ವೈಜನಾಥ ಪಾಟೀಲರ 7ನೇ ಪುಣ್ಯಸ್ಮರಣೆ: ರೈತರ ಹೋರಾಟಕ್ಕೆ ಬೆಂಬಲ

ವೈಜನಾಥ ಪಾಟೀಲರ 7ನೇ ಪುಣ್ಯಸ್ಮರಣೆ: ರೈತರ ಹೋರಾಟಕ್ಕೆ ಬೆಂಬಲ

ವೈಜನಾಥ ಪಾಟೀಲರ 7ನೇ ಪುಣ್ಯಸ್ಮರಣೆ: ರೈತರ ಹೋರಾಟಕ್ಕೆ ಬೆಂಬಲ

ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ, ಪ್ರತ್ಯೇಕ ಹೈದರಾಬಾದ್ ಕರ್ನಾಟಕ ರಾಜ್ಯದ ಹೋರಾಟದ ಹರಿಕಾರ ದಿವಂಗತ ವೈಜನಾಥ ಪಾಟೀಲ ಅವರ 7ನೇ ಪುಣ್ಯಸ್ಮರಣೆ ದಿನವನ್ನು 2.11.26 ರಂದು ಮಾಡಲಾಯಿತು.

ನಗರದ ರಾಮ ಮಂದಿರದ ಪಕ್ಕದಲ್ಲಿರುವ ವಾಲ್ಮೀಕಿ ಚೌಕ್ ಸಮೀಪ ಸೋಮವಾರ ಸಂಜೆ 7 ಗಂಟೆಗೆ ನಡೆಯುತ್ತಿರುವ ರೈತರ ಕಬ್ಬಿನ ಬೆಂಬಲ ಬೆಲೆ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಸಂವಿಧಾನದ ಅನುಚ್ಯದ 171(3) ತಿದ್ದುಪಡಿ ಜಾಗೃತಿ ಹೋರಾಟ ಸಮಿತಿ, ಪ್ರಧಾನ ಕಾರ್ಯದರ್ಶಿ ಹಾಗೂ ಗೆಳೆಯರ ಬಳಗದ ವತಿಯಿಂದ ವೈಜನಾಥ ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.

ವಿನೋದ ಕುಮಾರ ಜೆನವೇರಿ ಮಾತನಾಡಿದರು ವೈಜನಾಥ ಪಾಟೀಲ ಅವರು ಕಲ್ಯಾಣ ಕರ್ನಾಟಕದ ಹಕ್ಕುಗಳಿಗಾಗಿ ನಡೆಸಿದ ಹೋರಾಟ, 371(ಜೆ) ಅನುಷ್ಠಾನಕ್ಕೆ ನೀಡಿದ ಕೊಡುಗೆ ಸ್ಮಮರಿಸಿದರು.

ಈ ಭಾಗದ ರೈತರು, ಯುವಕರು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳಿಗೆ ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳು ದೊರೆಯಬೇಕಾದರೆ ಹೋರಾಟದ ಮನೋಭಾವ ನಿರಂತರವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಎಂ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು , ಹೋರಾಟದ ಹಿನ್ನೆಲೆ, ಉದ್ದೇಶ ಹಾಗೂ ಮುಂದಿನ ಹೋರಾಟದ ಹೆಜ್ಜೆಗಳ ಕುರಿತು ವಿವರಿಸಿದರು.

ಸಾಹಿತಿ ಚಿ.ಸಿ. ಲಿಂಗಣ್ಣ ಮಾತನಾಡುತ್ತಾ, ವೈಜನಾಥ ಪಾಟೀಲ ಅವರೊಂದಿಗಿನ ವಿದ್ಯಾರ್ಥಿ ಜೀವನದ ಒಡನಾಟ ಹಾಗೂ ಅವರೊಂದಿಗೆ ಎರಡು ಬಾರಿ ಜೈಲು ವಾಸ ಅನುಭವಿಸಿದ ಘಟನೆಗಳನ್ನು ಸ್ಮರಿಸಿ, ಅವರ ಹೋರಾಟದ ಬದುಕಿನ ಅನುಭವಗಳನ್ನು ಹಂಚಿಕೊಂಡರು.

ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಸಿದ್ದು ಹಿರೇಮಠ ಸ್ವಾಗತಿಸಿದರು. ರೈತ ಸಂಘದ ಮುಖಂಡರು ವಂದಿಸಿದರು