ವಯೋಮಿತಿ ನಿಗದಿಯಲ್ಲಿ ಅನ್ಯಾಯ: ಶಶೀಲ್ ಜಿ ನಮೋಶಿ
ವಯೋಮಿತಿ ನಿಗದಿಯಲ್ಲಿ ಅನ್ಯಾಯ: ಶಶೀಲ್ ಜಿ ನಮೋಶಿ
ಕಲಬುರ್ಗಿ: ಶಾಲಾ ಶಿಕ್ಷಣ ಇಲಾಖೆ 15,000 ಶಿಕ್ಷಕರ ನೇಮಕಾತಿಗೆ ಹೊರಡಿಸಿರುವ ಆದೇಶದಲ್ಲಿ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ40, ಒಬಿಸಿಗೆ 43, ಎಸ್‌ಸಿ-ಎಸ್‌ಟಿ ಹಾಗೂ ಪ್ರವರ್ಗ-1ಕ್ಕೆ 45 ವರ್ಷ ನಿಗದಿಪಡಿಸಿ - ಅನ್ಯಾಯ ಮಾಡಿ ಪದವೀಧರ ಶಿಕ್ಷಕ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಡಲಿಪೆಟ್ಟು ಕೊಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸರಕಾರ ಡಿಪಿಆರ್‌ಇಲಾಖೆ ಕಳೆದ ಮಾ.29ರಂದು - ವಿಶೇಷರಾಜ್ಯ ಪತ್ರಿಕೆಹೊರಡಿಸಿ31-12-2027ರವರೆಗೆ ನಡೆಯಲಿರುವ ನೇರ ನೇಮಕಾತಿಗಳಿಗೆ 5 ವರ್ಷ ಸಡಿಲಿಕೆ ನೀಡಿ ಆದೇಶ ಹೊರಡಿಸಿತ್ತು. ಸರಕಾರದ ಈ ಆದೇಶವನ್ನು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಪರಿಗಣನೆಗೆ ತೆಗೆದುಕೊಳ್ಳದೆ ತಪ್ಪು ನಿರ್ಧಾರ ಕೈಗೊಂಡಿದ್ದು ಡಿಪಿಆರ್ ಆದೇಶಉಲ್ಲಂಘನೆಮಾಡಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಘ ಕಳೆದ ಜುಲೈ 10 ರಂದು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಡಿಪಿಆರ್ ಇಲಾಖೆ ನಿಯಮದಂತೆ 5 ವರ್ಷ ಹೆಚ್ಚಿಸಿ ಸಾಮಾನ್ಯ ವರ್ಗಕ್ಕೆ 45 ಒಬಿಸಿಗೆ 48 ಎಸ್‌ಸಿ/ಎಸ್‌ಟಿ ಹಾಗೂ ಪ್ರವರ್ಗ-1 ಕ್ಕೆ 50 ವರ್ಷ ನಿಗದಿಪಡಿಸಿರುವರು. ಅದರಂತೆ ಶಿಕ್ಷಣ ಇಲಾಖೆ ಕೂಡ ವಯೋಮಿತಿಗೆ ಸಂಬಂಧಿಸಿದಂತೆ ಮಾಡಿರುವ ತಪ್ಪನ್ನು ತಕ್ಷಣ ಸರಿಪಡಿಸಿ ಸದ್ಯ ಹೊರಡಿಸಿರುವ ಅಧಿಸೂಚನೆಗೆ ತಿದ್ದುಪಡಿ ಪತ್ರ ಹೊರಡಿಸಬೇಕು. ಲೋಪದೋಷ ಸರಿಪಡಿಸದಿದ್ದರೆ ಪದವೀಧರ ಶಿಕ್ಷಕ ಆಕಾಂಕ್ಷಿಗಳು ಬೀದಿಗಿಳಿದು ಹೋರಾಟ ಮಾಡುವ ಸನ್ನಿವೇಶ ನಿರ್ಮಾಣ ಆಗಲಿದೆ ಎಂದು ಸರಕಾರಕ್ಕೆ ಎಚ್ಚರಿಸಿದ್ದಾರೆ.

