ವಿದ್ಯುತ್ ಗುತ್ತಿಗೆದಾರರ ಗಣೇಶ ಮಂಡಳಿಯಿಂದ ವಿಶೇಷ ಪೂಜೆ
ವಿದ್ಯುತ್ ಗುತ್ತಿಗೆದಾರರ ಗಣೇಶ ಮಂಡಳಿಯಿಂದ ವಿಶೇಷ ಪೂಜೆ
ಕಲಬುರಗಿ: ನಗರದ ಕೋರ್ಟ್ ರಸ್ತೆಯಲ್ಲಿರುವ ಜೆಸ್ಕಾಂ ಕಚೇರಿ ಸಮೀಪ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಗಣೇಶ ಮಂಡಳಿ ವತಿಯಿಂದ ಗಣೇಶೋತ್ಸವ ಅಂಗವಾಗಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ವೀರಶೆಟ್ಟಿ ಕ್ಯಾಮಾ, ಕೇಂದ್ರ ಕಾರ್ಯಕಾರಿ ಸದಸ್ಯ ಶಿವಕುಮಾರ್ ಎಸ್.ಕೆ., ಜಿಲ್ಲಾಧ್ಯಕ್ಷ ಬಿ.ಆರ್. ಮಾಲಿಪಾಟೀಲ, ಗಣೇಶ ಮಂಡಳಿ ಅಧ್ಯಕ್ಷ ನಾಗರಾಜ ಸಾಗರ, ಉಪಾಧ್ಯಕ್ಷ ಜಯಕುಮಾರಸ್ವಾಮಿ, ಕಾರ್ಯದರ್ಶಿ ಸಚಿನ್, ದೇವೇಂದ್ರ ಕುಲಕರ್ಣಿ, ನವೀನ ಕಮಾರಡಗಿ, ಪವನ ಕುಲಕರ್ಣಿ ಸೇರಿದಂತೆ ಕೇಂದ್ರ ವಲಯದ ವೈಸ್ ಚೇರ್ಮನ್‌ಗಳಾದ ಅಶೋಕ್ ಕಮಾರಡಗಿ, ಕಾಶೀನಾಥ ಮೆಂತೆ, ಬಸವರಾಜ ಒಡೆಯರ್, ವಿಷ್ಣುಕಾಂತ ಮೂಲಗೆ ಹಾಗೂ ಸಂಘದ ಕಲಬುರಗಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

