ವಕೀಲರ ಕೊಲೆ ಖಂಡಿಸಿ : ವಕೀಲರ ಸಂಘ ಪ್ರತಿಭಟನೆ ವಕೀಲರ ರಕ್ಷಣೆಗೆ ಕಾಯ್ದೆ ಜಾರಿಗೊಳಿಸಿ : ಸರಕಾರಕ್ಕೆ ಸಂಘ ಆಗ್ರಹ

ವಕೀಲರ ಕೊಲೆ ಖಂಡಿಸಿ : ವಕೀಲರ ಸಂಘ ಪ್ರತಿಭಟನೆ   ವಕೀಲರ ರಕ್ಷಣೆಗೆ ಕಾಯ್ದೆ ಜಾರಿಗೊಳಿಸಿ : ಸರಕಾರಕ್ಕೆ ಸಂಘ ಆಗ್ರಹ

ವಕೀಲರ ಕೊಲೆ ಖಂಡಿಸಿ : ವಕೀಲರ ಸಂಘ ಪ್ರತಿಭಟನೆ 

 ವಕೀಲರ ರಕ್ಷಣೆಗೆ ಕಾಯ್ದೆ ಜಾರಿಗೊಳಿಸಿ : ಸರಕಾರಕ್ಕೆ ಸಂಘ ಆಗ್ರಹ 

ಚಿಂಚೋಳಿ : ಬೆಂಗಳೂರಿನ ವೈಟ್ ಫಿಲ್ಡ್ ವಕೀಲರಾದ ಮಂಜುನಾಥ, ಅನ್ನಪೂರ್ಣೇಶ್ವರಿ ನಗರದ ವಕೀಲ ಶ್ರೀರಾಮ್ ರವರ ಬರ್ಬರ ಹತ್ಯೆಯನ್ನು ಖಂಡಿಸಿ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕ್ಕಿ ಅವರ ಮೇಲೆ ನಡೆದ ಕೊಲೆಯತ್ನ ಘಟನೆಯನ್ನು ಖಂಡಿಸಿ ಚಿಂಚೋಳಿ ತಾಲೂಕ ವಕೀಲರ ಸಂಘ ಒಂದು ದಿನದ ನ್ಯಾಯಾಲಯದ ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ನ್ಯಾಯಾಲಯದ ಎದುರುಗಡೆಯ ಬೀದರ್ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿ ಖಂಡಿಸಿತು.

ಬಳಿಕ ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಆಡಕಿ ಮಾತನಾಡಿ, ರಾಜ್ಯದ ವೃತ್ತಿಪರ ವಕೀಲರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ. ಆದರೆ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಗಳಿಗೆ ತಡೆಗಟ್ಟುವ ಕ್ರಮಗಳು ಕೈಗೊಳ್ಳುವಲಿ ಸರಕಾರಗಳು ವಿಫಲವಾಗುತ್ತಿವೆ. ಇದ್ದರಿಂದ ವಕೀಲರು ನಿರ್ಭತವಾಗಿ ಮತ್ತು ಸುರಕ್ಷಿತವಾಗಿ ವೃತ್ತಿ ನಡೆಸಲು ವಕೀಲರಿಗೆ ಅಗತ್ಯವಾದ ಭದ್ರತೆ ಕೊರತೆ ಉಂಟಾಗಿದೆ. ಸರಕಾರಗಳು ವಕೀಲರ ರಕ್ಷಣೆ ಕಾಯ್ದೆಗೆ ಮತ್ತಷ್ಟು ಬಲಪಡಿಸುವ ಕಾನೂನು ಕಾಯ್ದೆಗಳು ಜಾರಿಗೆ ತರಬೇಕೆಂದು ಒತ್ತಾಯಿಸಿದರು. 

ಇದೇ ವೇಳೆ ಸಂಘದ ಮಾಜಿ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಚಂದ್ರಕಾಂತ ಮಲಸಾ ದೇಗಲ್ಮಡಿ, ನರೇಂದ್ರ ಛಲವಾದಿ ಮತ್ತು ದಿನೇಶ ಚವ್ಹಾಣ ಹಾಗೂ ಹಿರಿಯ ವಕೀಲ ವಿಶ್ವನಾಥ ಬೆನಕಿನ್ ಮಾತನಾಡಿ,

ವೃತ್ತಿಪರ ವಕೀಲರ ಮೇಲೆ ಹಲ್ಲೆ ಯತ್ನ, ಕೊಲೆಗಳನ್ನು ಖಂಡಿಸಿ ಕರ್ನಾಟಕ ರಾಜ್ಯದ್ಯಾಂತ ಒಂದು ದಿನದ ಮಟ್ಟಿಗೆ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಬಹಿಷ್ಕರಿಸಿ ದೂರ ಉಳಿಯಲಾಗಿದ್ದು, ವಕೀಲರ ಮೇಲೆ ನಡೆದಂತಹ ಹಲ್ಲೆಗೆ ಸಂಬಂಧಿಸಿದ ಆರೋಪಿಗಳಿಗೆ ಕಠಿಣವಾದ ಶಿಕ್ಷೆಗೆ ಗುರಿಪಡಿಸಿ ವಕೀಕಲರ ರಕ್ಷಣೆಗೆ ಸರಕಾರ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರ ಮೂಲಕ ರಾಜ್ಯಪಾಲರಿಗೆ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದರು.

 ಸಮಾಜದ ಹಿರಿಯ ಮುಖಂಡರುಗಳಾದ ಗೋಪಾಲರಾವ ಕಟ್ಟಿಮನಿ, ಕೆ. ಎಂ. ಬಾರಿ, ಹಣಮಂತ ಪೂಜಾರಿ, ಭೀಮಶೆಟ್ಟಿ ಮುರುಡಾ ಅವರು ಪ್ರತಿಭಟನೆಗೆ ಬೆಂಬಲ ನೀಡಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಸೂರ್ಯಕಾಂತ ಕರಣಿಕರ, ಖಜಾಂಚಿ ಪ್ರವೀಣಕುಮಾರ ನಮಲಿಕರ್, ಸದಸ್ಯರುಗಳಾದ ಶ್ರೀನಿವಾಸ್ ಬಂಡಿ, ಚಂದ್ರಶೆಟ್ಟಿ ಜಾಧವ್, ರಾಜೇಂದ್ರ ವರ್ಮಾ, ದಿನೇಶ ಚವ್ಹಾಣ, ವಿಜಯಕುಮಾರ ರಾಠೋಡ್, ಸಂಜೀವಕುಮಾರ ಎಸ್ ಮೇತ್ರಿ, ವಸಂತಕುಮಾರ ರಾಠೋಡ್, ಶಂಕರ ರಾಠೋಡ್, ನೀಲಕಂಠ ರಾಠೋಡ್, ಸೂರ್ಯಕಾಂತ ಗಾರಂಪಳ್ಳಿ, ಸಾವನ್ ಕಲಬುರಗಿ ಅವರು ಉಪಸ್ಥಿತರಿದ್ದರು.