ಖೇಡಕರ, ಹನುಮಂತ ಖೇಡೆಕರ್ ಹಾಗೂ ಪ್ರೌಢ ಶಾಲೆಯ ಮುಖ್ಯೋಪಾಧದಾಯರಾದ ತಾನಾಜಿ ಸರ್ ರಾಜಕುಮಾರ ವಡಗಾಂವೆ ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಗೂ ಯುವ ಮುಖಂಡರಾದ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

