ಬುದ್ಧ-ಬಸವ-ಅಂಬೇಡ್ಕರ್ ಜಯಂತ್ಯೋತ್ಸವ ಕರಪತ್ರ ಬಿಡುಗಡೆ

ಬುದ್ಧ-ಬಸವ-ಅಂಬೇಡ್ಕರ್ ಜಯಂತ್ಯೋತ್ಸವ ಕರಪತ್ರ ಬಿಡುಗಡೆ

ಬುದ್ಧ-ಬಸವ-ಅಂಬೇಡ್ಕರ್ ಜಯಂತ್ಯೋತ್ಸವ ಕರಪತ್ರ ಬಿಡುಗಡೆ

ಕಲಬುರಗಿ: ಆರ್‌ಪಿಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಶ್ರೀ ರಾಮದಾಸ್ ಅಠವಲೆ ಅವರು ಇದೇ ತಿಂಗಳ ೨೫ರಂದು ಕಲಬುರಗಿ ನಗರಕ್ಕೆ ಆಗಮಿಸಿ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯೋತ್ಸವ ಕಾರ್ಯಕ್ರಮ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ನನ್ನ ಅಂಬೇಡ್ಕರ್ ನಾಟಕ ಪ್ರದರ್ಶನದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ಕರಪತ್ರ ಬಿಡುಗಡೆ ಸಮಾರಂಭ ಗುರುವಾರ ಬೆಳಗ್ಗೆ ಜಗತ್ ವೃತ್ತದ ಸಮೀಪದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ನೆರವೇರಿತು.

ಹಿರಿಯ ದಲಿತ ಮುಖಂಡ ದೇವೇಂದ್ರ ಶೆಳ್ಳಗಿ ಅವರು ಕರಪತ್ರ ಬಿಡುಗಡೆ ಮಾಡಿ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪವಾಗಿದ್ದು, ಸಮಾನತೆ, ಸಹೋದರತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಜನರಿಗೆ ತಲುಪಿಸುವ ಇಂತಹ ಕಾರ್ಯಕ್ರಮಗಳು ಸಮಾಜಮುಖಿ ಚಿಂತನೆಗೆ ಪ್ರೇರಣೆಯಾಗಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಭಾರತ ಪ್ರಧಾನ ಕಾರ್ಯದರ್ಶಿ ಎ.ಬಿ. ಹೊಸಮನಿ, ಮಿಲಿಂದ್ ಕಣ್ಮುಸ್, ರೇವಣಸಿದ್ದಪ್ಪ ಹುಳಿಪಲ್ಲೆ, ಶಿವಲಿಂಗ ಹತಗುಂದಿ, ಮಹಾಂತೇಶ್ ಹೂವಿನಳ್ಳಿ, ಅಮೃತ್ ಬಂಡೆ, ಮಹಾದೇವ ಅನವಾರ್ಕರ್, ಶಂಕರ್ ಕೊರವಿ, ಹಣಮಂತಪ್ಪ ಗಾರಂಪಳ್ಳಿ, ಹಣಮಂತ ಗುಡಿಮನಿ, ಪೀರಪ್ಪ ಹಾದಿಮನಿ, ಶಾಮ್ ಸಿಂಗ್ ಕಾಳೆ, ಸೂರ್ಯಕಾಂತ್ ಹಾಗರಗಿ, ಶ್ರೀಮತಿ ಶ್ರೀದೇವಿ, ಶರಣಬಸವ ಚಂದನಕೇರಾ, ಅನಿಲ್ ಕುಮಾರ್ ದೇವರಮನಿ, ಮಲ್ಲಿಕಾರ್ಜುನ್ ಭಾವಿಕಟ್ಟಿ, ಶಿವಾನಂದ ಪಾಟೀಲ್, ರಾಹುಲ್ ಹಾಗರಗಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಬುದ್ಧ-ಬಸವ-ಅಂಬೇಡ್ಕರ್ ಜಯಂತ್ಯೋತ್ಸವ ಹಾಗೂ ನನ್ನ ಅಂಬೇಡ್ಕರ್ ನಾಟಕ ಪ್ರದರ್ಶನವು ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.