ರಾಷ್ಟ್ರೀಯ ವಕೀಲರ ಸಮ್ಮೇಳನದಿಂದ ಮರಳಿದ ನ್ಯಾಯವಾದಿಗಳಿಗೆ ಆತ್ಮೀಯ ಸ್ವಾಗತ

ರಾಷ್ಟ್ರೀಯ ವಕೀಲರ ಸಮ್ಮೇಳನದಿಂದ ಮರಳಿದ ನ್ಯಾಯವಾದಿಗಳಿಗೆ ಆತ್ಮೀಯ ಸ್ವಾಗತ

ರಾಷ್ಟ್ರೀಯ ವಕೀಲರ ಸಮ್ಮೇಳನದಿಂದ ಮರಳಿದ ನ್ಯಾಯವಾದಿಗಳಿಗೆ ಆತ್ಮೀಯ ಸ್ವಾಗತ

ಕಲಬುರಗಿ: ಓಂ ಶಾಂತಿ ಆಧ್ಯಾತ್ಮಿಕ ಸೇವಾ ಸಮಿತಿಯ ವಕೀಲರ ಸಂಚಾಲಕರಾಗಿರುವ, ವಕೀಲರ ವಲಯದಲ್ಲಿ "ಓಂ ಬಾಬಾ" ಎಂದೇ ಖ್ಯಾತರಾಗಿರುವ ಹಾಗೂ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ವೀರಭದ್ರಪ್ಪ ಪಾಟೀಲ ಅವರ ನೇತೃತ್ವದಲ್ಲಿ ರಾಷ್ಟ್ರೀಯ ವಕೀಲರ ಸಮ್ಮೇಳನದಲ್ಲಿ ಭಾಗವಹಿಸಿ ಮರಳಿದ ಮಲ್ಲಿಕಾರ್ಜುನ ಪಾಟೀಲ, ಲಿಂಗಣ್ಣಗೌಡ ಪಾಟೀಲ, ಸಂಘನಗೌಡ ಪಾಟೀಲ, ಬಸನಗೌಡ ಹುನಗುಂದ, ಸಂಗಣ್ಣ ಬಾದವಾಡಗಿ, ಶಿವಶರಣಪ್ಪ ಮನ್ನಳ್ಳಿ, ನಾಗರಾಜ ತಡಕಲ್, ವಿಜಯಕುಮಾರ ಟೋನಪೆ, ಸುನೀಲ್ ಚಿಟಗುಪಿಕರ ಸೇರಿದಂತೆ ಹಲವರು ಭಾಗವಹಿಸಿದ್ದಾರೆ ಎಂದು ನ್ಯಾಯವಾದಿ ವಿನೋದಕುಮಾರ ಜೆನವೇರಿ ತಿಳಿಸಿದ್ದರು, ಇಂದು ನ್ಯಾಯವಾದಿಗಳಿಗೆ ಕಲಬುರಗಿ ವಕೀಲರ ಬಳಗದ ವತಿಯಿಂದ ಆತ್ಮೀಯ ಸ್ವಾಗತ ಕೋರಲಾಯಿತು.

ಜೂನ್ 4ರಂದು ಮುಂಜಾನೆ 4 ಗಂಟೆಗೆ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಹೀರಾಪುರ ಬಡಾವಣೆಯ ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ನ್ಯಾಯಪರ ಹೋರಾಟಗಾರ ಸಂಜೀವಕುಮಾರ ಡೊಂಗರಗಾಂವ್ ಅವರು ವಕೀಲರ ತಂಡವನ್ನು ಹೃತ್ಪೂರ್ವಕವಾಗಿ ಬರಮಾಡಿಕೊಂಡರು. ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ, ದ್ವಾರಕಾ ಮತ್ತು ಸೋಮನಾಥ ಎಂಬ ಎರಡು ಪವಿತ್ರ ಕ್ಷೇತ್ರಗಳ ದರ್ಶನ ಪಡೆದು, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಅನುಭವಗಳೊಂದಿಗೆ ಮರಳಿದ ನ್ಯಾಯವಾದಿಗಳಿಗೆ ಗುಲಾಬಿ ಹೂವು ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಜೀವಕುಮಾರ ಡೊಂಗರಗಾಂವ್ ಅವರು, ಕಳೆದ ಎರಡು ದಶಕಗಳಿಂದ ಓಂ ಶಾಂತಿ ಸಂಸ್ಥೆಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ವೀರಭದ್ರಪ್ಪ ಪಾಟೀಲ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜಸ್ಥಾನದ ಮೌಂಟ್ ಅಬುವಿನ ಪ್ರಕೃತಿ ಸೌಂದರ್ಯ, ಆಧ್ಯಾತ್ಮಿಕ ವಾತಾವರಣ, ಜ್ಞಾನವರ್ಧಕ ಸಾಹಿತ್ಯ ಅಧ್ಯಯನ, ದೇಶದ ವಿವಿಧ ಭಾಗಗಳ ಸಂಚಾರ ಹಾಗೂ ಸಮುದ್ರ ತೀರದಲ್ಲಿರುವ ದ್ವಾರಕಾ ಮತ್ತು ಸೋಮನಾಥ ಕ್ಷೇತ್ರಗಳ ದರ್ಶನವು ಜೀವನದಲ್ಲಿ ಅಪರೂಪದ ಅನುಭವ ನೀಡುತ್ತದೆ. ಅಲ್ಲದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮಸ್ಥಳ ವೀಕ್ಷಣೆ ಮಾಡುವ ಮೂಲಕ ಇತಿಹಾಸ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕುರಿತು ಹೆಚ್ಚಿನ ಅರಿವು ಪಡೆದಿರುವ ನೀವು ನಿಜಕ್ಕೂ ಭಾಗ್ಯವಂತರು ಎಂದು ಹೇಳಿದರು.

ಸಮ್ಮೇಳನದಲ್ಲಿ ಪಾಲ್ಗೊಂಡ ನ್ಯಾಯವಾದಿಗಳು ರಾಷ್ಟ್ರೀಯ ಮಟ್ಟದ ವಿಚಾರ ವಿನಿಮಯ, ಕಾನೂನು ಜಾಗೃತಿ, ಆಧ್ಯಾತ್ಮಿಕ ಮೌಲ್ಯಗಳು ಹಾಗೂ ಸಾಮಾಜಿಕ ಸೇವೆಯ ಮಹತ್ವದ ಕುರಿತು ಅಮೂಲ್ಯ ಜ್ಞಾನವನ್ನು ಸಂಪಾದಿಸಿದ್ದು, ಈ ಅನುಭವಗಳು ಅವರ ವೃತ್ತಿ ಮತ್ತು ವೈಯಕ್ತಿಕ ಜೀವನಕ್ಕೆ ಮಾರ್ಗದರ್ಶಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಓಂ ಶಾಂತಿ ಸಂಸ್ಥೆಯ ಪದಾಧಿಕಾರಿಗಳು, ವಕೀಲರ ಬಳಗದ ಸದಸ್ಯರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.