ವಿದ್ಯಾನಗರದಲ್ಲಿ ಬಬಲಾದ ಶ್ರೀ ಗುರುವೀರೇಶ್ವರರ ಪುರಾಣ ಪ್ರವಚನ
ವಿದ್ಯಾನಗರದಲ್ಲಿ ಬಬಲಾದ ಶ್ರೀ ಗುರುವೀರೇಶ್ವರರ ಪುರಾಣ ಪ್ರವಚನ
ನಗರದ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆಯ ಎದುರುಗಡೆ ಇರುವ ವಿದ್ಯಾನಗರ ಕಾಲೋನಿ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ವಿದ್ಯಾನಗರ ವೆಲ್ಫೇರ್ ಸೊಸೈಟಿ ವತಿಯಿಂದ ಈ ವರ್ಷದ ಶ್ರಾವಣ ಮಾಸದ ನಿಮಿತ್ಯ ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆಯ ಹಾಗೂ ತಾಲೂಕಿನ ಚಿಕ್ಕ ಹಳ್ಳಿ ಬಬಲಾದ ಮುತ್ಯಾನ ಬಬಲಾದವೆಂದೇ ದೊಡ್ಡ ಹೆಸರು ಮಾಡಿರುವ ಶ್ರೀ ಗುರು ಚನ್ನವೀರೇಶ್ವರರ ಪುರಾಣ ಪ್ರವಚನ ನಡೆಸಬೇಕೆಂದು ಜುಲೈ ೨೬ ರಂದು ನಡೆದ ಸೊಸೈಟಿ ಸರ್ವ ಸದಸ್ಯರ ಪುರಾಣ ಪೂರ್ವ ಭಾವಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತೆಂದು ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆ ಹಾಗೂ ತಾಲೂಕಿನ ಚಿಕ್ಕಹಳ್ಳಿ ಬಬಲಾದ ಮುತ್ಯಾನ ಬಬಲಾದವೆಂದೆ ಹೆಸರು ಮಾಡಿರುವ ಗುರು ಚನ್ನವೀರೇಶ್ವರ ಸ್ವಾಮಿಗಳು ಈ ಭಾಗದಲ್ಲಿ ಸ್ವಾಮಿ, ಶಿವಯೋಗಿ ಪದಗಳಿಂತ ಜನತೆಗೆ ಪ್ರಿಯಾವಾದದ್ದು ಮುತ್ಯಾ ಚನ್ನವೀರ ಎಂಬ ಹೆಸರು ಸ್ಮರಣಿಯವಾಗಿದೆ.
ಚನ್ನವೀರ ಮುತ್ಯಾ ಅವರು ದೇವಿಯ ಆರಾಧಕರು ಅಲ್ಲ್ಲಲ್ಲಿ ದೇವಿಯ ಪುರಾಣ ಪ್ರವಚನ ಮಾಡಿಸಿ ಜನಮನಕ್ಕೆ ದೇಹಾತ್ಮ ವಿಜ್ಞಾನವನ್ನು ತಿಳಿಸಿಕೊಟ್ಟು ಮುತ್ತೈದೆಯರ ಪೂಜೆ ಮಾಡಿ ನಾರಿ ಮಣಿಯರು ನಾಡಿನ ಮಹಾದೇವ ಚೇತನವೆಂಬ ತತ್ವವನ್ನು ಬಿಂಬಿಸಿ ಪಾರ್ವತಿಯ ಸ್ವರೂಪವನ್ನು ಕಂಡು ತಾಯಂದಿರಲ್ಲಿ ಮಾತೃತ್ವ ಭಾವ ಬೆಳಸುತ್ತಾ ದೈವಿಶಕ್ತಿಯನ್ನು ಸಂಪಾದಿಸಿದ ಶ್ರೀ ಚನ್ನವೀರ ಸ್ವಾಮಿಗಳು ನೊಂದು ಬೆಂದು ಬಳಲಿ ಬಂದವರ ದುಃಖ-ದುಮ್ಮಾನಗಳನ್ನು ದೂರು ಮಾಡುವ ಶ್ರೀ ಗುರು ಚನ್ನವೀರೇಶ್ವರರ ಪುರಾಣ ಪ್ರವಚನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಪುರಾಣ ಪ್ರವಚನಕಾರರಾದ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಶ್ರೀ ವೇ.ಮೂ. ವೀರಯ್ಯ ಶಾಸ್ತ್ರೀಗಳು ಗದಗ ಪುರಾಣ ಪ್ರವಚನ ಮಾಡಲಿದ್ದಾರೆ. ಶ್ರೀ ಶಿವಕುಮಾರ ಎಂ. ಹಿರೇಮಠ ಜಾಲಹಳ್ಳಿ ಇವರು ಸಂಗೀತ ಹಾಗೂ ಗಾಯನ ಮಾಡಲಿದ್ದಾರೆ. ಶ್ರೀ ಅಡಿವೇಶಕುಮಾರ ಗೋಕಾಕ ಗದಗ ಇವರು ತಬಲಾ ಸಾಥ್ ನೀಡಲಿದ್ದಾರೆ.
ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದರು ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ, ಆಡಳಿತ ಮಂಡಳಿ ಸದಸ್ಯರಾದ ಉಮೇಶ ಶೆಟ್ಟಿ, ಬಿ. ಎನ್. ಪುಣ್ಯಶೆಟ್ಟಿ, ಬಸವಂತರಾವ ಜಾಬಶೆಟ್ಟಿ, ಸುಭಾಷ ಮಂಠಾಳೆ, ಮಲ್ಲಿಕಾರ್ಜುನ ಕಾಳೆ, ಕಾಶಿನಾಥ ಚಿನ್ಮಳ್ಳಿ, ಶ್ರೀಮಂತರಾವ ರಾಜಾಪೂರ, ಆದಪ್ಪ ಸಿಕೇದ್, ನಾಗರಾಜ ಹೆಬ್ಬಾಳ, ಸದಾಶಿವ ಕಂಠಿ, ಶಾಂತಯ್ಯ ಬೀದಿಮನಿ, ಆದಿಲಿಂಗಯ್ಯ ಕೊಡಳ್ಳಿ, ಸಂಗಮೇಶ ದಿವಟಗಿ, ನಾಗಭೂಷಣ ಹಿಂದೊಡ್ಡಿ, ನಾಗರಾಜ ಮುಗಳಿ, ವೀರೇಶ ನಾಗಶೆಟ್ಟಿ, ಉದಯಕುಮಾರ ಪಡಶೆಟ್ಟಿ, ರಮೇಶ ದಸ್ಮಾ, ಮಲ್ಲಿಕಾರ್ಜುನ ಸಿಂದಗಿ, ಶಾಂತಯ್ಯ ಬೀದಿಮನಿ, ರೇವಣಸಿದ್ದಪ್ಪ ಜೀವಣಗಿ, ತರುಣಶೇಖರ ಬಿರಾದಾರ, ಶರಣಯ್ಯ ಸ್ವಾಮಿ ಮಠಪತಿ ಇನ್ನೀತರರು ಉಪಸ್ಥಿತರಿದ್ದರು.

