ಶಾಂತಿ-ಸೌಹಾರ್ದತೆಯಿಂದ ಮೊಹರಂ ಆಚರಿಸಿ: ಪಿಎಸ್‌ಐ ಐಶ್ವರ್ಯ ನಾಗರಾಳ

ಶಾಂತಿ-ಸೌಹಾರ್ದತೆಯಿಂದ ಮೊಹರಂ ಆಚರಿಸಿ: ಪಿಎಸ್‌ಐ ಐಶ್ವರ್ಯ ನಾಗರಾಳ

ಶಾಂತಿ-ಸೌಹಾರ್ದತೆಯಿಂದ ಮೊಹರಂ ಆಚರಿಸಿ: ಪಿಎಸ್‌ಐ ಐಶ್ವರ್ಯ ನಾಗರಾಳ

ಕಲ್ಯಾಣ ಕಹಳೆ ಗದಗ. ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಕಾರಣಕ್ಕೂ ದುರ್ಘಟನೆಗಳಿಗೆ ಅವಕಾಶ ನೀಡಬಾರದು. ಅಹಿತಕರ ಘಟನೆಗಳು ನಡೆದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ವಿಜಯಕುಮಾರ ಎಚ್ಚರಿಕೆ ನೀಡಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಬ್ಬಗಳ ಆಚರಣೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದರೆ ಹಬ್ಬಗಳ ಮೇಲೆಯೇ ನಿರ್ಬಂಧ ಹೇರುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಶಾಂತಿ, ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ತಮ್ಮ ತಮ್ಮ ಓಣಿಗಳಲ್ಲಿ ಯುವಕರು ಹಾಗೂ ಸಮಾಜದ ಮುಖಂಡರಿಗೆ ತಿಳಿಸಿ, ಹಬ್ಬವನ್ನು ಶಾಂತಿಯುತವಾಗಿ ನಡೆಸಲು ಸಹಕರಿಸಬೇಕು ಎಂದು ಮನವಿ ಮಾಡಿದರು. 

 "ಮೊಹರಂ ಹಬ್ಬವು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಸಂದೇಶ ಸಾರುವ ಪವಿತ್ರ ಆಚರಣೆಯಾಗಿದೆ. ಹಬ್ಬದ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ಗೌರವ, ಸಹಕಾರ ಮತ್ತು ಸಂಯಮದಿಂದ ನಡೆದುಕೊಂಡು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಯುವಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದರೆ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ಆಚರಿಸಲು ಸಾಧ್ಯವಾಗುತ್ತದೆ" ಎಂದು ಪಿಎಸ್‌ಐ ಕುಮಾರಿ ಐಶ್ವರ್ಯ ನಾಗರಾಳ ಹೇಳಿದರು.

ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಮಾತನಾಡಿ, ನರೇಗಲ್ಲ ಹೋಬಳಿಯಲ್ಲಿ ಎಲ್ಲ ಸಮುದಾಯದ ಜನರು ಪರಸ್ಪರ ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಮಾರನಬಸರಿ ಹಾಗೂ ಹಾಲಕೆರೆಯಲ್ಲಿ ಮೊಹರಂ ಹಬ್ಬವು ವಿಶೇಷ ವೈಶಿಷ್ಟ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಾಚಾರ್ಯ ಶಿವಾನಂದ ಗೋಗೇರಿ ಮಾತನಾಡಿ, ಯುವ ಪೀಳಿಗೆಗೆ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪರಿಚಯಿಸುವ

ಉದ್ದೇಶದಿಂದ ಹಬ್ಬಗಳ ಆಚರಣೆ ರೂಪುಗೊಂಡಿವೆ. ಹಬ್ಬಗಳ ಸಂದರ್ಭದಲ್ಲಿ ಹಾಡುವ ಜನಪದ ಹಾಗೂ ಸಾಂಸ್ಕೃತಿಕ ಹಾಡುಗಳಲ್ಲಿ ಬದುಕಿನ ಮೌಲ್ಯಗಳು ಅಡಕವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಹಾಡುಗಳನ್ನು ಹಾಡುವವರ ಸಂ-ಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಸಭೆಯಲ್ಲಿ ಎ.ಎ. ನವಲಗುಂದ, ಮರಿಯಪ್ಪ ಈಟಿ ಸೇರಿದಂತೆ ಹಲವರು ಮಾತನಾಡಿದರು. ಫಕ್ರುಸಾಬ ರೇವಡಿಗಾರ, ಡಿ.ಎಂ. ಹವಾಲ್ದಾರ, ರೆಹಮಾನಸಾಬ ಹೊಸಮನಿ, ರಹಮಾನಸಾಬ ಬಾಗವಾನ, ಕಾಶೀಮಸಾಬ ಗಡಾದ, ಅಬ್ದುಲ್ ಅತ್ತಾರ, ಮಾಬುಸಾಬ ಬೆಟಗೇರಿ, ಜಾಕೀರಬುಡ್ಡಾ, ಸೋಮಪ್ಪ ಹನುಮಸಾಗರ, ಉಮೇಶ ಪಾದಗಟ್ಟಿ, ಮಹಮ್ಮದ್ ರಫೀಕ್ ಹಿರೇಮನಿ, ಪಿ.ಪಿ. ಹೂಗಾರ, ಎ.ಎಂ. ರಾಹುತ, ವೈ.ಎಸ್. ನವಲಗುಂದ, ದಾದೇಸಾಬ ಬಿನ್ನಾಳ, ಉಮೇಶಗೌಡ ಪಾಟೀಲ, ನಿಂಗಪ್ಪ ಹೊನ್ನಾಪೂರ, ಹನುಮಂತಪ್ಪ ದ್ವಾಸಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

*ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ*